Download Our App

Follow us

Home » Uncategorized » ಶಿರಾಡಿಘಾಟ್​​ನಲ್ಲಿ ಲಾರಿ-ಟ್ರಕ್ ನಡುವೆ ಅಪಘಾತ..!

ಶಿರಾಡಿಘಾಟ್​​ನಲ್ಲಿ ಲಾರಿ-ಟ್ರಕ್ ನಡುವೆ ಅಪಘಾತ..!

ಪುತ್ತೂರು : ದಕ್ಷಿಣ ಕನ್ನಡ ವನ್ನು ಬೆಂಗಳೂರಿಗೆ ಸಂಪರ್ಕಿಸುವ ಶಿರಾಡಿಘಾಟ್ ನಲ್ಲಿ ಲಾರಿ ಹಾಗೂ ಟ್ರಕ್ ನಡುವೆ ಅಪಘಾತ ಸಂಭವಿಸಿದೆ.

ತುಂತುರು ಮಳೆ ಇದ್ದ ಕಾರಣ ಬ್ರೇಕ್ ಹಾಕಿದ ರಭಸಕ್ಕೆ ಸರಕಿನ ಲಾರಿ ವಿರುದ್ದ ದಿಕ್ಕಿನಲ್ಲಿ ಬರುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

ಲಾರಿ ಹಿಂದೆ ಇದ್ದ ಬಾಸ್ಕೆಟ್ ಎದುರಿನಲ್ಲಿದ್ದ ಟ್ರಕ್ ಗೆ ಡಿಕ್ಕಿ ಹೊಡೆದಿದ್ದು ಸೀಟ್ ಬೆಲ್ಟ್ ಧರಿಸಿದ್ದ ಕಾರಣ ಟ್ರಕ್ ಚಾಲಕ ಅಪಾಯದಿಂದ ಪಾರಾಗಿದ್ದಾನೆ.

ಅಪಘಾತದ ದೃಶ್ಯ ಟ್ರಕ್ ನ‌ ಕ್ಯಾಬಿನ್ ಕೆಮರಾದಲ್ಲಿ ಸೆರೆಯಾಗಿದೆ. ಎರಡೂ ವಾಹನಗಳ ಚಾಲಕ ಹಾಗೂ ನಿರ್ವಾಹಕರು ಅಪಾಯದಿಂದ ಪಾರಾಗಿದ್ದು ಘಟನೆಯಿಂದ ಈ ಹೆದ್ದಾರಿಯಲ್ಲಿ ಕೆಲ ಸಮಯ ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿತ್ತು.

ಮಾಹಿತಿ ಪಡೆದ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಇದನ್ನೂ ಓದಿ : ಉಡುಪಿಯ ಗಣೇಶ್ ಪ್ರಸಾದ್ ಶೆಟ್ಟಿಗೆ ದಾದಾ ಲೇಖಕ್ ರಾಜ್ ಪ್ರಶಸ್ತಿ..!

Btv Kannada1
Author: Btv Kannada1

Leave a Comment

RELATED LATEST NEWS