ಹುಬ್ಬಳ್ಳಿ : ಅತ್ಯಾಚಾರ ಪ್ರಕರಣಕ್ಕೆ (Rape Case) ಸಂಬಂಧಿಸಿ ಹುಬ್ಬಳ್ಳಿ ಪೊಲೀಸರು (Hubballi Police) ಮುಫ್ತಿಯೋರ್ವನನ್ನು ಬಂಧಿಸಿದ್ದಾರೆ. ಮಧ್ಯಪ್ರದೇಶದಲ್ಲಿ (Madhya Pradesh) ಅಡಗಿ ಕುಳಿತಿದ್ದವನನ್ನು ಬಂಧಿಸಲಾಗಿದೆ. ಮಧ್ಯಪ್ರದೇಶದ ಖಂಡ್ವಾ ಎಂಬಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು (Accused) ಹುಬ್ಬಳ್ಳಿ ಪೊಲೀಸರು ಗುಲಾಮ ಜಿಲಾನಿ ಅಜಹರಿಯನ್ನು ಬಂಧಿಸಿದ್ದಾರೆ. ಗುಲಾಮ್ ಜಿಲಾನಿಯನ್ನು ಬಂಧಿಸಿ ಹುಬ್ಬಳ್ಳಿಗೆ ಕರೆತರುತ್ತಿರೋದಾಗಿ ಕಾನೂನು ಸುವ್ಯವಸ್ಥೆ ಡಿಸಿಪಿ ಎಂ.ರಾಜೀವ್ (DCP P RaJeev) ಮಾಹಿತಿ ನೀಡಿದ್ದಾರೆ.
ಮತ್ತು ಬರುವ ಔಷಧಿ ಕೊಟ್ಟು ಬಲಾತ್ಕಾರ
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಪೂಲೀಸರು, ಮಧ್ಯಪ್ರದೇಶದಲ್ಲಿ ಅಡಗಿ ಕುಳಿತಿದ್ದ ದೇಶದ ಖ್ಯಾತ ಮುಫ್ತಿಯೊಬ್ಬನನ್ನು ಬಂಧಿಸಿದ್ದಾರೆ. ಗುಲಾಮ ಜಿಲಾನಿ ಅಜಹರಿ ಎಂಬ ಮುಫ್ತಿಯನ್ನು ಖಂಡ್ವಾ ಎಂಬಲ್ಲಿ ಬಂಧಿಸಿ, ಹುಬ್ಬಳ್ಳಿಗೆ ಕರೆತರುತ್ತಿದ್ದಾರೆ. ಹುಬ್ಬಳ್ಳಿ ಪೊಲೀಸರಿಂದ ಬಂಧಿತನಾಗಿರುವ ಮುಫ್ತಿ ಗುಲಾಮ ಜಿಲಾನಿ ಅಜಹರಿ, ಆತನ ಮದರಸಾದಲ್ಲಿ ಶಿಕ್ಷಕಿಯಾಗಿದ್ದ ಹುಬ್ಬಳ್ಳಿ ಮೂಲದ ಯುವತಿಗೆ ಮತ್ತು ಬರುವ ಔಷಧಿ ಕೊಟ್ಟು ಬಲಾತ್ಕಾರ ಮಾಡಿದ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ:
BJPಯಲ್ಲಿ ಕಂಟ್ರೋಲ್‌ಗೆ ಬಾರದ ನಾಯಕರು; ಬಿಜೆಪಿ ರಾಜ್ಯಾಧ್ಯಕ್ಷರಿಗೆ ವಲಸಿಗರ ಟೆನ್ಶನ್, ಕಂಟ್ರೋಲ್‌ಗೆ ಸಿಗದ ಯತ್ನಾಳ್!
ಗಂಡ-ಹೆಂಡತಿ ಮಧ್ಯೆ ಜಾಸ್ತಿ ಕಿರಿಕ್ ಆಗೋದಕ್ಕೆ ಇವೇ ಕಾರಣಗಳು!
ನಾಲ್ಕು ಬಾರಿ ಆಕೆಗೆ ಗರ್ಭಪಾತ
ಮದುವೆ ಮಾಡಿಕೊಳ್ಳುವದಾಗಿ ಹೇಳಿ ಎರಡು ವರ್ಷದ ಅವಧಿಯಲ್ಲಿ ಮೇಲಿಂದ ಮೇಲೆ ಬಲಾತ್ಕಾರ ಮಾಡಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. ಎರಡು ವರ್ಷದ ಅವಧಿಯಲ್ಲಿ ಗುಲಾಮ ಜಿಲಾನಿ ಅಜಹರಿ, ಒಟ್ಟು ನಾಲ್ಕು ಬಾರಿ ಆಕೆಯ ಗರ್ಭಪಾತ ಮಾಡಿಸಿದ್ದಾನೆ ಎನ್ನಲಾಗಿದೆ. ಆಕೆ ಮತ್ತೆ ಐದನೇ ಬಾರಿಗೆ ಗರ್ಭಿಣಿಯಾದ ಬಳಿಕ ಆಕೆಯನ್ನು ತನ್ನ ತವರು ಮನೆ ಹುಬ್ಬಳ್ಳಿಯಲ್ಲಿ ಬಿಟ್ಟು, ನನ್ನ ನಿನ್ನ ನಡುವೆ ಇನ್ಮೇಲೆ ಯಾವದೇ ಸಂಬಂಧ ಉಳಿದಿಲ್ಲ. ಈ ವಿಷಯ ಬಹಿರಂಗ ಮಾಡಿದರೆ ನಿನ್ನನ್ನು ಮತ್ತು ನಿನ್ನ ಕುಟುಂಬ ಸಮೇತ ಬಿಡಲ್ಲ ಎಂದು ಬೆದರಿಕೆ ಹಾಕಿದ್ದಾನೆಂದು ಯುವತಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಯುವತಿಯನ್ನು ಪುಸಲಾಯಿಸಿದ ಮುಫ್ತಿ
ಈ ಮೊದಲು ಹುಬ್ಬಳ್ಳಿಯಲ್ಲಿರುವ ಯುವತಿಯ ತಂದೆಯ ಜೊತೆ ಪರಿಚಯನಾಗಿದ್ದ ಗುಲಾಮ ಜಿಲಾನಿ ಅಜಹರಿ, ನಿಮ್ಮ ಮಗಳಿಗೆ ನಮ್ಮಲ್ಲಿ ಕೆಲಸ ಇದೆ ಎಂದು ಹೇಳಿದ್ದ ಹಿನ್ನೆಲೆಯಲ್ಲಿ ಯುವತಿಯ ಖಂಡವಾ ಪಟ್ಟಣಕ್ಕೆ ಹೋಗಿದ್ದಳು. ಯುವತಿಯನ್ನು ಪುಸಲಾಯಿಸಿದ ಮುಫ್ತಿ ಗುಲಾಮ ಜಿಲಾನಿ ಅಜಹರಿ, ನನಗೆ ಮೊದಲ ಹೆಂಡತಿಯಿಂದ ವಿಚ್ಛೇದನವಾಗಿದೆ. ನಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ಹೇಳುತ್ತಲೇ ನಿರಂತರವಾಗಿ ಬಲತ್ಕಾರ ಮಾಡುತ್ತಾ ಬಂದ ಎನ್ನಲಾಗಿದೆ. ಯಾವಾಗ ಮದುವೆಯಾಗದೆ ಮೌಲ್ವಿ ಕೈ ಎತ್ತಿದನೋ ನೊಂದ ಯುವತಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ 18.12.23 ರಂದು ಕೇಸ್ ದಾಖಲಿಸಿದ್ದಾಳೆ.
ಒಟ್ಟು ಮುಫ್ತಿ (ಮೌಲ್ವಿ) ಸೇರಿ ಎಂಟು ಜನರ ವಿರುದ್ದ ಕೇಸ್ ದಾಖಲಾಗಿದೆ. ಗುಲಾಮ್ ಜಿಲಾನಿ ಅಜಹರಿ,ಆಸೀಪ್, ಶಕೀಲ್, ವೈದ್ಯ ಸೇರಿ ಒಟ್ಟು ಎಂಟು ಜನರ ಮೇಲೆ ಕೇಸ್ ದಾಖಲಾಗಿದೆ. ಇದೀಗ ಹುಬ್ಬಳ್ಳಿ ಪೊಲೀಸರು ಮಧ್ಯಪ್ರದೇಶದಲ್ಲಿ ಮುಫ್ತಿ (ಮೌಲ್ವಿಯ ಬಂಧನವಾಗಿದೆ). ಮಹಿಳೆ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಖ್ಯ ಆರೋಪಿಯನ್ನು ಬಂಧಿಸಿ ರೈಲು ಮೂಲಕ ಹುಬ್ಬಳ್ಳಿಗೆ ಕರೆತರುತ್ತಿದ್ದಾರೆ. ಈ ಕುರಿತು ತನಿಖೆ ಮುಂದುವರೆಸಿರೋದಾಗಿ ಡಿಸಿಪಿ ಪಿ.ರಾಜೀವ್ ಮಾಹಿತಿ ನೀಡಿದ್ದಾರೆ. (ವರದಿ: ಶಿವರಾಮ ಅಸುಂಡಿ, ನ್ಯೂಸ್18, ಹುಬ್ಬಳ್ಳಿ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ