ಹಿಂದಿ ಬಿಗ್ ಬಾಸ್ ಸೀಸನ್ 17 ಒಂದಲ್ಲಾ ಒಂದು ಗಲಾಟೆಗೆ ಸುದ್ದಿಯಾಗುತ್ತಲೇ ಇದೆ. ಬಿಗ್ಬಾಸ್ನಲ್ಲಿ ಯಾವುದೇ ಕಾರಣಕ್ಕೂ ಮ್ಯಾನ್ ಹ್ಯಾಂಡ್ಲಿಂಗ್ ಮಾಡುವಂತಿಲ್ಲ ಅನ್ನೊ ನಿಯಮವಿದೆ. ಹಾಗೆ ಮಾಡಿದರೆ ತಕ್ಷಣಕ್ಕೆ ಅವರನ್ನು ಎಲಿಮಿನೇಟ್ ಮಾಡಲಾಗುತ್ತದೆ.
ಈ ನಿಯಮದ ಬಗ್ಗೆ ಗೊತ್ತಿದ್ದರೂ, ಬಿಗ್ಬಾಸ್ ಹಿಂದಿ ಸೀಸನ್ 17ರಲ್ಲಿ ಇದೇ ರೀತಿಯ ಘಟನೆಯೊಂದು ನಡೆದಿದೆ. ಬಿಗ್ಬಾಸ್ ಮನೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದ ಅಭಿಷೇಕ್ ಕುಮಾರ್ ಸಮರ್ಥ್ ಜ್ಯುರೆಲ್ ಕಪಾಳಕ್ಕೆ ಬಾರಿಸಿದ್ದಾರಂತೆ.
ಹೀಗಾಗಿ ಮನೆಯ ಕ್ಯಾಪ್ಟನ್ ಅಂಕಿತಾ ಅವರು ಅಭಿಷೇಕ್ನ ಎಲಿಮಿನೇಟ್ ಮಾಡುವ ನಿರ್ಧಾರ ತೆಗೆದುಕೊಂಡರು. ಹೌದು.. ಈ ಗಲಾಟೆಗೆ ಬಿಗ್ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದ ಅಂಕಿತಾಗೆ ಬಿಗ್ಬಾಸ್ ಆದೇಶವೊಂದನ್ನು ನೀಡುತ್ತಾರೆ.
ಅಭಿಷೇಕ್ ಅವರನ್ನು ಮನೆಯಲ್ಲಿ ಉಳಿಸಿಕೊಳ್ಳಬೇಕೆ ಅಥವಾ ಬೇಡವೇ ಎನ್ನುವ ನಿರ್ಧಾರ ಮಾಡಿ ಹೇಳಿ ಎನ್ನುತ್ತಾರೆ. ಅದಕ್ಕೆ ಅಂಕಿತಾ ಅವರು ಅಭಿಷೇಕ್ನ ಎಲಿಮಿನೇಟ್ ಮಾಡುವ ನಿರ್ಧಾರ ತೆಗೆದುಕೊಂಡರು.
ಅಭಿಷೇಕ್ ಕುಮಾರ್ ಹಾಗೂ ಸಮರ್ಥ್ ಜ್ಯುರೆಲ್ ಮಧ್ಯೆ ಟಾಸ್ಕ್ ವಿಚಾರಕ್ಕೆ ಗಲಾಟೆ ನಡೆದಿದೆ. ಇದೇ ವೇಳೆ ಆ ಗಲಾಟೆ ಜೋರಾಗಿ ಅಭಿಷೇಕ್ ಅವರು ಸಮರ್ಥ್ ಕೆನ್ನೆಗೆ ಹೊಡೆದಿದ್ದಾರೆ. ಕೂಡಲೇ ಅಲ್ಲೇ ಕುಳಿತುಕೊಂಡಿದ್ದ ಸ್ಪರ್ಧಿಗಳು ಅವರನ್ನು ತಡೆದಿದ್ದಾರೆ. ಅಭಿಷೇಕ್ ಕುಮಾರ್ ಸಮರ್ಥ್ ಜ್ಯುರೆಲ್ ಹೊಡೆದಿರೋ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಇದನ್ನೂ ಓದಿ : ಉಡುಪಿಯ ಗಣೇಶ್ ಪ್ರಸಾದ್ ಶೆಟ್ಟಿಗೆ ದಾದಾ ಲೇಖಕ್ ರಾಜ್ ಪ್ರಶಸ್ತಿ..!