Download Our App

Follow us

Home » Uncategorized » Govind Karjol: ಹಾಲು ಕುಡಿದೇ ಸಾಯ್ತಾರೆ ಅನ್ನೋವಾಗ ವಿಷ ಯಾಕೆ ಕೊಡಬೇಕು? ಮಾಜಿ ಡಿಸಿಎಂ

Govind Karjol: ಹಾಲು ಕುಡಿದೇ ಸಾಯ್ತಾರೆ ಅನ್ನೋವಾಗ ವಿಷ ಯಾಕೆ ಕೊಡಬೇಕು? ಮಾಜಿ ಡಿಸಿಎಂ

ಹುಬ್ಬಳ್ಳಿ: ಹಾಲು ಕುಡಿದೇ ಸಾಯ್ತಾರೆ ಅನ್ನುವಾಗ, ಅವರಿಗೆ ವಿಷ ಯಾಕೆ ಕೊಡಬೇಕು ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ (Former DCM Govinda Karajola) ಮಾರ್ಮಿಕವಾಗಿ ನುಡಿದಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ನಲ್ಲಿ (Congress MLAs) 40 ಕ್ಕಿಂತ ಹೆಚ್ಚು ಶಾಸಕರು ಅತೃಪ್ತರಾಗಿದ್ದಾರೆ. ಬಿಆರ್ ಪಾಟೀಲ್, ಬಸವರಾಜ್ ರಾಯರೆಡ್ಡಿ ಅಂಥವರು ಅಸಮಾಧಾನವನ್ನು ಹಾಕಿದ್ದಾರೆ. ಉಳಿದವರು ಹೇಳೋ ಧೈರ್ಯ ಮಾಡುತ್ತಿಲ್ಲ. ನಾವು ಯಾವ ಶಾಸಕರ ಸಂಪರ್ಕದಲ್ಲಿಯೂ ಇಲ್ಲ. ಹಾಲು ಕುಡಿದು ಸಾಯ್ತಾರೆ ಅಂತ ಗೊತ್ತಿದೆ. ಹೀಗಿರುವಾಗ ಅವರಿಗೆ ವಿಷ ಯಾಕೆ ಕೊಟ್ಟು ಪಾಪ ಕಟ್ಕೊಬೇಕು ಎಂದರು.

ಜಾಹೀರಾತು

ವಿ.ಸೋಮಣ್ಣ, ಸೋಮಶೇಖರ್ ಸೇರಿ ಯಾರು ಪಕ್ಷ ಬಿಟ್ಟು ಹೋಗಲ್ಲ. ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ನಂತರ ಯಾರೂ ಹೋಗೋ ಧೈರ್ಯ ಮಾಡ್ತಿಲ್ಲ. ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಬಿಜೆಪಿ ಹೈಕಮಾಂಡ್ ಅಳೆದು ತೂಗಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುತ್ತದೆ ಎಂದು ಹೇಳಿದರು.

ವಿಜಯಪುರ ಸೇರಿದಂತೆ ಯಾವುದೇ ಕ್ಷೇತ್ರವನ್ನು ನಾನು ಕೇಳಿಲ್ಲ. ಚುನಾವಣೆಗೆ ಸ್ಪರ್ಧಿಸುತ್ತೇನೆ ಅನ್ನೋದು ಮಾಧ್ಯಮಗಳ ಸೃಷ್ಟಿ ಎಂದು ಕಾರಜೋಳ ತಿಳಿಸಿದರು.

ವೋಟ್ ಬ್ಯಾಂಕ್ ರಾಜಕಾರಣ

ಸರ್ಕಾರಕ್ಕೆ ಬರುವ ಎಲ್ಲಾ ಆದಾಯವನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕೆ ಉಪಯೋಗ ಮಾಡಲಾಗುತ್ತಿದೆ. ಅಭಿವೃದ್ಧಿಗೆ ಅನುದಾನ ತೆಗೆದಿಟ್ಟು ಬೇರೆ ಕೆಲಸಗಳನ್ನು ಮಾಡಬೇಕು. ಕಾಂಗ್ರೆಸ್ ಬಂದ ಮೇಲೆ ಒಂದು ಕಾಮಗಾರಿ ಸ್ಯಾಂಕ್ಷನ್ ಆಗಿಲ್ಲ. ಮಹದಾಯಿಗೆ ಸಾವಿರ ಕೋಟಿ ತೆಗೆದಿಟ್ಟು ಟೆಂಡರ್ ಕರೆದಿದ್ದೆವು. ನಾವು ತೆಗೆದಿಟ್ಟ ಹಣವನ್ನೂ ವಾಪಸ್ ಪಡೆದಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

ಗೋವಿಂದ ಕಾರಜೋಳ, ಮಾಜಿ ಡಿಸಿಎಂ

ಮಹದಾಯಿ ಯೋಜನೆ ಟೆಂಡರ್ ಸಹ ಕರೆದಿದ್ದೆವು. ಅದನ್ನು ಮುಂದುವರಿಸಿಕೊಂಡು ಹೋಗುವ ಬದಲಿಗೆ ಕಾಂಗ್ರೆಸ್ ಗಿಮಿಕ್ ಮಾಡ್ತಿದೆ ಎಂದು ಕಾರಜೋಳ ಕಿಡಿಕಾರಿದರು.

ವರ್ಗಾವಣೆ ದಂಧೆ

ಹೇಗೆ ದುಡ್ಡು ವಸೂಲಿ ಮಾಡಬೇಕು ಅನ್ನೋದು ಕಾಂಗ್ರೆಸ್​ ಸರ್ಕಾರಕ್ಕೆ ಚಿಂತೆಯಾಗಿದೆ. ನಾವು ಮಂಜೂರು ಮಾಡಿದ ಕೆಲಸ ನಿಲ್ಲಿಸಿ ಲಂಚ ಕೇಳುತ್ತಿದಾರೆ. ಸರ್ಕಾರಿ ನೌಕರರನ್ನು ಎಷ್ಟು ಟ್ರಾನ್ಸಫರ್ ಮಾಡೋದು. ಕಳೆದ ಆರು ತಿಂಗಳಿಂದ ಅದೇ ಒಂದು ಉದ್ಯೋಗ ಆಗಿದೆ. ಮೇ ತಿಂಗಳಲ್ಲಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆ ಸಮಯದಲ್ಲಿ ನೂರೆಂಟು ಸಂಸಾರ ಸಮಸ್ಯೆ ಇರತ್ತೆ. ಆ ಸಮಯದಲ್ಲಿ ಟ್ರಾನ್ಸಫರ್ ಮಾಡಿದ್ರೆ ಅವರೇನು ಆತ್ಮಹತ್ಯೆ ಮಾಡಿಕೊಳ್ಳಬೇಕಾ? ಇವರ ಆಡಳಿತಕ್ಕೆ ಸರಕಾರಿ ನೌಕರರು ಆತ್ಮಹತ್ಯೆ ಮಾಡಿಕೊಳ್ಳಬೇಕಾ ಎಂದು ಕಾರಜೋಳ ಪ್ರಶ್ನಿಸಿದರು.

ಜಾಹೀರಾತು

ಸರ್ಕಾರಿ ನೌಕರರಿಗೆ ದೊಡ್ಡ ಕಿರುಕುಳ ಇದೆ. 40 ವರ್ಷದ ಅನುಭವದಲ್ಲಿ ಇಂತಹ ದರಿದ್ರ ಸರ್ಕಾರ ನೋಡಿಲ್ಲ. ಎಲ್ಲೋ ಇದ್ದವರನ್ನು ಟ್ರಾನ್ಸಫರ್ ಮಾಡಿದ್ರೆ ಹೆಂಡತಿ ಮಕ್ಕಳನ್ನು ಬಿಟ್ಟು ಹೋಗಬೇಕು. ಅನೇಕ ಜನ ವಿಷ ತಗೆದುಕೊಂಡಿದ್ದಾರೆ. ಪರೋಕ್ಷವಾಗಿ ರಾಜ್ಯದಲ್ಲಿ ಸರ್ಕಾರಿ ನೌಕರರು ಆತ್ಮಹತ್ಯೆ ಮಾಡಿಕೊಳ್ಳೋ ಪರಸ್ಥಿತಿ ಬಂದಿದೆ ಎಂದರು.

ಮುಳುಗುವ ಹಡಗಿಗೆ ಖರ್ಗೆ ನಾಯಕರು

ಸರ್ಕಾರಿ ವರ್ಗಾವಣೆ ಉದ್ಯೋಗ ಆಗಬಾರದು. ವರ್ಗಾವಣೆ ಮಾಡಿ ಸುಗ್ಗಿ ಮಾಡ್ತೀನಿ ಅಂದ್ರೆ ಯಾರೂ ಒಪ್ಪಲ್ಲ. ರಾಜ್ಯದಲ್ಲಿ ಇವತ್ತು ಚುನಾವಣೆ ನಡೆದ್ರೆ ಕಾಂಗ್ರೆಸ್ 10 ಸೀಟ್ ಬರಲ್ಲ. ರಾಜ್ಯದಲ್ಲಿ 52 ಪರ್ಸೆಂಟ್ ಸರ್ಕಾರ ಇದೆ. ನಮ್ಮ ಮೇಲೆ ಸುಳ್ಳು ಆರೋಪ ಮಾಡಿದ್ರು. ಕಾಂಗ್ರೆಸ್ ಮುಳಗೋ ಹಡಗು ಆಗಿದ್ದು ಇದಕ್ಕೆ ಖರ್ಗೆ ಅವರನ್ನು ನಾಯಕನನ್ನು ಮಾಡಿದ್ದಾರೆ.

ಜಾಹೀರಾತು

ರಾಜ್ಯದಲ್ಲಿ ದಲಿತ ಸಿಎಂ ಕೂಗು ಎದ್ದಾಗ ಇವರನ್ನು ಮುಖ್ಯಮಂತ್ರಿ ಮಾಡಿಲ್ಲ. ಪರಮೇಶ್ವರ್ ಅವರನ್ನು ಕುತಂತ್ರದಿಂದ ಸೋಲಿಸಿದ್ರು. ಕೆಪಿಸಿಸಿ ಕಚೇರಿಯಲ್ಲಿ ವೋಟಿಂಗ್ ಆದಾಗ ಖರ್ಗೆ ಅವರಿಗೆ ವೋಟ್ ಬರಲಿಲ್ಲ.

ಅಂತಿಂಥವಳಲ್ಲ ಕಾಟೇರಮ್ಮ ದೇವಿ!


ಅಂತಿಂಥವಳಲ್ಲ ಕಾಟೇರಮ್ಮ ದೇವಿ!

ಇದನ್ನೂ ಓದಿ:
Koppal: ಗವಿಮಠದಿಂದ ವಿಶೇಷ ಚೇತನರಿಗೆ ಕಂಕಣ ಭಾಗ್ಯ, ಹೀಗೆ ನೋಂದಣಿ ಮಾಡಿ

ಕೆಪಿಸಿಸಿ ಕಚೇರಿಯಿಂದ ಮಲ್ಲಿಕಾರ್ಜುನ ಖರ್ಗೆ ಕಣ್ಣೀರು ಹಾಕುತ್ತಾ ಹೊರ ಬಂದಿದ್ದರು. ಇದೀಗ ಖರ್ಗೆ ಅವರ ಹೆಸರೇಳೋದು ಮೋಸದಾಟ. ರಾಹುಲ್ ಗಾಂಧಿ ಅವರಿಗೆ ಮೆಚ್ಯೂರಿಟಿ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

Source link

BTV Kannada
Author: BTV Kannada

Leave a Comment

RELATED LATEST NEWS