ಬಾಕ್ಸಾಫೀಸ್ನಲ್ಲಿ ಮುನ್ನುಗ್ಗುತ್ತಿರುವ ಕಾಟೇರ ಸಿನಿಮಾ ಸಕ್ಸಸ್ ಮೀಟ್ ಬೆನ್ನಲ್ಲೇ ನಿನ್ನೆ ಸೆಲಬ್ರೆಟಿ ಶೋ ನಡೆದಿದೆ. ಕಳೆದ ರಾತ್ರಿ ಒರಾಯನ್ ಮಾಲ್ನಲ್ಲಿ ಸಿನಿಮಾ ರಂಗದ ಗಣ್ಯರಿಗಾಗಿ ವಿಶೇಷ ಶೋ ಆಯೋಜಿಸಲಾಗಿತ್ತು.
ದರ್ಶನ್ರ ‘ಕಾಟೇರ’ ಸಿನಿಮಾ ನೋಡಲು ಹಲವು ಗಣ್ಯರು ಆಗಮಿಸಿದ್ದರು. ಈ ವೇಳೆ ನಟ ದರ್ಶನ್ ಅವರು ನೆಲದ ಮೇಲೆ ಕುಳಿತು ಕಾಟೇರ ಸಿನಿಮಾ ನೋಡಿದ್ದಾರೆ.
ಉಪೇಂದ್ರ, ರಮೇಶ್ ಅರವಿಂದ್, ಅಭಿಷೇಕ್ ಅಂಬರೀಶ್, ಡಾಲಿ ಧನಂಜಯ್, ಶ್ರೀಮುರುಳಿ, ಧನ್ವೀರ್, ಪ್ರಜ್ವಲ್ ದೇವರಾಜ್, ಯೋಗರಾಜ್ ಭಟ್, ವಸಿಷ್ಠ ಸಿಂಹ, ಪ್ರಿಯಾಂಕ ಉಪೇಂದ್ರ,
ರಕ್ಷಿತಾ ಪ್ರೇಮ್, ಸುಮಲತಾ ಅಂಬರೀಶ್, ಹರಿಪ್ರಿಯ, ಸಾಧುಕೋಕಿಲ, ಅಜಯ್ ರಾವ್, ಸತೀಶ್ ನೀನಾಸಂ, ಎಸ್.ನಾರಾಯಣ್ ಸೇರಿದಂತೆ ಚಿತ್ರರಂಗದ ಹಲವು ನಟ-ನಟಿಯರು ಬಂದಿದ್ದರು.
ಬಂದ ಎಲ್ಲಾ ಕಲಾವಿದರನ್ನು ದರ್ಶನ್ ಪ್ರೀತಿಯಿಂದ ಸ್ವಾಗತಿಸಿದರು. ಆ ಬಳಿಕ ದರ್ಶನ್ ಅವರು ಥಿಯೇಟರ್ ಒಳಗೆ ತೆರಳಿದರು. ದರ್ಶನ್, ರಾಕ್ಲೈನ್ ವೆಂಕಟೇಶ್ ಮೆಟ್ಟಿಲ ಮೇಲೆ ಕುಳಿತು ಸಿನಿಮಾ ವೀಕ್ಷಿಸಿದ್ದಾರೆ.
ಈ ಫೋಟೋ ವೈರಲ್ ಆಗಿದ್ದು, ದರ್ಶನ್ ಯಾವಾಗಲೂ ಸಿಂಪಲ್ ಆಗಿ ಇರೋಕೆ ಇಷ್ಟ ಪಡುತ್ತಾರೆಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಕಾಟೇರ ಸಿನಿಮಾ ಬಿಡುಗಡೆ ಆದ ಮೊದಲನೇ ದಿನವೇ 19.79 ಕೋಟಿ ರೂಪಾಯಿ ಬಾಚಿತ್ತು. ನಂತರ ಅಂದ್ರೆ 2ನೇ ದಿನವೂ ಅಬ್ಬರಿಸಿ 17.35 ಕೋಟಿ ಕಲೆಕ್ಷನ್ ಮಾಡಿತ್ತು.
ಈ ನಡುವೆ 3ನೇ ದಿನ ‘ಕಾಟೇರ’ ಸಿನಿಮಾ ಬರೋಬ್ಬರಿ 20.94 ರೂಪಾಯಿ ಗಳಿಸಿತ್ತು. ಇದೀಗ ಅಂದ್ರೆ 4ನೇ ದಿನ ಧಾಂ ಧೂಂ ಅಂತಾ 18.26 ಕೋಟಿ ರೂಪಾಯಿ ಗಳಿಸಿದೆಯಂತೆ.
5ನೇ ದಿನಕ್ಕೆ 86.84 ಕೋಟಿ ಕಲೆಕ್ಷನ್ ಮಾಡುವ ಮೂಲಕ 2023-24 ರ ನಂ.1 ಸಿನಿಮಾವಾಗಿ ರಾರಾಜಿಸುತ್ತಿದೆ.
ವಿಶೇಷ ಅಂದ್ರೆ ಕರ್ನಾಟಕದಲ್ಲಿ 50ಕ್ಕೂ ಹೆಚ್ಚು ಚಿತ್ರಮಂದಿರಗಳು ಮುಚ್ಚಿಕೊಂಡಿತ್ತು. ಆದ್ರೆ ಕಾಟೇರ ಸಿನಿಮಾದಿಂದ ಆ ಎಲ್ಲಾ ಚಿತ್ರಮಂದಿರಗಳಿಗೆ ಮರುಜೀವ ಬಂದಿದೆ.
ಮುಂದಿನ ದಿನಗಳಲ್ಲಿ ವಿದೇಶದಲ್ಲಿಯೂ ಕನ್ನಡ ವರ್ಷನ್ನಲ್ಲಿ ಕಾಟೇರ ಸಿನಿಮಾ ರಿಲೀಸ್ ಆಗುತ್ತದೆ. ಹಾಗೇ ತಮಿಳು ತೆಲುಗುನಲ್ಲಿಯೂ ಕಾಟೇರ ಸಿನಿಮಾ ಡಬ್ ಆಗಿ ರಿಲೀಸ್ ಆಗಲಿದೆ.
ಇದನ್ನೂ ಓದಿ : ಜ.13ಕ್ಕೆ KSET ಪರೀಕ್ಷೆ: ವಸ್ತ್ರ ಸಂಹಿತೆ ಕಡ್ಡಾಯ..