ಬೆಂಗಳೂರು: ಒಬ್ಬ ಕನ್ನಡಿಗ (Kannadiga) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun kharge ) ಪಿಎಂ ಆಗೋದಾದರೆ ನಾನು ವಿರೋಧ ಮಾಡಲು ನನಗೆ ಸಣ್ಣತನ ಇಲ್ಲ. ಇದನ್ನ ಯಾರು ಅಪಾರ್ಥ ಮಾಡಿಕೊಳ್ಳೋದು ಬೇಡ, ಎನ್ ಡಿ ಐ (NDA) ಮೈತ್ರಿಕೂಟ ಅನ್ನುವ ಮೊದಲು ನಾನು ಒಬ್ಬ ಕನ್ನಡಿಗ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ (HD Kumaraswamy) ದಲಿತ ಮತ್ತು ಕನ್ನಡಿಗ ಅಸ್ತ್ರ ಪ್ರಯೋಗ ಮಾಡಿದ್ದಾರೆ.
ಪರಮೇಶ್ವರ್ಗೆ ಏನು ಮಾಡಿದ್ರು ಗೊತ್ತು
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್ಡಿಕೆ, 2013 ರಲ್ಲಿ ಪರಮೇಶ್ವರ್ಗೆ ಏನು ಮಾಡಿದ್ದರು ಗೊತ್ತು. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದವರು, ಈಗೇನು ಸಿದ್ದರಾಮಯ್ಯ, ಪರಮೇಶ್ವರ ಚೆನ್ನಾಗಿ ಇದ್ದಾರೆ. ಮುಂದಿನ ಪ್ಲ್ಯಾನ್ ಏನ್ ಇದ್ದಿಯೋ ಗೊತ್ತಿಲ್ಲ. ಮೂಗಿಗೆ ತುಪ್ಪ ಸವರುವ ಕೆಲಸ ಮಾಡ್ತಿದ್ದಾರೆ.
ಇದನ್ನೂ ಓದಿ:
Hubballi: ಪ್ರಹ್ಲಾದ್ ಜೋಶಿ ಕಾಲಿಗೆ ಬಿದ್ದ ಈಶ್ವರಪ್ಪ; ನಯವಾಗಿ ತಿರಸ್ಕರಿದ ಕೇಂದ್ರ ಸಚಿವ
ಗರ್ಭಿಣಿಯರು ತಿಳಿದುಕೊಳ್ಳಬೇಕಾದ ವಿಷ್ಯ ಇದು!
ಕನ್ನಡಿಗ ಪ್ರಧಾನಿಯಾದ್ರೆ ನಾನು ಸ್ವಾಗತ
ಬೇರೆಯವರು ಖರ್ಗೆ ಹೆಸರು ಹೇಳಿದ್ದರು. ಇವರು ಖರ್ಗೆ ಹೆಸರು ಹೇಳೋದು ಬೇಡ, ಸುಮ್ನೆ ಇದ್ದಿದ್ರು ಸಾಕಾಗಿತ್ತು. ರಾಜ್ಯದಿಂದ ಖರ್ಗೆಯವರನ್ನ ಸಿದ್ದರಾಮಯ್ಯ ಓಡಿಸಿದ್ದರು. ಇದೀಗ ರಾಹುಲ್ ಗಾಂಧಿ ಹೆಸರು ಹೇಳ್ತಿದ್ದಾರೆ. ಒಬ್ಬ ಕನ್ನಡಿಗ ಪ್ರಧಾನಿಯಾದ್ರೆ ನಾನು ಸ್ವಾಗತ ಮಾಡ್ತೀನಿ, ವಿರೋಧ ಮಾಡುವ ಸಣ್ಣತನ ನನಗಿಲ್ಲ. ಇದಕ್ಕೆ ಯಾರೂ ಅಪಾರ್ಥ ಕಲ್ಪಿಸುವುದು ಬೇಡ ಎಂದು ವಿವರಿಸಿದ್ದಾರೆ.
I.N.D.I.A ಈ ಬಾರಿ ಗೆಲ್ಲೋದಿಲ್ಲ
ನಾನು ಎನ್ ಡಿ ಎ ಪಾರ್ಟ್ನರ್ ಆಗಿರಬಹುದು, ಆದರೆ ದೇವೇಗೌಡರ ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿಯಾದರೆ ಖುಷಿ. ಆದರೆ ದೇಶದಲ್ಲಿ ಎನ್ ಡಿ ಎ ಗೆಲ್ಲುವ ವಾತಾವರಣ ಇದೆ, ಇಂಡಿಯಾ ಮೈತ್ರಿಕೂಟ ಗೆಲ್ಲಲ್ಲ. ಉತ್ತರ ಪ್ರದೇಶದ ಅಖಿಲೇಶ್ ಯಾದವ್ ನಮಗೆ 80 ಸೀಟ್ ಬೇಕು ಎಂದು ಕೇಳ್ತಿದ್ದಾರೆ.
ಕರ್ನಾಟಕದಿಂದ ಖರ್ಗೆನ ಓಡಿಸಿದ್ರು..
2018ರ ಮೈತ್ರಿ ಸರ್ಕಾರದಲ್ಲೂ ಖರ್ಗೆ ಸಿಎಂ ಮಾಡಿ ಹೇಳಿದ್ದೇವೆ, ಆದರೆ ಅವರು ಖರ್ಗೆ ಸಿಎಂ ಮಾಡಲು ಅವರು ಒಪ್ಪಿಲ್ಲ. ಅವತ್ತು ಮೈತ್ರಿ ಮಾತುಕತೆಯಾದ ಎಲ್ಲ ನಾಯಕರು ಬದುಕಿದ್ದಾರೆ ಬೇಕಾದರೆ ಅವರನ್ನು ಕೇಳಿ. ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನ ಬರಲಿ ದಲಿತ ಸಮುದಾಯ ಅವರ ಪರ ನಿಂತಿದ್ದು, ನಮಗೆ 19 ಸೀಟ್ ಬರಲು ಅವರೇ ಕಾರಣ. ಪ್ರಧಾನಿ ಅಭ್ಯರ್ಥಿ ಖರ್ಗೆ ಹೆಸರು ಸಿದ್ದರಾಮಯ್ಯ ಹೇಳಿಲ್ಲ, ಇದನ್ನ ರಾಜ್ಯದ ದಲಿತ ಸಮುದಾಯ ಅರ್ಥ ಮಾಡಿಕೊಳ್ಳಬೇಕು ಎಂದು ಎಚ್ಡಿಕೆ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ