ಬೆಂಗಳೂರು : ಗುಂಡು ಹಾರಿಸಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ಧಾನೆ. ಡಬಲ್ ಬ್ಯಾರೆಲ್ ಗನ್ನಿಂದ ಶೂಟ್ ಮಾಡ್ಕೊಂಡ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 19 ವರ್ಷದ ರಿಶಿ ಉತ್ತಪ್ಪ ಗುಂಡು ಹಾರಿಸಿಕೊಂಡ ವಿದ್ಯಾರ್ಥಿಯಾಗಿದ್ದಾನೆ.
ಕೊಡಗು ಮೂಲದ ರಿಶಿ ಉತ್ತಪ್ಪ ಆರ್.ಆರ್ ಕಾಲೇಜುನಲ್ಲಿ ಪ್ರಥಮ ವರ್ಷದ BE ಓದುತ್ತಿದ್ದನು. ರಿಶಿ ತಂದೆ ನೈಸ್ ಕಂಪನಿಯಲ್ಲಿ ಸೆಕ್ಯೂರಿಟಿಯಾಗಿದ್ದರು.
ತಂದೆಯ ಡಬಲ್ ಬ್ಯಾರಲ್ ಗನ್ನಿಂದಲೇ ಮಗ ಶೂಟ್ ಮಾಡಿಕೊಂಡಿದ್ಧಾನೆ. ತಿರುಮಲಪುರದ ಮನೆಯಲ್ಲಿ ವಿದ್ಯಾರ್ಥಿ ಸೂಸೈಡ್ ಮಾಡಿಕೊಂಡಿದ್ದು, ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿದ್ಧಾರೆ.
ನಿನ್ನೆ ಸಂಜೆ 6.30ರ ಸುಮಾರಿಗೆ ಹೃದಯದ ಎಡಭಾಗಕ್ಕೆ ಗುಂಡು ಹಾರಿಸಿಕೊಂಡು ವಿದ್ಯಾರ್ಥಿ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದು, ಹೊರ ಹೋಗಿದ್ದ ತಂದೆ ರವಿ ತಮ್ಮಯ್ಯ 9 ಗಂಟೆಗೆ ವಾಪಸ್ ಆಗಿದ್ದರು.
ರಕ್ತದ ಮಡುವಿನಲ್ಲಿದ್ದ ಮಗನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು ರಿಶಿ ಬದುಕಲಿಲ್ಲ. ರಿಶಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ಮೊಬೈಲ್ ಫೋನ್ ವಶಕ್ಕೆ ಪಡೆದು ಪೊಲೀಸರ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಮಗಳನ್ನೇ ಕಿಡ್ನಾಪ್ ಮಾಡಿಸಿದ್ಳಾ ತಾಯಿ?