ಬೆಂಗಳೂರು : ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರು ಹೊಸ ವರ್ಷಕ್ಕೆ ಮತ್ತೊಂದು ಮಾದರಿ ಕಾರ್ಯ ಮಾಡಿ ಗಮನ ಸೆಳೆದಿದ್ದಾರೆ. ಡಾ.ರಾಜ್ ಕುಮಾರ್ ನೇತ್ರದಾನ ಕೇಂದ್ರಕ್ಕೆ ಕಣ್ಣುದಾನ ಮಾಡಿದ್ದಾರೆ. ಕಣ್ಣುದಾನ ಮಾಡಿ ಪೊಲೀಸರು ಮತ್ತು ನಾಗರಿಕರಿಗೂ ಕಮಿಷನರ್ ಮಾದರಿಯಾಗಿದ್ದಾರೆ.
ನಾರಾಯಣ ನೇತ್ರಾಲಯದ ರಾಜ್ ಕುಮಾರ್ ನೇತ್ರದಾನ ಕೇಂದ್ರವು ಕಮಿಷನರ್ಗೆ ಪ್ರಶಂಸಾ ಪತ್ರ ನೀಡಿದೆ. ಈ ಬಾರಿ ಹೊಸವರ್ಷಕ್ಕೆ ಸಿಹಿ ತಿನಿಸು, ಹೂ ಗುಚ್ಚ ಬೇಡ.
ನನಗೆ ವಿಶ್ ಮಾಡಲು ತರುವ ಬೊಕೆ, ಸ್ವೀಟ್ ಹಣವನ್ನು ಅನಾಥಾಶ್ರಮಕ್ಕೆ ಬಳಸಿ ಎಂದು ಕಮಿಷನರ್ ಕರೆ ನೀಡಿದ್ದರು. ಹೊಸ ವರ್ಷದ ದಿನ ಅನಾಥಾಶ್ರಮಕ್ಕೆ ಪತ್ನಿ ಸಮೇತ ಭೇಟಿ ನೀಡಿ ವಿಶ್ ಮಾಡಿದ್ದರು. ಇದೀಗ ನೇತ್ರದಾನ ಮಾಡುವ ಮೂಲಕ ಇನ್ನೊಬ್ಬರಿಗೆ ಮಾದರಿಯಾಗುವ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ : ಗುಂಡು ಹಾರಿಸಿಕೊಂಡು ವಿದ್ಯಾರ್ಥಿ ಆತ್ಮ*ಹತ್ಯೆ..!
Author: Btv Kannada1
Post Views: 75