ಮುಂಬೈ : ಉದ್ಯಮಿ ಗೌತಮ್ ಅದಾನಿ ಅವರು ಮುಕೇಶ್ ಅಂಬಾನಿಯವರನ್ನು ಹಿಂದಿಕ್ಕಿ ಭಾರತದ ನಂಬರ್ 1 ಶ್ರೀಮಂತ ಪಟ್ಟ ಅಲಂಕರಿಸಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಾಲೀಕ ಮುಕೇಶ್ ಅಂಬಾನಿ ಅವರಿಗಿಂತ ಅದಾನಿ ಅವರ ಇಂದಿನ ಆಸ್ತಿ ಮೌಲ್ಯ ಹೆಚ್ಚಾಗಿದೆ.
ಹಿಂಡನ್ ಬರ್ಗ್ ವರದಿ ಕುರಿತಂತೆ ಕೋರ್ಟ್ ನ ಮಹತ್ವದ ಆದೇಶ ಹೊರಬಿದ್ದ ಬೆನ್ನಲ್ಲೇ ಇದೀಗ ಮತ್ತೆ ಗೌತಮ್ ಅದಾನಿ ಭಾರತದ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಇವತ್ತಿಗೆ ಭಾರತದಲ್ಲಿ ನಂಬರ್ 1 ಶ್ರೀಮಂತರಾಗಿರುವ ಗೌತಮ್ ಅದಾನಿ ಅವರು ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಒಂದು ಸ್ಥಾನ ಏರಿಕೆ ಕಂಡಿದ್ದಾರೆ.
ವಿಶ್ವದ ಶ್ರೀಮಂತರ ಪಟ್ಟಿಯನ್ನು ಸಿದ್ಧಪಡಿಸುವ ಬ್ಲೂಮ್‌ಬೆರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಸಂಸ್ಥೆಯ ಲೇಟೆಸ್ಟ್ ವರದಿ ಬಹಿರಂಗವಾಗಿದ್ದು, ಇಂದಿನ ಬ್ಲೂಮ್‌ಬೆರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಗೌತಮ್ ಅದಾನಿ ಅವರ ನಿವ್ವಳ ಸಂಪತ್ತು 97.6 ಬಿಲಿಯನ್ ಡಾಲರ್ ಆಗಿದೆ.
ಉದ್ಯಮಿ ಮುಕೇಶ್ ಅಂಬಾನಿಯವರ ಒಟ್ಟು ಆಸ್ತಿ 97.0 ಬಿಲಿಯನ್ ಡಾಲರ್ ಎನ್ನಲಾಗಿದೆ. ಗುಜರಾತ್ ಮೂಲದ ಖ್ಯಾತ ಉದ್ಯಮಿ ಭಾರತದ ನಂ.1 ಶ್ರೀಮಂತ ಪಟ್ಟ ಅಲಂಕರಿಸುವುದರ ಜೊತೆಗೆ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಅದಾನಿ 12 ಸ್ಥಾನವನ್ನು ಅಲಂಕರಿಸಿದ್ದಾರೆ. ಮುಕೇಶ್ ಅಂಬಾನಿ ಅವರು 13 ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.
ಬ್ಲೂಮ್ಬರ್ಗ್ ಶ್ರೀಮಂತರ ಪಟ್ಟಿ (2024 ಜನವರಿ 5)
- ಇಲಾನ್ ಮಸ್ಕ್: 220 ಬಿಲಿಯನ್ ಡಾಲರ್
- ಜೆಫ್ ಬೇಜೋಸ್: 169 ಬಿಲಿಯನ್ ಡಾಲರ್
- ಬರ್ನಾರ್ಡ್ ಆರ್ನಾಲ್ಟ್: 168 ಬಿಲಿಯನ್ ಡಾಲರ್
- ಬಿಲ್ ಗೇಟ್ಸ್: 138 ಬಿಲಿಯನ್ ಡಾಲರ್
- ಸ್ಟೀವ್ ಬಾಲ್ಮರ್: 128 ಬಿಲಿಯನ್ ಡಾಲರ್
- ಮಾರ್ಕ್ ಜುಕರ್ಬರ್ಗ್: 126 ಬಿಲಿಯನ್ ಡಾಲರ್
- ಲ್ಯಾರಿ ಪೇಜ್: 124 ಬಿಲಿಯನ್ ಡಾಲರ್
- ವಾರನ್ ಬಫೆಟ್: 122 ಬಿಲಿಯನ್ ಡಾಲರ್
- ಲ್ಯಾರಿ ಎಲಿಸನ್: 120 ಬಿಲಿಯನ್ ಡಾಲರ್
- ಸೆರ್ಗೇ ಬರ್ರಿನ್: 117 ಬಿಲಿಯನ್ ಡಾಲರ್
- ಕಾರ್ಲೊಸ್ ಸ್ಲಿಮ್: 102 ಬಿಲಿಯನ್ ಡಾಲರ್
- ಗೌತಮ್ ಅದಾನಿ: 97.6 ಬಿಲಿಯನ್ ಡಾಲರ್
- ಮುಕೇಶ್ ಅಂಬಾನಿ: 97.0 ಬಿಲಿಯನ್ ಡಾಲರ್
ಇದನ್ನೂ ಓದಿ : ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಮುಂದೆ ಧರಣಿ ಕುಳಿತ ಬಿಜೆಪಿ ನಾಯಕರು ಅರೆಸ್ಟ್..