ಮೈಸೂರು: ನನ್ನ ಮುಗಿಸಲು ಎಲ್ಲಾ ಪ್ರಯತ್ನ ಮಾಡುತ್ತಿದ್ದೀರಿ. ಕೊನೆಗೆ ನನ್ನ ಜೀವನ ತೆಗೆಯಬಹುದು ಅಷ್ಟೇ ಎಂದು ಸೋದರ ವಿಕ್ರಮ್ ಬಂಧನಕ್ಕೆ ಸಂಸದ ಪ್ರತಾಪ್ ಸಿಂಹ (MP Pratap Simha) ಭಾವುಕರಾಗಿದ್ದಾರೆ. ಸಿದ್ದರಾಮಯ್ಯ (CM Siddaramaiah) ಸರ್ ಬ್ರಿಲಿಯಂಟ್ ಫಾದರ್, ಬ್ರಿಲಿಯಂಟ್ ಪೊಲಿಟಿಷಿಯನ್. ನಿಮ್ಮ ಮಗನನ್ನ ಎಂ.ಪಿ. ಮಾಡಿಕೊಳ್ಳುವ ಸಲುವಾಗಿ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದೀರಿ. ಎಫ್ಐಆರ್ ನಲ್ಲಿ (FIR) ಹೆಸರಿಲ್ಲದಿದ್ದರೂ ನನ್ನ ತಮ್ಮನನ್ನು ಅರೆಸ್ಟ್ ಮಾಡಿಸಿದ್ದೀರಿ.ಮನೆಯಲ್ಲಿ ವಯೋವೃದ್ದ ತಾಯಿ ಇದ್ದಾಳೆ. ನನ್ನ ತಂಗಿ ಇದ್ದಾಳೆ ಅವರನ್ನು ಅರೆಸ್ಟ್ ಮಾಡಿಬಿಡಿ ಎಂದು ಸಿಎಂ ವಿರುದ್ಧ ಆಕ್ರೋಶ ಹೊರ ಹಾಕಿದರು.
ನನ್ನ ತೇಜೋವಧೆ ಮಾಡಿದ್ದಾಯಿತು. ಈಗ ನನ್ನ ಕುಟುಂಬವನ್ನ ಮುಗಿಸಲು ಪ್ರಯತ್ನ ಮಾಡುತ್ತಿದ್ದೀರಿ. ಆದ್ರೆ ಒಂದು ನೆನಪಿಟ್ಟುಕೊಳ್ಳಿ ಇದ್ಯಾವುದಕ್ಕು ನಾನು ಜಗ್ಗುವ ಮಗನಲ್ಲ ಎಂದು ಸಿಎಂ ವಿರುದ್ಧ ಆಕ್ರೋಶ ಹೊರಹಾಕಿದರು.
ಮಗನ ಭವಿಷ್ಯಕ್ಕಾಗಿ ಸಿಎಂ ರಾಜಕೀಯ
ಮಾನ್ಯ ಸಿದ್ದರಾಮಯ್ಯ ಅವರಲ್ಲಿ ಸಾಷ್ಟಾಂಗ ನಮಸ್ಕಾರಗಳು. ಅವರನ್ನ ನಾನು ಎರಡು ವಿಚಾರಕ್ಕೆ ಶ್ಲಾಘನೆ ಮಾಡಬೇಕು ಅಂದುಕೊಂಡಿದ್ದೇನೆ. ತನ್ನ ಮಗನ ರಾಜಕೀಯ ಭವಿಷ್ಯಕ್ಕಾಗಿ, ತಮ್ಮ ಮಗನನ್ನ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಲು ಯಾರನ್ನ ಬೇಕಾದರೂ ತುಳಿಯುತ್ತಾರೆ. ಇದನ್ನ ಸಿದ್ದರಾಮಯ್ಯ ಅವರಿಂದ ಕಲಿಯಬೇಕು ಎಂದು ಹೇಳಿದರು.
ನಿಮ್ಮಂತಹ ತಂದೆ ಯಾರಿಗೂ ಸಿಗಲ್ಲ
ಇಂತಹ ತಂದೆ ಎಲ್ಲರಿಗೂ ಸಿಗಲ್ಲ. ನೀವೊಬ್ಬ ಬ್ರಿಲಿಯೆಂಟ್ ಫಾದರ್. ನಿಜಕ್ಕೂ ನಿಮ್ಮನ್ನ ಮೆಚ್ಚಿದ್ದೇನೆ. ನಿಮಗೆ ಸಾಷ್ಟಾಂಗ ನಮಸ್ಕಾರಗಳು. ನಿಮ್ಮಂತಹ ತಂದೆ ಜಗತ್ತಿನಲ್ಲಿ ಯಾರಿಗೂ ಸಿಗಲ್ಲ. ಎಲ್ಲಾ ಮಕ್ಕಳಿಗೂ ನಿಮ್ಮಂತಹ ತಂದೆ ಸಿಗಲ್ಲ. ಪ್ರತಾಪ್ ಸಿಂಹ ಅಡ್ಡಿ ಆಗಿದ್ದಾನೆ ಅಂತ ಮುಗಿಸಲು ಮುಂದಾಗಿದ್ದೀರಿ. ನಿಮ್ಮಂತಹ ತಂದೆ ಪ್ರಪಂಚದಲ್ಲೇ ಎಲ್ಲೂ ಸಿಗಲ್ಲ ಎಂದು ವ್ಯಂಗ್ಯ ಮಾಡಿದರು.
ಬೆಳಗಾವಿಯಲ್ಲಿ ಹಿಂದುಳಿದ ಮಹಿಳೆಯನ್ನ ಬೆತ್ತಲೆ ಮಾಡಿ ಮೆರವಣಿಗೆ ಮಾಡಿದ್ದಾರೆ. ಆ ವಿಚಾರವನ್ನ ನೀವು ನನ್ನ ವಿಷ್ಯ ಇಟ್ಟುಕೊಂಡು ಡೈವರ್ಟ್ ಮಾಡ್ತೀರಿ. ಮೀಡಿಯಾ ಅಟೆನ್ಷನ್ ಡೈವರ್ಟ್ ಮಾಡಿದ್ರಿ. ನೀವು, ನಿಮ್ಮ ಸಚಿವ ಸಂಪುಟದ ಸದಸ್ಯರು, ಡಿಸಿಎಂ ಎಲ್ಲರೂ ಪಾರ್ಲಿಮೆಂಟ್ ಪಾಸ್ ಇಟ್ಕೊಂಡು ಮಾತಾಡ್ತೀರಿ.
ಶಿಕ್ಷೆಗೆ ಒಳಗಾಗಿರೋದು ಪ್ರತಾಪ್ ಸಿಂಹ
ನಿಮಗೆ 40 ವರ್ಷದ ಅನುಭವವಿದೆ. ನನ್ನ ಹೆಸರು ಇಟ್ಟುಕೊಂಡು, ತನಿಖೆ ನಡೆಸಬೇಕೆಂದು ವಿಷಯ ಹಸ್ತಾಂತರಿಸಿದ್ರಿ. ಇಲ್ಲಿ ನಿಮ್ಮ ಮಗ ಸುಪುತ್ರ ಮಿನಿಟ್ ಕೊಡುವ ಬದಲು ನನ್ನ ವಿರುದ್ಧ ತನಿಖೆ ಆಗಬೇಕು ಅಂತಾರೆ. ನಿನ್ನೆ ಘಟನೆಯಲ್ಲೂ ಆರುವರೆ ಕೋಟಿ ಚೆಕ್ ಬೌನ್ಸ್ ಮಾಡಿದ್ದು ಮಧು ಬಂಗಾರಪ್ಪ. ಆರು ತಿಂಗಳು ಜೈಲು ಸಜೆಗೆ ಒಳಗಾಗಿರುವುದು ಮಧು ಬಂಗಾರಪ್ಪ. ಆದರೆ ಪ್ರತಾಪ್ ಸಿಂಹನ ತಮ್ಮ ಅರೆಸ್ಟ್ ಮಾಡಿದ್ದೀರಿ.
ಡಿ. 16ರಂದು ಬೇಲೂರಿನ ಜಮೀನಿನ ವಿಚಾರಕ್ಕೆ ನನ್ನ ತಮ್ಮನ ಹೆಸರು ಎಳೆ ತರಲಾಗಿದೆ. ಮರವನ್ನ ಕಡಿದಿದ್ದಾರೆ ಎಂದು ಜಯಮ್ಮ, ರಾಜೇಶ್ ಶೆಟ್ಟಿ ವಿರುದ್ಧ ಎಫ್ ಐಆರ್ ದಾಖಲಾಗಿದ್ದಾರೆ. ರವಿ ಎಂಬವರು ಸಹಾಯ ಮಾಡಿದ್ರು ಪರಾರಿ ಆಗಿದ್ದಾರೆ. ಈವರಗೆ ಮೂವರನ್ನು ಹಿಡಿಯಲು ಆಗಿಲ್ಲ. ಎಲ್ಲಾ ಮರಗಳನ್ನ ಹಾಸನದ ಅರಣ್ಯ ಭವನದಲ್ಲಿ ಇರಿಸಿದ್ದೀರಿ.
ಕೋರ್ಟ್ಗೆ ಹಾಜರು ಪಡಿಸಿಲ್ಲ ಯಾಕೆ?
24 ನೇ ತಾರೀಖಿನವರಗೆ ನೀವು ಅವರನ್ನ ಬಂಧಿಸಲು ಸಾಧ್ಯವಾಗಿಲ್ಲ. ಹನುಮ ಜಯಂತಿ ಸಂದರ್ಭ ನಾನು ಒಂದು ಹೇಳಿಕೆ ನೀಡಿದ್ದೆ. ಅದಾದ ಎರಡೇ ಗಂಟೆಯಲ್ಲಿ ಪ್ರತಾಪ್ ಸಿಂಹನ ತಮ್ಮ ಮರಗಳ್ಳತನ ಮಾಡಿದ ಅಂತ ಕಾಂಗ್ರೆಸ್ ನವರು ಪೋಸ್ಟ್ ಹಾಕಿದ್ರಿ. ಎಫ್ಐಆರ್ ನಲ್ಲಿ ನನ್ನ ತಮ್ಮನ ಹೆಸರೇ ಇಲ್ಲ. ಆದರೂ ಆತನನ್ನ ಬಂಧಿಸುವ ಮೂಲಕ ಪ್ರತಾಪ್ ಸಿಂಹನನ್ನ ಮುಗಿಸುವ ಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಅಜೀರ್ಣ ಸಮಸ್ಯೆಗೆ Custard Apple ರಾಮಬಾಣ!
ನನ್ನ ಚಾರಿತ್ರ್ಯವಧೆ ಮಾಡ್ತೀರಿ? ನನ್ನ ಕುಟುಂಬದವರನ್ನ ಬೀದಿಗೆ ಎಳೆ ತರುತ್ತಿದ್ದೀರಿ? ನಿನ್ನೆ ಮೂರು ಗಂಟಗೆ ಅರೆಸ್ಟ್ ಮಾಡಿದ್ದೀರಿ? ಆದರೆ ಈವರಗೆ ಯಾಕೆ ಕೋರ್ಟಿಗೆ ಹಾಜರು ಮಾಡಿಲ್ಲ. ಪಿಸಿಎಫ್‌ಗೆ ಕರೆ ಮಾಡಿ ಮಾತನಾಡುತ್ತಿದ್ದೀನಿ , ನಿಮ್ಮ ತಮ್ಮನಿಗೆ ತೊಂದರೆ ಕೊಡಲ್ಲ ಅಂತೀರಿ. ಇಷ್ಟೊತ್ತು ಯಾಕೆ ಇಟ್ಕೊಂಡಿದ್ದೀರಿ ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ:
Mall of Asia: ಇಂದಿನಿಂದ 16 ದಿನ ಮಾಲ್ ಆಫ್ ಏಷ್ಯಾ ಬಂದ್; 144 ಸೆಕ್ಷನ್ ಜಾರಿ
ಅಡಿಷನಲ್ ಎಸ್ಪಿ ಮೇಲೆ ಕಾರ್ ಹತ್ತಿಸಿದ್ದೆ ಅಂತ ನನ್ನ ಮೇಲೆ ಎರಡು ಕ್ರಿಮಿನಲ್‌ಕೇಸ್ ಹಾಕಿದ್ರಿ. ನಿಮಗೆ ಮಗ ಕ್ಷೇತ್ರ ಬಿಟ್ಟುಕೊಟ್ಟಿದ್ದಾನೆ. ನಿಮ್ಮ ಮಗನನ್ನ ರಿಹ್ಯಾಬಿಲೇಟ್ ಮಾಡಬೇಕಿದೆ. ಅದಕ್ಕಾಗಿ ನೀವು ಏನು ಬೇಕಾದರೂ ಮಾಡುತ್ತಿದ್ದೀರಿ. ನಮ್ಮ ವಯೋವೃದ್ಧ ತಾಯಿ, ತಂಗಿ ಅರೆಸ್ಟ್ ಮಾಡಿ. ನಿಮ್ಮ ಕುಟುಂಬ ರಾಜಕಾರಣವೇ ಮುಂದುವರಿಯಲಿ ಎಂದು ವಾಗ್ದಾಳಿ ನಡೆಸಿದರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ