ಬೆಂಗಳೂರು : ಕರಸೇವಕರ ಕೇಸ್ ರೀ ಓಪನ್ ವಿರುದ್ಧ ಫ್ರೀಡಂ ಪಾರ್ಕ್ನಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ.
ಇದೇ ವೆಳೆ ಬಿಜೆಪಿ ಶಾಸಕ ಚನ್ನಬಸಪ್ಪ ಮಾತನಾಡಿ, ಸಿದ್ದರಾಮಯ್ಯನವ್ರು ಬಾಬರ್ನ ಅವತಾರ, ಸಿಎಂ ಸಿದ್ದು ವರ್ತನೆ ನೋಡಿದ್ರೆ ಬಾಬರ್ ವರ್ತನೆ ಕಾಣ್ತಿದೆ.
ಹಿಂದೂ ಸಮಾಜವು ಬಾಬರ್ ಸಂತತಿ ಸರ್ವ ನಾಶ ಮಾಡುತ್ತೆ ಎಂದು ಸರ್ಕಾರ ವಿರುದ್ದ ವಾಗ್ದಾಳಿ ನಡೆಸಿದ್ಧಾರೆ.
ಅನ್ಯ ಸಮುದಾಯದ ಗೂಂಡಾಗಳನ್ನು ರಿಲೀಸ್ ಮಾಡ್ತೀರಿ. ಹಿಂದೂ ಕಾರ್ಯಕರ್ತರ ಕೇಸ್ ರೀ ಓಪನ್ ಮಾಡ್ತೀರಿ.
ಹೆಸರಲ್ಲಿ ಸಿದ್ದರಾಮಯ್ಯ ಅಂತಾ ಇಟ್ಕೊಂಡ್ರೆ ಸಾಲದು ಸಿದ್ದರಾಮುಲ್ಲಾ ಖಾನ್ ಅಂತಾ ಹೆಸರು ಬದಲಿಸಿಕೊಳ್ಳಿ.
ಸುನಿಲ್ ಕುಮಾರ್, ನಾನೂ ಈ ಹಿಂದೆ ಹೋರಾಟ ಮಾಡಿದ್ದೇವೆ. ತಾಕತ್ತಿದ್ರೆ ನಮ್ಮನ್ನು ಅರೆಸ್ಟ್ ಮಾಡಿ, ಜೈಲಿಗೆ ಹಾಕಿ ಎಂದು ರಾಜ್ಯ ಸರ್ಕಾರಕ್ಕೆ ಸವಾಲ್ ಎಸೆದಿದ್ಧಾರೆ.
ನಿಮ್ಮ ಗೊಡ್ಡು ಬೆದರಿಕೆ, ಲಾಠಿ ಏಟಿಗೆ ಹೆದರಲ್ಲ, ಮುಸ್ಲಿಮರ ವೋಟ್ಗಾಗಿ ಇಷ್ಟೆಲ್ಲಾ ಮಾಡ್ತಿದ್ದೀರಾ..? ರಾಮನ ಪಾದ ಸೇವೆ ಮಾಡಿ ನಿಮ್ಮ ಪಾಪ ತೊಳೆದುಕೊಳ್ಳಿ.
ಈಗಲೂ ಕಾಲ ಮಿಂಚಿಲ್ಲ, ಕರಸೇವಕರ ರಿಲೀಸ್ ಮಾಡಿ. ಇಲ್ದಿದ್ರೆ ಸರ್ಕಾರದ ಹೆಡೆಮುರಿ ಕಟ್ಟುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಆತ್ಮಹ*ತ್ಯೆಗೆ ಯತ್ನಿಸಿದ್ರಾ ಡ್ರೋನ್ ಪ್ರತಾಪ್?