ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಕುಡಿದ ಮತ್ತಿನಲ್ಲಿ ಅಪಾರ್ಟ್‌ಮೆಂಟ್‌ನ (Apartment) 33ನೇ ಮಹಡಿಯ ಬಾಲ್ಕನಿಯಿಂದ ಬಿದ್ದು ಟೆಕ್ಕಿ ಸಾವನಪ್ಪಿದ್ದಾನೆ. ಕೆ.ಆರ್.ಪುರಂನ (KR Pura) ಅಯ್ಯಪ್ಪನಗರದ ಕೊಡಿಗೇಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದೆ. ಸಿಗರೇಟ್ ಸೇದುವಾಗ ಕಟ್ಟಡದಿಂದ ಬಿದ್ದು ಉತ್ತರ ಪ್ರದೇಶ (Uttara Pradesh) ಮೂಲದ ದಿಪಾಂಶು ಶರ್ಮಾ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ನೇಹಿತರ (Friends) ಜೊತೆ ಎಣ್ಣೆ ಪಾರ್ಟಿ ಮಾಡಿದ್ದ ದಿಪಾಂಶು ಶರ್ಮಾ, ಗಾಂಜಾ ಸೇವಿಸಿದ ನಶೆಯಲ್ಲಿ ಆಯತಪ್ಪಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಕೆ.ಆರ್ ಪುರಂ ಪೊಲೀಸ್ ಠಾಣೆ (KR Puram Police Station) ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗಾಂಜಾ ಸೇವನೆ ಮಾಡಿರುವ ಶಂಕೆ
ನಿನ್ನೆ ಬೆಳಗ್ಗೆ 6:45ರ ವೇಳೆಗೆ ಘಟನೆ ನಡೆದಿದ್ದು, ದಿಪಾಂಶು ಶರ್ಮಾ ಸೇರಿ ಇಬ್ಬರು ಯುವತಿಯರು ಹಾಗೂ ಓರ್ವ ಸ್ನೇಹಿತ ಪಾರ್ಟಿ ಮಾಡುತ್ತಿದ್ದಂತೆ. ಕಂಠ ಪೂರ್ತಿ ಮಧ್ಯಪಾನ ಜೊತೆ ಗಾಂಜಾ ಸೇವನೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಮೃತ ಶರ್ಮಾ ಉತ್ತರ ಪ್ರದೇಶ ಮೂಲದ ಆರ್ಮಿ ಸಿಬ್ಬಂದಿಯ ಪುತ್ರ ಎನ್ನಲಾಗಿದೆ.
ಇದನ್ನೂ ಓದಿ:
Minister Madhu Bangarappa: ಚೆಕ್ ಬೌನ್ಸ್ ಪ್ರಕರಣದಲ್ಲಿ ಮಧು ಬಂಗಾರಪ್ಪಗೆ ಶಿಕ್ಷೆ; 6 ಕೋಟಿ 96 ಲಕ್ಷದ 70 ಸಾವಿರ ದಂಡ
ಬ್ಲ್ಯಾಕ್ ಸೀರೆಯಲ್ಲಿ ಸಾರಾ ತೆಂಡೂಲ್ಕರ್!
ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ
ಶರ್ಮಾ ನಗರದ ಪಿಜಿಯಲ್ಲಿ ವಾಸವಾಗಿದ್ದು, ಮೊನ್ನೆ ರಾತ್ರಿ ಸ್ನೇಹಿತರ ಮನೆಯಲ್ಲಿ ಪಾರ್ಟಿ ಆಯೋಜನೆ ಮಾಡಿದ್ದರಂತೆ. ಅಪಾರ್ಟ್ಮೆಂಟ್ಗೆ ಬಂದು ಆ ಬಳಿಕ ಮಹದೇವಪುರ ಫಿನಿಕ್ಸ್ ಮಾಲ್ ಗೆ ತೆರಳಿ ಸ್ನೇಹಿತರ ಜೊತೆ ಮಧ್ಯಪಾನ ಮಾಡಿದ್ದರಂತೆ. ಆ ಬಳಿಕ ಅಪಾರ್ಟ್ಮೆಂಟ್ಗೆ ಬಂದು ಪಾರ್ಟಿ ಮಾಡಿದ್ದು, ಬೆಳಗ್ಗೆ ಮೂರು ಗಂಟೆ ವೇಳೆಗೆ ಪಾರ್ಟಿ ನಂತರ ಇಂದಿರಾನಗರ ಪಬ್ ಗೆ ಹೋಗಿ ಕೊಡಿಗೆಹಳ್ಳಿಯ ಸ್ನೇಹಿತೆಯ ಅಪಾರ್ಟ್ಮೆಂಟ್ ಗೆ ಬಂದಿದ್ದನಂತೆ. ಈ ವೇಳೆ ಮಧ್ಯದ ನಶೆಯಲ್ಲಿ ಅವಘಡ ಸಂಭವಿಸಿರುವ ಶಂಕೆ ಎದುರಾಗಿದೆ. ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. (ವರದಿ: ಗಂಗಾಧರ್ ವಾಗಟ, ನ್ಯೂಸ್18, ಬೆಂಗಳೂರು)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ