ಭೂಮಿಯ ಮೇಲಿರುವ ಸಿಹಿನೀರಿನ ಒಟ್ಟು ಪ್ರಮಾಣದ ಶೇ 20ರಷ್ಟು ಇರುವುದು ಬ್ರೆಜಿಲ್‌ನ ಅಮೆಜಾನ್ ಮಳೆಕಾಡು ಪ್ರದೇಶದಲ್ಲಿರುವ ಅಮೆಜಾನ್ ನದಿಯಲ್ಲಿ.
ಆದರೆ, ಈ ನದಿಯ ಎರಡು ಪ್ರಮುಖ ಉಪನದಿಗಳಾದ ರಿಯೊ ನೆಗ್ರೊ ಹಾಗೂ ಮಡೈರಾ ಬತ್ತಿ ಹೋಗಿವೆ. ಸೊಲಿಮೊಸ್, ಜುರುವಾ, ಪ್ಯುರಸ್ ನದಿಗಳಲ್ಲಿನ ನೀರಿನ ಪ್ರಮಾಣವು ಹಿಂದೆಂದೂ ಕಾಣದ ಮಟ್ಟಿಗೆ ಕುಸಿದಿದೆ.
ಅಮೆಜಾನ್ ಮಳೆಕಾಡು ಪ್ರದೇಶದ ವ್ಯಾಪ್ತಿ ಕೂಡ ಹಂತ ಹಂತವಾಗಿ ಕುಗ್ಗುತ್ತಾ ಬಂದಿದೆ. ಅಮೆಜಾನ್ ಮಳೆಕಾಡು ಪ್ರದೇಶಕ್ಕೆ ಬರ ಬಡಿದಿದೆ.
ಈ ಪ್ರದೇಶದಲ್ಲಿ ತೀವ್ರ ಪ್ರವಾಹ ಹಾಗೂ ತೀವ್ರ ಬರ ಹೊಸತೇನಲ್ಲ.
ಆದರೆ, ಈ ಬಾರಿ ಬಂದಿರುವ ಬರದ ತೀವ್ರತೆ ಹೆಚ್ಚಿದೆ ಮತ್ತು ಈ ರೀತಿಯ ತೀವ್ರ ಬರವು ಭವಿಷ್ಯದಲ್ಲಿ ಸಾಮಾನ್ಯವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ನೆಗ್ರೊ ಹಾಗೂ ಮಡೈರಾ ನದಿಗಳಿಗೆ ಹೊಂದಿಕೊಂಡಂತೆ ಇರುವ ‘ತೇಲುವ ಗ್ರಾಮ’ಗಳಲ್ಲಿ ವಾಸಿಸುತ್ತಿರುವ ಜನರ ಜೀವನವು ಸಂಪೂರ್ಣ ಸ್ಥಗಿತಗೊಂಡಿದೆ. ಇಲ್ಲಿರುವ ಒಟ್ಟು 62 ಪುರಸಭೆಗಳ ಪೈಕಿ 60ರಲ್ಲಿ ಬರ ಆವರಿಸಿದೆ.
ಸುಮಾರು 5 ಲಕ್ಷಕ್ಕೂ ಹೆಚ್ಚು ಜನರ ಬದುಕು ಬತ್ತಿ ಹೋಗಿದೆ. ಇನ್ನು ಅಮೆಜಾನ್ ಕಾಡಿನಲ್ಲೂ ಅತೀ ಹೆಚ್ಚು ಉಷ್ಣಾಂಶ ದಾಖಲಾಗುತ್ತಿದ್ದು ಅಲ್ಲಲ್ಲಿ ಕಾಡ್ಗಿಚ್ಚು ಹಬ್ಬಿ ಅರಣ್ಯ ನಾಶವಾಗ್ತಿದೆ.
ಪರಿಸ್ಥಿತಿ ಹೀಗೆ ಮುಂದುವರೆದರೆ ಪ್ರಪಂಚದ ಅತ್ಯಮೂಲ್ಯ ಆಸ್ತಿಯನ್ನು ಕಳೆದುಕೊಳ್ಳ ಬೇಕಾಗಬಹುದು ಹಾಗೆಯೇ ಇದು ಜಗತ್ತಿನ ವಿನಾಶದ ಸೂಚನೆ ಎಂದು ವಿಜ್ಞಾನಿಗಳು ಆತಂಕ ಹೊರಹಾಕಿದ್ದಾರೆ.
ಇದನ್ನೂ ಓದಿ : ಅಂಬಾನಿ ಹಿಂದಿಕ್ಕಿ ದೇಶದ ಶ್ರೀಮಂತ ವ್ಯಕ್ತಿ ಪಟ್ಟಕ್ಕೇರಿದ ಅದಾನಿ..!