ಬೆಂಗಳೂರು : ಕರ ಸೇವಕರನ್ನು ಟಾರ್ಗೆಟ್ ಮಾಡಿಲ್ಲ, ಹಳೆಯ ಕೇಸ್ಗಳನ್ನು ಕ್ಲಿಯರ್ ಮಾಡಲು ಸೂಚನೆ ನೀಡಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ ಹುಬ್ಬಳ್ಳಿಯಲ್ಲಿ ಅರೆಸ್ಟ್ ಆದ ವ್ಯಕ್ತಿ ಮೇಲೆ 16 ಕೇಸ್ಗಳಿವೆ, ಈ ಕೇಸ್ಗಳಲ್ಲಿ ಕೆಲವು ಇತ್ಯರ್ಥ ಆಗಿವೆ, ಇನ್ನೊಂದಷ್ಟು ಬಾಕಿ ಇವೆ. ಇಂಥವರಿಗೆ ಬಿಜೆಪಿ ನಾಯಕರು ಸಹಕಾರ ಕೊಡುತ್ತಿದ್ದಾರೆ. ಬಿಜೆಪಿಯವರು ಸರ್ಕಾರದ ತಾಕತ್ತಿನ ಬಗ್ಗೆ ಮಾತ್ನಾಡ್ತಾರೆ, ಇದರಲ್ಲಿ ತಾಕತ್ತಿನ ಪ್ರಶ್ನೆ ಏನು ಬಂತು, ಪ್ರತಿಭಟನೆ ಮಾಡೋದು ಎಲ್ಲರ ಹಕ್ಕಾಗಿದೆ.
ಬಿಜೆಪಿಯವರ ಪ್ರತಿಭಟನೆಗೆ ನಮ್ಮ ಅಡ್ಡಿ ಇಲ್ಲ. ಹುಬ್ಬಳ್ಳಿಯಲ್ಲಾದ್ರೂ ಪ್ರೊಟೆಸ್ಟ್ ಮಾಡಲಿ, ಎಲ್ಲಾದ್ರೂ ಮಾಡಲಿ. ಕಾನೂನು ಮೀರಿದರೆ ಪೊಲೀಸರು ಕ್ರಮ ಜರುಗಿಸುತ್ತಾರೆಂದು ಹೇಳಿದರು.
ಇದನ್ನೂ ಓದಿ : ಸಿದ್ದರಾಮಯ್ಯನವ್ರು ಬಾಬರ್ನ ಅವತಾರ..ಹಿಂದೂ ಸಮಾಜ ಬಾಬರ್ ಸಂತತಿಯನ್ನ ಸರ್ವ ನಾಶ ಮಾಡುತ್ತೆ:ಶಾಸಕ ಚನ್ನಬಸಪ್ಪ..!
Author: Btv Kannada1
Post Views: 47