ಧಾರವಾಡ: ವಿದ್ಯಾರ್ಥಿಗಳಿಗೆ (Students) ವಿದ್ಯಾಭ್ಯಾಸ (Education) ಹೇಳಿ ಮಕ್ಕಳ ಬದುಕ ರೂಪಿಸಿದ ಶಿಕ್ಷಕಿ ನಿವೃತ್ತಿ (Retired Teacher) ಹೊಂದಿದ ಬಳಿಕ ಸುಂದರ ಬದುಕು ಸಾಗಿಸಬೇಕಿತ್ತು. ಆದರೆ ಹಣದ ಆಸೆಯಿಂದ ಬಡ್ಡಿಯ ಆಸೆಗೆ ಹೆಣವಾಗಿರುವ ಘಟನೆ ಧಾರವಾಡದಲ್ಲಿ (Dharwad) ನಡೆದಿದೆ. ಬಡ್ಡಿಗಾಗಿ ಹಣ ಪಡೆದ ವ್ಯಕ್ತಿಯೇ ನಿವೃತ್ತಿ ಶಿಕ್ಷಕಿಯ ಕೊಲೆ ಮಾಡಿದ್ದಾನೆ. ಆರಂಭದಲ್ಲಿ ಸಹಜ ಸಾವು (Natural Death) ಅಂದುಕೊಂಡಿದ್ದ ಪೊಲೀಸರಿಗೆ (Police) ತನಿಖೆ ಬಳಿಕ ಇದೊಂದು ಕೊಲೆ ಎಂದು ಸಾಬೀತಾಗಿದೆ. ಸಾಲ ತೀರಿಸದೆ ಕೊಲೆ ಮಾಡಿದ ಆರೋಪಿ ಕಂಬಿ ಹಿಂದೆ ಹೋಗಿದ್ದಾರೆ.
ನಿವೃತ್ತಿ ಶಿಕ್ಷಕಿ ಸಾವಿನ ಕೇಸ್ಗೆ ಬಿಗ್ ಟ್ವಿಸ್ಟ್
ಹೌದು, ಧಾರವಾಡದ ಓಂ ನಗರದ ಗಿರಿಜಾ ನಡೂರಮಠ ಎಂಬ ನಿವೃತ್ತಿ ಶಿಕ್ಷಕಿಯೇ ಕೊಲೆ ಆಗಿದ್ದು. ಮಕ್ಕಳೇ ಇಲ್ಲದೆ ಏಕಾಂಗಿಯಾಗಿದ್ದ ಗಿರಿಜಾ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದರು. ಇತ್ತೀಚೆಗೆ ನಿವೃತ್ತಿಯಾಗಿ ಜೀವನ ನಡೆಸುತ್ತಿದ್ದರು. ಆದರೆ ಇದೇ ತಿಂಗಳ 15ರಂದು ಗಿರಿಜಾ ಸಾವನ್ನಪ್ಪಿದರು. ಆ ಸಾವು ಮೊದಮೊದಲು ಸಹಜ ಅಂತಲೇ ಭಾವಿಸಲಾಗಿತ್ತು. 8 ದಿನಗಳ ಬಳಿಕ ಸಿಕ್ಕ ದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಮನೆಯಲ್ಲಿ ಸಿಕ್ಕಿತ್ತು. ಆದರೆ ಯಾವಾಗ ಬಡ್ಡಿ ವ್ಯವಹಾರ ಗೊತ್ತಾಗುತ್ತೋ ಆಗ ಇದು ಮರ್ಡರ್ ಅನ್ನೋದು ತನಿಖೆಯ ವೇಳೆ ಗೊತ್ತಾಗಿದೆ.
ಇದನ್ನೂ ಓದಿ:
Vikram simha: ಅರಣ್ಯ ಇಲಾಖೆ ಅಧಿಕಾರಿಗಳಿಂದ ಸಂಸದ ಪ್ರತಾಪ್ ಸಿಂಹ ಸಹೋದರ ಅರೆಸ್ಟ್
ಬ್ಲ್ಯಾಕ್ ಸೀರೆಯಲ್ಲಿ ಸಾರಾ ತೆಂಡೂಲ್ಕರ್!
ಧಾರವವಾಡದ ಅಮರಗೋಳ ಗ್ರಾಮದ ಮಂಜುನಾಥ್ ದಂಡಿನ ಎನ್ನುವ ವ್ಯಕ್ತಿಗೆ 10 ಲಕ್ಷ ರೂಪಾಯಿ ನೀಡಿದ್ದರು. ಈ ಹಣವನ್ನು ವಾಪಸ್ ನೀಡುವಂತೆ ಗಿರಿಜಾ ಒತ್ತಾಯಿಸಿದ್ದಾರೆ. ಆದರೆ ಮಥನ ಬಳಿಕ ಹಣವಿಲ್ಲದೆ ಕಂಗಾಲಾಗಿದ್ದ. ಇನ್ನು ಬಡ್ಡಿ ಸಮೇತವಾಗಿ ಹಣ ವಾಪಸ್ ನೀಡುವಂತೆ ಒತ್ತಾಯ ಮಾಡುತ್ತಿದ್ದ ಗಿರಿಜಾಳ ಕಿರುಕುಳದಿಂದ ರೋಸಿಹೋಗಿದ್ದ ಮಂಜುನಾಥ ಅವಳನ್ನೇ ಕೊಲೆ ಮಾಡೊಕೆ ಸಂಚು ರೂಪಿಸುತ್ತಾನೆ.
ನಿವೃತ್ತ ಗಿರಿಜಾಳ ಮನೆಗೆ ಹೋಗಿದ್ದ ಮಂಜುನಾಥ ಕುಡಿಯಲು ನೀರು ಕೇಳುತ್ತಾನೆ. ಆಗ ನೀರು ತರಲು ಹೋಗುತ್ತಿದ್ದ ಗಿರಿಜಾಳನ್ನು ಅವರದ್ದೇ ವೇಲ್ ನಿಂದಲೆ ಕುತ್ತಿಗೆ ಹಿಸುಕಿ ಹತ್ಯೆ ಮಾಡಿದ್ದಾನೆ.
ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ
ಕೊಲೆಯಾದ ಗಿರಿಜಾಳ ಮೃತ ದೇಹವನ್ನು ಧಾರವಾಡದ ವಿದ್ಯಾಗಿರಿಯ ಪೊಲೀಸರು ಪೋಸ್ಟ್ ಮಾರ್ಟಂಗೆ ಕಳಿಸುತ್ತಾರೆ. ಆಗ ಇದು ಸಹಜ ಸಾವು ಅಲ್ಲ ಇದೊಂದು ಪ್ರೀ ಪ್ಲಾನ್ ಮರ್ಡರ್ ಅನ್ನೋದು ಗೊತ್ತಾಗುತ್ತೆ. ಸಾವನ್ನಪ್ಪಿದ 8 ದಿನಗಳ ಬಳಿಕ ಮೃತದೇಹದ ಸ್ಥಿತಿ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದ್ದು, ಅಕ್ಕಪಕ್ಕದವರಿಗೆ ವಾಸನೆ ಬಂದಿದೆ. ಅಲ್ಲಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗಲೇ ಇಲ್ಲೊಂದು ದೇಹ ಇದೆ ಅಂತ ಗೊತ್ತಾಗಿದೆ.
ಕೊಟ್ಟ ಸಾಲ ವಾಪಸ್ ಕೇಳಿದ್ದೆ ತಪ್ಪಾಯ್ತು
ಹಲವು ವರ್ಷಗಳಿಂದ ಗಿರಿಜಾ ತಮ್ಮ ಸುತ್ತಮುತ್ತಲೂ ಹಾಗೂ ಇತರರ ಜೊತೆಯಲ್ಲಿ ಬಡ್ಡಿ ವ್ಯವಹಾರ ಮಾಡುತ್ತಲೇ ಬಂದಿದ್ದಾರೆ. ವೃತ್ತಿ ಬಳಿಕ ಹಣವನ್ನು ಬಡ್ಡಿ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು. ಅದರಂತೆ ಮಂಜುನಾಥಗೆ 10 ಲಕ್ಷ ರೂಪಾಯಿ ಬಡ್ಡಿಗಾಗಿ ಹಣ ನೀಡಿದ್ದರು. ಆದರೆ ಪಡೆದ ಸಾಲ ಮತ್ತು ಬಡ್ಡಿ ನೀಡದ ಮಂಜುನಾಥ ಪದೇ ಪದೇ ಕರೆ ಮಾಡಿ ಹಣ ಕೇಳಿದ್ದಾರೆ.
ಆದರೆ ಹಣ ಕೊಡಬೇಕಿದ್ದ ಮಂಜುನಾಥ್ ಹತ್ಯೆ ಮಾಡಿ ಯಾವುದೇ ಒಂದು ಒಂದು ಕ್ಲೂ ಬಿಡದೆ ಎಸ್ಕೇಪ್ ಆಗಿದ್ದ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಿದ ಬಳಿ ಕೊಲೆ ಎಂಬುದು ಖಚಿತವಾಯಿತು. ಅರೋಪಿ ಮಂಜುನಾಥ ಪೊಲೀಸ್ ವಶದಲ್ಲಿಇದ್ದಾನೆ ಎಂದು ಹು-ಧಾ ನಗರ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ಹೇಳಿದ್ದಾರೆ.
ಒಟ್ಟಾರೆಯಾಗಿ ಹಿಂದೆ ಮುಂದೆ ಯಾರೂ ಇಲ್ಲದೆ ಏಕಾಂಗಿ ಜೀವನ ನಡೆಸುತ್ತಿದ್ದ ಗಿರಿಜಾ ನಿವೃತ್ತಿ ಬಳಿಕ ಅದೇ ಹಣದಲ್ಲಿ ಚೆಂದದ ಬದುಕು ಸಾಗಿಸಬಹುದಿತ್ತು. ಆದರೆ ಹಣದ ಹಿಂದೆ ಬಿದ್ದಿದ್ದ ಶಿಕ್ಷಕಿ ಈ ರೀತಿಯಾಗಿ ಹಣ ಪಡೆದವನಿಂದಲೇ ಹತ್ಯೆ ಆಗಿದ್ದು ನಿಜಕ್ಕೂ ಕೊಟ್ಟೋನು ಕೋಡಂಗಿ ಇಸಗೊಂಡವನು ಈರಭದ್ರ ಎನ್ನುವ ಹಾಗಾಗಿದೆ ಗಿರಿಜಾ ಕಥೆ. (ವರದಿ: ಮಂಜುನಾಥ ಯಡಳ್ಳಿ, ಧಾರವಾಡ, ನ್ಯೂಸ್18)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ