ಮೈಸೂರು : ನಂಜುಂಡೇಶ್ವರ ಉತ್ಸವಮೂರ್ತಿಗೆ ಎಂಜಲು ನೀರು ಎರಚಿರುವ ಘಟನೆ ನಡೆದಿದೆ.
ಈ ಪ್ರಕರಣ ಸಂಬಂಧಿಸಿದಂತೆ ಆರೋಪಿಗಳನ್ನು ಅರೆಸ್ಟ್ ಮಾಡುವಂತೆ ಹಿಂದೂ ಸಂಘಟನೆಗಳು ಆಗ್ರಹಿಸಿ ಇಂದು ನಂಜನಗೂಡು ಬಂದ್ಗೆ ಕರೆಕೊಟ್ಟಿದೆ. ನಂಜುಂಡೇಶ್ವರನ ಭಕ್ತರು, ಹಿಂದೂ ಮುಖಂಡರು ಬಂದ್ ಮಾಡಲಿದ್ದಾರೆ.
ಸ್ವಯಂ ಪ್ರೇರಿತ ಬಂದ್ ಮಾಡುವಂತೆ ಭಿತ್ತಿ ಪತ್ರ ವೈರಲ್ ಆಗಿದೆ. ಬಂದ್ ಸಾಧ್ಯತೆ ಹಿನ್ನೆಲೆಯಲ್ಲಿ ನಿನ್ನೆ ADC ಶಾಂತಿ ಸಭೆ ನಡೆಸಿದ್ದರು, ದೇವಾಲಯದ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ಇತರರಿದ್ದರು.
ದೇವರಿಗೆ ಎರಚಿರುವುದು ಶುದ್ದ ನೀರು, ಎಂಜಲು ನೀರಲ್ಲ, ಯಾರೂ ವದಂತಿಗೆ ಕಿವಿಗೊಡಬೇಡಿ ಎಂದು ಸಭೆಯಲ್ಲಿ ಮನವಿ ಮಾಡಲಾಗಿತ್ತು. ಶಾಂತಿ ಸಭೆ ನಂತರವೂ ಸೋಷಿಯಲ್ ಮೀಡಿಯಾದಲ್ಲಿ ಬಂದ್ ಪೋಸ್ಟ್ ಮಾಡಿದ್ದಾರೆ.
ನಂಜನಗೂಡು ಬಂದ್ಗೆ ತಾಲೂಕು ಆಡಳಿತದ ಅನುಮತಿ ಪಡೆದಿಲ್ಲ, ಅನುಮತಿ ಕೊಟ್ಟಿಲ್ಲ ಎಂದು ತಹಶೀಲ್ದಾರ್ ಶಿವಪ್ರಸಾದ್ ಮಾಹಿತಿ ತಿಳಿಸಿದರು. ಬಂದ್ ಮಾಡುತ್ತಿರುವ ಬಗ್ಗೆ ನಮಗೆ ಯಾವುದೇ ಮನವಿ ಬಂದಿಲ್ಲ.
ಎಂದಿನಂತೆ ಬಸ್ ಸಂಚಾರ, ಸ್ಕೂಲ್-ಕಾಲೇಜು, ಕಚೇರಿ ಓಪನ್ ಇರ್ತವೆ. ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸಲು ಬಿಡಲ್ಲ, ಬಂದ್ ಮಾಡಿದ್ರೆ ಕಾನೂನು ರೀತಿ ಕ್ರಮ ಎಂದು ತಹಶೀಲ್ದಾರ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ಜ.13ಕ್ಕೆ KSET ಪರೀಕ್ಷೆ: ವಸ್ತ್ರ ಸಂಹಿತೆ ಕಡ್ಡಾಯ..