ವಿಜಯಪುರ: ಬಿಜೆಪಿಗೆ (Karnataka BJP) ಹೊಸ ರಾಜ್ಯಾಧ್ಯಕ್ಷ (BJP State President) ಹಾಗೂ ವಿಪಕ್ಷ ನಾಯಕರ (Opposition Leader) ನೇಮಕ ಆದ ಮೇಲೆ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಮೇಲಿಂದ ಮೇಲೆ ಸಾಬೀತಾಗ್ತಿದೆ. ಬಿಎಸ್ ಯಡಿಯೂರಪ್ಪ (BS Yediyurappa) ಹಾಗೂ ವಿಜಯೇಂದ್ರ (BY Vijayendra) ವಿರುದ್ಧ ವಿಜಯಪುರ ಶಾಸಕ ಯತ್ನಾಳ್ (Basanagouda Patil Yatnal) ತಿರುಗಿಬಿದ್ದು ಬಿಜೆಪಿ ಅವಧಿಯಲ್ಲಿ 40 ಸಾವಿರ ಕೋಟಿ ಹಗರಣ ಆಗಿತ್ತು ಅಂತ ಬಾಂಬ್ ಹಾಕಿದ್ದರು. ಯತ್ನಾಳ್ ಆರೋಪದಿಂದ ಮುಜುಗರ ಆಗ್ತಿದೆ ಅವರ ವಿರುದ್ಧ ಕ್ರಮ ಕೈಗೊಳ್ಳಿ ಅಂತ ಹೊಸ ಪದಾಧಿಕಾರಿಗಳು ನಿರ್ಣಯ ಕೈಗೊಂಡಿದ್ದರು. ಇಷ್ಟೆಲ್ಲಾ ಆದ ಮೇಲೆ ಸ್ವತಃ ವಿಜಯೇಂದ್ರ, ಶಾಸಕ ಯತ್ನಾಳ್ ಕೋಟೆಗೇ ನುಗ್ಗಿದ್ದಾರೆ. ವಿಜಯಪುರದಲ್ಲಿ (Vijayapura) ಮೊದಲ ಬಾರಿ ಸಮಾವೇಶ ನಡೆಸಿದ್ದಾರೆ.
ಇದನ್ನೂ ಓದಿ:
Vikram simha: ಅರಣ್ಯ ಇಲಾಖೆ ಅಧಿಕಾರಿಗಳಿಂದ ಸಂಸದ ಪ್ರತಾಪ್ ಸಿಂಹ ಸಹೋದರ ಅರೆಸ್ಟ್
ಮೂಗುತಿ ಸುಂದರಿಯಾದ Anasuya Bharadwaj
ವಿಜಯಪುರ ಜಿಲ್ಲೆಯ ಚಿಕ್ಕಗಲಗಲಿ ಗ್ರಾಮದಲ್ಲಿ ಬಣಜಿಗ ಸಮಾವೇಶ ನಡೆಯಿತು. ಈ ಸಮಾವೇಶವನ್ನ ವಿಜಯೇಂದ್ರ ಉದ್ಘಾಟಿಸಿದ್ದರು. ಈ ವೇಳೆ ಮಾತಾಡಿದ ವಿಜಯೇಂದ್ರ, ಯತ್ನಾಳ್ಗೂ ನೇರ ಟಾಂಗ್ ಕೊಟ್ಟರು. ಯತ್ನಾಳ್ ಮಾಡಿದ್ದ ಆರೋಪಗಳಿಗೂ ನೇರಾನೇರ ಟಾಂಗ್ ಕೊಟ್ಟಿದ್ದಾರೆ ವಿಜಯೇಂದ್ರ.
ಯತ್ನಾಳ್ಗೆ ವಿಜಯೇಂದ್ರ ನೇರ ಟಾಂಗ್
ಆರೋಪದಲ್ಲಿ ಸತ್ಯಾಂಶ ಇದ್ರೆ ಪ್ರತಿಕ್ರಿಯೆ ಬರುತ್ತೆ, ಹುಡುಗಾಟಿಕೆ ಹೇಳಿಕೆ ಇದ್ದರೆ ಬರಲ್ಲ. ನಾನು ರಾಜ್ಯಾಧ್ಯಕ್ಷನಾಗಿ ಮೊದಲ ಭಾರಿಗೆ ಭೇಟಿ ಕೊಟ್ಟಿದ್ದೇನೆ. ನನ್ನನ್ನು ಯಡಿಯೂರಪ್ಪನವರು ಅಧ್ಯಕ್ಷನನ್ನಾಗಿ ಮಾಡಿಲ್ಲ. ಪ್ರಧಾನಿ ಮೋದಿ ಅವರು, ಜೆ ಪಿ ನಡ್ಡಾ, ಸೇರಿದಂತೆ ರಾಷ್ಟ್ರೀಯ ನಾಯಕರು ಮಾಡಿದ್ದಾರೆ. ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿದ ಮೇಲೆ ಎಲ್ಲರೂ ಸಹಕಾರ, ಆಶೀರ್ವಾದ ಮಾಡಿದ್ದಾರೆ. ಹೊಸ ವರ್ಷದ ಹೊಸ್ತಿಲಲ್ಲಿ ನಾವು ಇದ್ದೇವೆ. ಎಲ್ಲ ಹಳೆ ವಿಚಾರಗಳನ್ನು ಬದಿಗಿಟ್ಟು ಎಲ್ಲರ ವಿಶ್ವಾಸ ತೆಗೆದುಕೊಂಡು ನಾನು ಮುನ್ನಡೆಯುತ್ತೇನೆ. ನಾನು ಇಟ್ಟ ಗುರಿಯಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ, ಲೋಕಸಭಾ ಗೆಲ್ಲಬೇಕು, ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಬೇಕು. ನಾನಾನಗಲಿ, ಯಾರಾಗಲಿ ಕೇಂದ್ರಕ್ಕೆ ಹೋಗಿ ಚಾಡಿ ಹೇಳುವ ಕೆಲಸ ಮಾಡಿಲ್ಲ. ಆರೋಪಕ್ಕೆ ಗಂಭೀರತೆ ಇದ್ರೆ ಉತ್ತರ ಕೊಡಬಹುದು. ಆರೋಪ ಮಾಡಿದವರು ದಾಖಲೆ ಇದ್ರೆ ಸರ್ಕಾರಕ್ಕೆ ಕೊಡಲಿ, ಮುಂದಿನ ನಿರ್ಧಾರ ಮಾಡುತ್ತೆ ಎಂದು ವಿಜಯೇಂದ್ರ ಟಾಂಗ್ ಕೊಟ್ಟಿದ್ದಾರೆ.
ಬಳಸಿದ್ದೆ 2-3 ಸಾವಿರ ಕೋಟಿ, 40 ಸಾವಿರ ಕೋಟಿ ಹೇಗಾಯ್ತು?
ವಿಜಯರಪುರದ ಯತ್ನಾಳ್ ಭದ್ರಕೋಟೆಯಲ್ಲಿನಿಂತು ವಿಜಯೇಂದ್ರ ಸ್ಥಳೀಯರ ಶಾಸಕರಿಗೆ ಟಾಂಗ್ ಕೊಡೋ ಮೂಲಕ ಬಿಜೆಪಿಯಲ್ಲಿ ಇನ್ನೂ ಯಾವುದು ಸರಿ ಹೋಗಿಲ್ಲ ಅನ್ನೋದನ್ನ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.
ಹಾಸನ ಮಾಜಿ ಶಾಸಕ ಪ್ರೀತಂಗೌಡ ಯತ್ನಾಳ್ ಆರೋಪಗಳಿಗೆ ತಿರುಗೇಟು ಕೊಟ್ಟಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಬಳಸಿದ್ದೇ 2 ರಿಂದ 3 ಸಾವಿರ ಕೋಟಿ. ಹೀಗಿರುವಾಗ 40 ಸಾವಿರ ಕೋಟಿ ಹೇಗಾಯ್ತು ಅಂತ ಪ್ರಶ್ನಿಸಿದ್ದಾರೆ. ಯತ್ನಾಳ್ ನಾಲಿಗೆಗೂ ಮೆದುಳಿಗೂ ಕನೆಕ್ಟ್ ಇಲ್ಲ ಅಂದಿದ್ದಾರೆ.
ಒಂದ್ಕಡೆ ಬಿಜೆಪಿ ನಾಯಕರು ಯತ್ನಾಳ್ ವಿರೋಧಿಸುತ್ತಿದ್ದರೆ, ಕಾಂಗ್ರೆಸ್ ಮಾತ್ರ ಯತ್ನಾಳ್ ಅವರನ್ನು ಸಮರ್ಥಿಸಿಕೊಳ್ಳುವ ಕೆಲಸ ಮಾಡುತ್ತಿದೆ. ಯತ್ನಾಳ್ 40 ಸಾವಿರ ಕೋಟಿ ರೂಪಾಯಿ ಆರೋಪದ ಬಗ್ಗೆ ಮಾತಾಡಿರುವ ಪ್ರಿಯಾಂಕ್ ಖರ್ಗೆ, ಯತ್ನಾಳ್ ಆರೋಪದ ಬಗ್ಗೆ ವಿಜಯೇಂದ್ರ ಇನ್ನೂ ಪ್ರತಿಕ್ರಿಯಿಸಿಲ್ಲ. ತಪ್ಪಾಗಿದ್ರೆ ವಿಜಯೇಂದ್ರ ರಾಜೀನಾಮೆ ಕೊಡಲಿ, ಇಲ್ಲದಿದ್ರೆ ಯತ್ನಾಳ್ರನ್ನ ಉಚ್ಛಾಟನೆ ಮಾಡಿ ನೋಡೋಣ ಅಂತ ಸವಾಲೆಸೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ