Download Our App

Follow us

Home » ರಾಜಕೀಯ » ಶ್ರೀಕಾಂತ್​ ಪೂಜಾರಿ ರಿಲೀಸ್​ ಮಾಡಲು ರಾಜ್ಯ ಸರ್ಕಾರಕ್ಕೆ 48 ಗಂಟೆ ಗಡುವು ಕೊಟ್ಟ ಬಿ.ವೈ.ವಿಜಯೇಂದ್ರ..!

ಶ್ರೀಕಾಂತ್​ ಪೂಜಾರಿ ರಿಲೀಸ್​ ಮಾಡಲು ರಾಜ್ಯ ಸರ್ಕಾರಕ್ಕೆ 48 ಗಂಟೆ ಗಡುವು ಕೊಟ್ಟ ಬಿ.ವೈ.ವಿಜಯೇಂದ್ರ..!

ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯ ಸರ್ಕಾರಕ್ಕೆ 48 ಗಂಟೆ ಗಡುವು ಕೊಟ್ಟಿದ್ದಾರೆ.  ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಸರಿ ಸಿಡಿಗುಂಡು ಹಾರಿಸಿದ್ದಾರೆ. ಶ್ರೀಕಾಂತ್​ ಪೂಜಾರಿ ರಿಲೀಸ್​ ಮಾಡಲು 48 ಗಂಟೆ ಗಡುವು ಕೊಟ್ಟಿದ್ದು, 48 ಗಂಟೆಯೊಳಗೆ ರಿಲೀಸ್ ಮಾಡದೇ ಇದ್ರೆ  ಹುಬ್ಬಳ್ಳಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವ  ಎಚ್ಚರಿಕೆಯನ್ನು ವಿಜಯೇಂದ್ರ ನೀಡಿದ್ದಾರೆ.

Karnataka BJP State President: ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಫೈಟ್;‌ ಬಿ ವೈ ವಿಜಯೇಂದ್ರ ಬೆಂಬಲ ಯಾರಿಗೆ? | I Also Support If V Somanna Is Given The Post Of State President Says BY Vijayendra ...

ರಾಜ್ಯದಲ್ಲಿ ಹಿಂದೂ ವಿರೋಧಿ ಸರ್ಕಾರವಿದೆ.  ರಾಜ್ಯದಲ್ಲಿ ಮೊಗಲರ ಆಡಳಿತ ನಡಿತಿದ್ಯೊ..? ತಾಲಿಬಾನ್ ಸರ್ಕಾರ ನಡೀತಾ ಇದೆಯೋ..? ಕೆಲ ಸಮುದಾಯದವರ ಕೇಸ್​ಗಳನ್ನು ವಾಪಸ್ ಪಡೀತಾರೆ. ರೈತರು, ಕನ್ನಡ ಹೋರಾಟಗಾರರನ್ನು ಜೈಲಿಗೆ ಹಾಕ್ತಾರೆ. ಇದು ಹಿಂದೂ ವಿರೋಧಿ, ರೈತ ವಿರೋಧಿ ಸರ್ಕಾರ ಎಂದು ಫ್ರೀಡಂಪಾರ್ಕ್​​ನಲ್ಲಿ ಬಿ.ವೈ.ವಿಜಯೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಕರಸೇವಕರ ಕೇಸ್ ರೀ ಓಪನ್​ ವಿರುದ್ಧ ಬಿಜೆಪಿ ಸಮರ ನಡೆಸಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಫ್ರೀಡಂಪಾರ್ಕ್​​ನಲ್ಲಿ B.Y. ವಿಜಯೇಂದ್ರ ನೇತೃತ್ವದಲ್ಲಿ ಪ್ರೊಟೆಸ್ಟ್​ ನಡೆದಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಏಕಕಾಲಕ್ಕೆ ಪ್ರತಿಭಟನೆ ನಡೆಯುತ್ತಿದ್ದು, ಕರಸೇವಕರ ಕೇಸ್​ ರೀ ಓಪನ್​​ ಮಾಡಿದ್ದಕ್ಕೆ ಕೇಸರಿ ಪಡೆ ಆಕ್ರೋಶ ವ್ಯಕ್ತಪಡಿಸಿದೆ. ಈ ಬಿಜೆಪಿ-ಕಾಂಗ್ರೆಸ್​ ಸಮರಕ್ಕೆ ಹುಬ್ಬಳ್ಳಿ ಕೇಸ್​ ಕಾರಣವಾಗಿದೆ. ‘ರಾಮ ವಿರೋಧಿ ಕಾಂಗ್ರೆಸ್ ಸರಕಾರ‘ ಎಂಬ ಘೋಷಣೆಯಡಿ ಪ್ರೊಟೆಸ್ಟ್​ ನಡೆದಿದೆ.

ಪ್ರತಿಭಟನೆಗೆ ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಡಾ.ಅಶ್ವಥ್​​ ನಾರಾಯಣ್​​ , ಸುನಿಲ್​​ ಕುಮಾರ್​​, ಮುನಿರತ್ನ, ಕೆ.ಗೋಪಾಲಯ್ಯ ಹಾಗೂ ಪಿ.ಸಿ.ಮೋಹನ್​​​​​ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ಹಾಗೆಯೇ ರಾಜ್ಯ ಪದಾಧಿಕಾರಿಗಳು, ಬೆಂಗಳೂರು ನಗರದ ಮೂವರು ಅಧ್ಯಕ್ಷರು ಭಾಗಿಯಾಗಿದ್ದು, BBMP ಮಾಜಿ ಕಾರ್ಪೊರೇಟರ್​​ಗಳು, ಪಕ್ಷದ ಮುಖಂಡರು ಭಾಗಿಯಾಗಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ.

Btv Kannada1
Author: Btv Kannada1

Leave a Comment

RELATED LATEST NEWS

Top Headlines

Live Cricket