ಬೆಂಗಳೂರು: ನಂದಗೋಡನಹಳ್ಳಿಯಲ್ಲಿ ಮರಗಳ ಮಾರಣ ಹೋಮ ಕೇಸ್ ಈ ಹಿನ್ನೆಲೆ ಪ್ರತಾಪ್ ಸಿಂಹ (MP Pratap Simha) ಸಹೋದರ ವಿಕ್ರಂ ಸಿಂಹ (Vikram Simha) ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು (Forest Department officials) ಬಂಧನ ಮಾಡಿರುವ ಬಗ್ಗೆ ನ್ಯೂಸ್18ಗೆ ಬೆಂಗಳೂರು ಅರಣ್ಯ ಇಲಾಖೆಯ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಹಾಸನ (Hassan) ಅರಣ್ಯಧಿಕಾರಿಗಳು ವಿಕ್ರಂ ಸಿಂಹ ಅವರನ್ನು ಬಂಧನ ಮಾಡಿದ್ದಾರೆ. ಸದ್ಯ ಬೆಂಗಳೂರಿನ (Bengaluru) ಜಾಲಹಳ್ಳಿಯ ಗಂಗಮ್ಮ ಸರ್ಕಲ್ ಜಳಿ ಇರುವ ಜಾರಕಬಂಡೆ ಕಾವಲ್ ಫಾರೆಸ್ಟ್ ಕ್ಯಾಂಪ್ ನಿಂದ ವಿಕ್ರಂ ಸಿಂಹ ಅವರನ್ನು ಹಾಸನಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹಾಸನದಲ್ಲಿನ ಕೇಸ್ ಸಂಬಂಧ ವಿಕ್ರಂ ಸಿಂಹಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಹುಡುಕಾಟ ನಡೆಸಿದ್ದರು. ಪ್ರಕರಣ ಸಂಬಂಧ ಸ್ಟೇಟ್ಮೆಂಟ್ ಪಡೆಯಲು ಸಂಪರ್ಕಿಸಲು ಯತ್ನಿಸಿದ್ದರಂತೆ. ಆದರೆ ಈ ವೇಳೆ ತನಿಖಾಧಿಕಾರಿಗಳಿಗೆ ಪ್ರತಿಕ್ರಿಯೆ ನೀಡದೆ ವಿಕ್ರಂ ಸಿಂಹ ತಪ್ಪಿಸಿಕೊಳ್ತಿದ್ದರಂತೆ.
ಇದನ್ನೂ ಓದಿ:
Hubballi: ಪ್ರಹ್ಲಾದ್ ಜೋಶಿ ಕಾಲಿಗೆ ಬಿದ್ದ ಈಶ್ವರಪ್ಪ; ನಯವಾಗಿ ತಿರಸ್ಕರಿದ ಕೇಂದ್ರ ಸಚಿವ
Vaishnavi Gowda ಗ್ಲಾಮರಸ್ ಫೋಟೋಶೂಟ್!
ಬೆಂಗಳೂರಿನಲ್ಲಿ ಬಂಧನ, ಹಾಸನಕ್ಕೆ ಕರೆದೊಯ್ಯುತ್ತಿರುವ ಅಧಿಕಾರಿಗಳು
ತನಿಖಾಧಿಕಾರಿಗಳ ಕೈಗೆ ಸಿಗದಂತೆ ತಪ್ಪಿಸಿಕೊಳ್ಳುತ್ತಿದ್ದ ಕಾರಣ, ಹಾಸನದಿಂದ ಬೆಂಗಳೂರಿಗೆ ಬಂದು ವಾಸವಿದ್ದ ಮಾಹಿತಿ ಪಡೆದಿದ್ದ ಹಾಸನ ಅರಣ್ಯ ಅಧಿಕಾರಿಗಳು ಬೆಂಗಳೂರಿಗೆ ಆಗಮಿಸಿದ್ದಾರೆ. ಇಲ್ಲಿ ಸ್ಥಳೀಯ ಪೊಲೀಸರ ನೆರವು ಪಡೆದು ವಿಕ್ರಂ ಸಿಂಹ ಬಂಧನ ಮಾಡಿದ್ದಾರೆ. ಸಿಸಿಬಿ ಸಂಘಟಿಕ ಅಪರಾಧ ವಿಭಾಗ ಸಿಬ್ಬಂದಿ ಸಹಾಯದಿಂದ ಅವರನ್ನು ಬಂಧನ ಮಾಡಿದ್ದು, ಸದ್ಯ ವಿಕ್ರಂ ಸಿಂಹ ಹಾಸನ ಅರಣ್ಯಾಧಿಕಾರಿಗಳ ಬಂಧನದಲ್ಲಿದ್ದಾರೆ.
ಏನಿದು ಪ್ರಕರಣ?
ಹಾಸನದ ಬೇಲೂರು ತಾಲೂಕಿನ ನಂದಗೋಡನಹಳ್ಳಿಯ ಬಳಿ 10 ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಸುಮಾರು 126 ಮರಗಳನ್ನ ಕಡಿದಿರುವ ಬಗ್ಗೆ ಅರಣ್ಯ ಇಲಾಖೆಗೆ ದೀಪಕ್ ಎಂಬವರು ದೂರು ನೀಡಿದ್ದರಂತೆ. ಅಲ್ಲದೇ ಮರ ಕಟಾವು ಮಾಡಿರುವುದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗಮನಿಸಿದ್ದರಂತೆ. ಆ ಬಳಿಕ ಜಮೀನು ಒಪ್ಪಂದ ಪಡೆದಿದ್ದ ವಿಕ್ರಂ ಸಿಂಹ ಅವರೇ ಮರ ಕಡಿದು ಸಾಗಿಸಲು ಯತ್ನಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ತನಿಖೆ ಮಾಡಲು ಅರಣ್ಯ ಇಲಾಖೆ ಕೋರ್ಟ್ ಅನುಮತಿಯನ್ನು ಕೇಳಿತ್ತು.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದ ವಿಗ್ರಂ ಸಿಂಹ ಅವರು, ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಣ್ಣನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ನಾನು ಯಾವುದೇ ಮರ ಕಡಿದಿಲ್ಲ, ಇದಕ್ಕೂ ನನಗೂ ಸಂಬಂಧವಿಲ್ಲ. ಆದರೆ ಶುಂಠಿ ಬೆಳೆಯಲು ಆ ಭೂಮಿಯನ್ನು ನಾನು ಜುಲೈ 24ರಿಂದ ಒಂದು ವರ್ಷಕ್ಕೆ ಒಪ್ಪಂದ ಮಾಡಿಕೊಂಡಿದ್ದೆ. ಆದರೆ ಮರ ಕಡಿದಿರುವುದು ನನಗೆ ಗೊತ್ತಿಲ್ಲ. ಇದು ರಾಜಕೀಯ ಪ್ರೇರಿತವಾದದ್ದು ಎಂದು ಸ್ಪಷ್ಟನೆ ನೀಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ