ಬೆಂಗಳೂರು : ಈಗಾಗಲೇ ಲೋಕಸಮರಕ್ಕೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ತಯಾರಿ ನಡೆಸಿದ್ದು, ಆ ಮೂರು ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದಾರೆ. ಹೆಚ್ಡಿಕೆ ಜನರ ಒಲವು ಅರಿಯಲು ಮುಂದಾಗಿ, ಸರ್ವೆ ಮಾಡಿಸಲಿದ್ದಾರೆ. ಯಾವುದು ಆ ಮೂರು ಕ್ಷೇತ್ರ ಅಂತೀರಾ ಈ ಸ್ಟೋರಿ ಓದಿ..
ಹೆಚ್ಡಿಕೆ ದೇವೇಗೌಡರನ್ನು ಸೋಲಿಸಿದ್ದ ತುಮಕೂರಿನಲ್ಲಿ ಎಚ್ಚರಿಕೆ ಹೆಜ್ಜೆ ಇಟ್ಟಿದ್ದು, ನಿಖಿಲ್ ಕುಮಾರಸ್ವಾಮಿ ನಿಂತು ಸೋತ ಮಂಡ್ಯ ಕ್ಷೇತ್ರ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರ, ಚಿಕ್ಕಬಳ್ಳಾಪುರದ ಮೇಲೆ ಕಣ್ಣಿಟ್ಟಿದ್ದಾರೆ. 3 ಕ್ಷೇತ್ರಗಳಲ್ಲಿ ಸರ್ವೆ ಮಾಡಿ ಒಂದು ಕ್ಷೇತ್ರ ಆಯ್ಕೆ ಮಾಡುವ ಸಾಧ್ಯತೆಗಳಿವೆ.
ಮಂಡ್ಯ, ಬೆಂ.ಗ್ರಾಮಾಂತರ, ಚಿಕ್ಕಬಳ್ಳಾಪುರದಲ್ಲಿ ದಳಪತಿ ಆಂತರಿಕ ಸಮೀಕ್ಷೆ ನಡೆಸಲಿದ್ದಾರೆ. ಎಲ್ಲಿ ಸ್ಪರ್ಧೆ ಮಾಡಿದ್ರೆ ಗೆಲ್ಲುವ ಚಾನ್ಸ್ ಎಷ್ಟು ಪರ್ಸೆಂಟೇಜ್ ಎಂದು ಸರ್ವೆ ಮಾಡಲಿದ್ದಾರೆ. ಮಂಡ್ಯದಲ್ಲಿ ನಿಖಿಲ್ ಸೋತ ಬಳಿಕ ಜನರ ಅಭಿಪ್ರಾಯ ಹೇಗಿದೆ..? ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಬಲ ಸಿಕ್ಕರೇ ತಾವು ಗೆಲ್ಲಬಹುದೇ..? ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ.ಸುರೇಶ್ ವಿರುದ್ಧ ಗೆಲ್ಲಬಹುದಾ..?
ಆಂತರಿಕ ಸಮೀಕ್ಷೆ ಆಧರಿಸಿ ಲೋಕಸಭೆಗೆ ಸ್ಪರ್ಧೆ ಬಗ್ಗೆ ಹೆಚ್ಡಿಕೆ ನಿರ್ಧರಿಸಿದ್ದಾರೆ. ಪಾಸಿಟಿವ್ ರೆಸ್ಪಾನ್ಸ್ ಬಂದ ಕಡೆ ಹೆಚ್ಡಿಕೆ ಮೈತ್ರಿ ಅಭ್ಯರ್ಥಿಯಾಗೋ ಸಾಧ್ಯತೆಗಳಿವೆ.