ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Minister Pralhad Joshi ) ಮನೆಗೆ ಮಾಜಿ ಸಚಿವ ಈಶ್ವರಪ್ಪ (KS Eshwarappa) ಅವರು ದಿಢೀರ್ ಅಂತ ಭೇಟಿ ನೀಡಿದ್ದಾರೆ. ಹುಬ್ಬಳ್ಳಿಯ (Hubballi) ಮಯೂರಿ ಎಸ್ಟೇಟ್ ನಲ್ಲಿರುವ ಪ್ರಹ್ಲಾದ್ ಜೋಶಿ ಮನೆಗೆ ಈಶ್ವರಪ್ಪ ಭೇಟಿ ನೀಡಿ ಮಾತುಕತೆ ನಡೆಸಿದ್ದು, ಲೋಕಸಭೆ ಚುನಾವಣೆ (Lokasabha Election 2024) ಹಿನ್ನೆಲೆಯಲ್ಲಿ ಇಬ್ಬರು ನಾಯಕರ ಭೇಟಿ ಭಾರೀ ಕೂತುಹಲ ಕೆರಳಿಸಿದೆ. ಕಳೆದ ಕೆಲ ದಿನಗಳಿಂದ ರಾಜ್ಯದ ವಿವಿಧ ಭಾಗದಲ್ಲಿ ಪ್ರವಾಸ ಮಾಡುತ್ತಿರುವ ಜೋಶಿ ಅವರು, ನಿನ್ನೆ ದಾವಣಗೆರೆ (Davanagere) ಪ್ರವಾಸ ಮುಗಿಸಿ ಹುಬ್ಬಳ್ಳಿಗೆ ವಾಪಸ್ ಆಗಿದ್ದರು. ಈ ನಡುವೆ ಇಂದು ಬೆಳಗ್ಗೆಯೇ ಜೋಶಿ ಮನೆಗೆ ಈಶ್ವರಪ್ಪ ಭೇಟಿ ನೀಡಿ ಮಾತುಕತೆ ನಡೆಸಿದರು.
ಜೋಶಿ ಹಾಸ್ಯ ಚಟಾಕಿ
ಈ ವೇಳೆ ಜೋಶಿ ಕಾಲಿಗೆ ನಮಸ್ಕರಿಸಲು ಈಶ್ವರಪ್ಪ ಮುಂದಾದರೂ ಆದರೆ, ಇದನ್ನು ನಯವಾಗಿಯೇ ಪ್ರಹ್ಲಾದ್ ಜೋಶಿ ತಿರಸ್ಕರಿದರು. ಇದೇ ವೇಳೆ ಮಾತನಾಡಿದ ಜೋಶಿ, ಹೇ ನಾವಿಬ್ಬರೂ ಒಂದೇ ಪಕ್ಷದವರು ಏನಿಲ್ಲ ಬಿಡಿ ಎಂದು ಹಾಸ್ಯ ಚಟಾಕಿ ಹಾರಿಸಿದರು. ಅಲ್ಲದೇ ಈಶ್ವರಪ್ಪ ಬಂದರೆ ಸುದ್ದಿ ಸಿಗುತ್ತೆ ಎಂದು ಜೋಶಿ ಹೇಳುತ್ತಿದ್ದಂತೆ ನೆರೆದಿದ್ದವರು ನಗೆ ಬೀರಿದರು.
ಇದನ್ನೂ ಓದಿ:
Bengaluru: ನ್ಯೂ ಇಯರ್ ಸಂಭ್ರಮಕ್ಕೂ ಮುನ್ನ ದುರಂತ; ಕುಡಿದ ಮತ್ತಿನಲ್ಲಿ 33ನೇ ಮಹಡಿಯಿಂದ ಬಿದ್ದ ಟಿಕ್ಕಿ ಸಾವು
ಈಶ್ವರಪ್ಪ ಭೇಟಿ ವೇಳೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಈಶ್ವರಪ್ಪ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಯಾವುದೋ ಕೆಲಸದ ನಿಮಿತ್ಯ ಹುಬ್ಬಳ್ಳಿಗೆ ಬಂದಿದ್ದರು. ನನ್ನನ್ನು ಭೇಟಿಯಾಗಿ ವಾಪಸ್ ಆಗಿದ್ದಾರೆ. ಸೌಹಾರ್ದಯುತವಾದ ಭೇಟಿಗಾಗಿ ಬಂದಿದ್ದರು ಎಂದು ತಿಳಿಸಿದರು.
ಬ್ಲ್ಯಾಕ್ ಸೀರೆಯಲ್ಲಿ ಸಾರಾ ತೆಂಡೂಲ್ಕರ್!
ಈಶ್ವರಪ್ಪ ಮಗ ಒಳ್ಳೆಯ ಕಾರ್ಯಕರ್ತ
ಈಶ್ವರಪ್ಪ ಮಗ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಓಡಾಡ್ತಿದ್ದಾನೆ, ಟಿಕೆಟ್ ವಿಷಯವನ್ನು ನಾವು ಮತ್ತು ಅವರು ಕೂತು ತೀರ್ಮಾನ ಮಾಡೋಕೆ ಆಗಲ್ಲ. ಟಿಕೆಟ್ ಕೊಡುವ ಅಥವಾ ಬಿಡುವ ವಿಚಾರವನ್ನು ರಾಷ್ಟ್ರೀಯ ನಾಯಕರು ಮಾಡುತ್ತಾರೆ. ಸಮಯ ಸಂದರ್ಭ ಬಂದಾಗ ರಾಷ್ಟ್ರೀಯ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ.
ಈಶ್ವರಪ್ಪ ಮಗ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಓಡಾಡ್ತಿರೋದು ಸತ್ಯ, ಈಶ್ವರಪ್ಪ ಮಗ ಒಳ್ಳೆಯ ಕಾರ್ಯಕರ್ತನೂ ಇದ್ದಾನೆ. ಕಳೆದ ಚುನಾವಣೆಯಲ್ಲಿ ಟಿಕೆಟ್ ಕೊಟ್ಟಿಲ್ಲ ಅಂತ ಅನೇಕರು ಪಕ್ಷ ಬಿಟ್ಟಾಗಲು ಈಶ್ವರಪ್ಪ ಇಲ್ಲಿಯೇ ಉಳಿದಿದ್ದಾರೆ. ಪಕ್ಷ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಇದೀಗ ಅವರ ಪುತ್ರ ಲೋಕಸಭೆ ಚುನಾವಣೆ ತಯಾರಿ ಮಾಡ್ತಿದ್ದಾರೆ. ಅದರಲ್ಲಿ ತಪ್ಪೇನಿಲ್ಲ, ಆದರೆ ಟಿಕೆಟ್ ವಿಚಾರವಾಗಿ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಅಂತ ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದರು. (ವರದಿ: ಶಿವರಾಮ ಅಸುಂಡಿ, ನ್ಯೂಸ್18, ಹುಬ್ಬಳ್ಳಿ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ