ಕಲಬುರಗಿ : ಅಫಜಲಪುರ ಶಾಸಕ ಎಮ್ ವೈ ಪಾಟೀಲ್ ಕಾರು ಅಪಘಾತವಾಗಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಜೇವರ್ಗಿ ಬಿ ಗ್ರಾಮದ ಬಳಿ ಈ ಘಟನೆ ನಡೆದಿದೆ.
ಎಮ್ ವೈ ಪಾಟೀಲ್ ಜೇವರ್ಗಿ ಬಿ ಗ್ರಾಮದಲ್ಲಿರುವ ಶಾಲೆಯ ಕಾರ್ಯಕ್ರಮಕ್ಕೆ ತೆರಳ್ತಿದ್ದರು. ಜೇವರ್ಗಿ ಬಿ ಗ್ರಾಮದ ಹೊರವಲಯದಲ್ಲಿ ಕಾರ್ನ್ನು ಕ್ರಾಸ್ ಟರ್ನ್ ಮಾಡುವಾಗ ಈ ಅಪಘಾತ ನಡೆದಿದೆ. ರಸ್ತೆ ಟರ್ನ್ ಮಾಡುವಾಗ ತಗ್ಗು ಗುಂಡಿಗೆ ಬಿದ್ದು ಎಮ್ ವೈ ಪಾಟೀಲ್ಗೆ ಗಾಯವಾಗಿದೆ.
ಅದೃಷ್ಟವಶಾತ್ ಶಾಸಕ ಎಮ್ ವೈ ಪಾಟೀಲ್ ಪ್ರಾಣಾಪಾಯದಿಂದ ಪಾರಾಗಿದ್ದು, ಎಮ್ ವೈ ಪಾಟೀಲ್ ಕಾಲಿಗೆ , ಚಾಲಕ ಮೋಬಿನ್ ಕೈಗೆ ಗಾಯಗಳಾಗಿದೆ. ಹೆಚ್ಚಿನ ಚಿಕಿತ್ಸೆಗೆ ಕಲಬುರಗಿಯಲ್ಲಿನ ಶಾಸಕರ ಪುತ್ರನ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಇದನ್ನೂ ಓದಿ : ಕರಸೇವಕ ಶ್ರೀಕಾಂತ್ ಪೂಜಾರಿಗೆ ಜಾಮೀನು ಮಂಜೂರು..!
Author: Btv Kannada1
Post Views: 3,850