ಬೆಂಗಳೂರು: ಮಾಲ್ ಆಪ್ ಏಷ್ಯಾ (Mall of Asia) ಕ್ಲೋಸ್ ಮಾಡಿ ಆದೇಶ ಹೊರಡಿಸಲಾಗಿದೆ. ನಗರ ಪೊಲೀಸ್ ಕಮಿಷನರ್ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. ಇಂದಿನಿಂದ ಜನವರಿ 15ರವರೆಗೆ ಮಾಲ್ ಆಫ್ ಏಷ್ಯಾ ಬಂದ್ ಆಗಲಿದ್ದು, ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಬೆಂಗಳೂರಿನ ಯಲಹಂಕ (Yelhanka, Bengaluru) ಹೋಬಳಿಯ ಬ್ಯಾಟರಾಯನಪುರದ ಬಳ್ಳಾರಿ ರಸ್ತೆಯ ಭಾಗದಲ್ಲಿ ಮಾಲ್ ಆಫ್ ಏಷ್ಯಾ ಇದೆ. ತನ್ನ ಫಲಕಗಳಲ್ಲಿ ಶೇ.60ರಷ್ಟು ಕನ್ನಡ (Kannada Board) ಬಳಕೆ ಮಾಡಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಮಾಲ್ ಮೇಲೆ ದಾಳಿ ನಡೆಸಿ ಪ್ರತಿಭಟನೆ ನಡೆಸಿತ್ತು.
ಕರವೇ ಕಾರ್ಯಕರ್ತರು ಮಾಲ್ನೊಳಗೆ ನುಗ್ಗಿ ಗಲಾಟೆ ಮಾಡಿದ್ದರು. ಈ ಹಿನ್ನೆಲೆ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಡಿಸೆಂಬರ್ 31 ರಿಂದ ಜನವರಿ 15ರವರೆಗೆ ಮಾಲ್ ಆಫ್ ಏಷ್ಯಾ ಬಂದ್ ಮಾಡಿ ನಗರ ಪೊಲೀಸ್ ಆಯುಕ್ತರಾದ ದಯಾನಂದ್ ಆದೇಶ ಹೊರಡಿಸಿದ್ದಾರೆ.
ಇನ್ನು ಮಾಲ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ಹಾಕಲಾಗಿದೆ. ಮುಂಜಾಗ್ರತ ಕ್ರಮವಾಗಿ ಮಾಲ್ ಬಳಿ ಭದ್ರತೆಗಾಗಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಮಾಲ್ ವಿರುದ್ಧ ಪ್ರತಿಭಟನೆ
ಇನ್ನು ಮಾಲ್ ನಿರ್ಮಾಣದಿಂದ ಸಂಚಾರಕ್ಕೆ ಅನಾನೂಕೂಲ ಆಗಿದೆ ಸಾರ್ವಜನಿಕರು ಪ್ರತಿಭಟನೆ ಸಹ ನಡೆಸಿದ್ದರು. ಮಾಲ್ ಭಾಗದಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಆಗುತ್ತಿಲ್ಲ. ವಿಮಾನ ನಿಲ್ದಾಣಕ್ಕೆ ಹೋಗುವ ವಾಹನಗಳು, ಅಂಬುಲೆನ್ಸ್ ಗಳ ಓಡಾಟಕ್ಕೂ ಕಷ್ಟ ಆಗಲಿದೆ ಎಂಬ ದೂರುಗಳ ಮಾಲ್ ವಿರುದ್ಧ ದಾಖಲಾಗಿದ್ದವು.
ಸಾಲು ಸಾಲು ದೂರುಗಳು ದಾಖಲಾದ ಹಿನ್ನೆಲೆ ಪೊಲೀಸ್ ಆಯುಕ್ತ ದಯಾನಂದ್ ಅವರೇ ಮಾಲ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಪಾರ್ಕಿಂಗ್ ಸೇರಿದಂತೆ ಕೆಲವು ನ್ಯೂನ್ಯತೆಗಳು ಕಂಡು ಬಂದಿದ್ದವು.
37 IPS ಅಧಿಕಾರಿಗಳ ವರ್ಗಾವಣೆ
ಹೊಸ ವರ್ಷಕ್ಕೆ ಒಂದು ದಿನ ಮುಂಚೆಯೇ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಕೆಲ ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ಆದೇಶ ಮಾಡಲಾಗಿದೆ. 37 ಜನ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಕಮಲ್ ಪಂಥ್ ಅವರನ್ನು ಡಿಜಿಪಿ ನೇಮಕಾತಿ ವಿಭಾಗಕ್ಕೆ, ಅಲೋಕ್ ಕುಮಾರ್ ಅವರನ್ನು ಎಡಿಜಿಪಿ ಕರ್ನಾಟಕ ರೋಡ್ ಸೇಫ್ಟಿ ವಿಭಾಗದ ಸ್ಪೆಷಲ್ ಕಮಿಷನರ್ ಆಗಿ ನೇಮಕ ಮಾಡಲಾಗಿದೆ.
ಬೋಲ್ಡ್ ಫೋಟೋಸ್ ಶೇರ್ ಮಾಡಿದ ನಟಿ ಅಮೂಲ್ಯ!
ಇದನ್ನೂ ಓದಿ:
Bengaluru: ಹೊಸ ವರ್ಷಾಚರಣೆಗೆ ಪ್ಲಾನ್ ಮಾಡಿಕೊಂಡಿರೋ ಬೆಂಗಳೂರಿಗರೇ ಈ ವಿಷಯಗಳು ನಿಮಗೆ ಗೊತ್ತಿರಲಿ
ಸೀಮಂತ್ ಕುಮಾರ್ ಸಿಂಗ್ ಅವರನ್ನು ಬಿಎಮ್ ಟಿಎಫ್ ಎಡಿಜಿಪಿ ಆಗಿ ನೇಮಕ ಮಾಡಲಾಗಿದೆ ಹಾಗೂ ಹರಿಶೇಖರನ್ ಅವರನ್ನು ಎಡಿಜಿಪಿ ಹೋಂ ಗಾರ್ಡ್ ಹಾಗೂ ಸಿವಿಲ್ ಡಿಫೆನ್ಸ್ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ