ಬೆಂಗಳೂರು : ಕರಸೇವಕರ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯಿಂದ ರಾಜ್ಯಾದ್ಯಂತ ಬೃಹತ್ ಅಭಿಯಾನ ನಡೆಸುತ್ತಿದ್ದು, ಇಂದು ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಎದುರು ಧರಣಿ ನಡೆಸಿದ್ಧಾರೆ.
ಇದೇ ವೇಳೆ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ‘ನಾನೂ ಕರ ಸೇವಕ.. ನನ್ನನ್ನೂ ಬಂಧಿಸಿ’ ಕಿಚ್ಚು ಎಂದು ಹೇಳಿದ್ದಾರೆ.
ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಮುಂದೆ ಧರಣಿ ಕುಳಿತ ಬಿಜೆಪಿ ನಾಯಕರು ಅರೆಸ್ಟ್ ಆಗಿದ್ಧಾರೆ.
ವಿಪಕ್ಷ ನಾಯಕ ಆರ್.ಅಶೋಕ್, ಸಂಸದ ಪಿ.ಸಿ.ಮೋಹನ್, ಶಾಸಕ ಸುರೇಶ್ಕುಮಾರ್, ಮಾಜಿ ಸಚಿವ ರಾಮಚಂದ್ರೇಗೌಡ
MLC ರವಿಕುಮಾರ್ ಸೇರಿದಂತೆ ಹಲವರು ಅರೆಸ್ಟ್ ಆಗಿದ್ಧಾರೆ.
ಮಲ್ಲೇಶ್ವರಂ ಠಾಣೆ ಎದುರು ಸುರೇಶ್ಕುಮಾರ್ ಧರಣಿ ನಡೆಸುತ್ತಿದ್ದರು. ಧರಣಿಯಲ್ಲಿ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ಧಾರೆ. ಧರಣಿ ಕುಳಿತ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದು, ಶ್ರೀಕಾಂತ್ ಪೂಜಾರಿ ಮೇಲೆ 16 ಕೇಸ್ ಇವೆ ಎಂದಿದ್ದೀರಿ. ಇಂಥಾ ಹಸಿ ಸುಳ್ಳು ಹೇಳಲು ಕಾಂಗ್ರೆಸ್ಗೆ ನಾಚಿಕೆ ಆಗಲ್ವಾ ಎಂದಿದ್ಧಾರೆ.
ಆ ಪ್ರಭು ಶ್ರೀರಾಮನು ನಿಮ್ಮನ್ನ ಎಂದಿಗೂ ಕ್ಷಮಿಸಲಾರ. ಶ್ರೀಕಾಂತ್ ಮೇಲಿನ 15 ಪ್ರಕರಣ ಈಗಾಗಲೇ ತಾರ್ಕಿಕ ಅಂತ್ಯ ಕಂಡಿವೆ. ಒಂದು ಬಾಕಿ ಪ್ರಕರಣ 1992ರಲ್ಲಿ ಅವರು ನಾಪತ್ತೆಯಾಗಿದ್ರು ಅನ್ನೋದು ಇದೆ. ಆದ್ರೆ 16 ಕೇಸ್ ಇವೆ ಅಂತಾ ಸುಳ್ಳು ಹಬ್ಬಿಸುತ್ತಿದ್ದೀರಿ.
ಈ ಬಗ್ಗೆ ಆರ್.ಅಶೋಕ್ ತಮ್ಮ ಟ್ವೀಟ್ ಖಾತೆಯಲ್ಲಿ ತಮಗೆ ಆಡಳಿತದ ಮೇಲೆ ಸಂಪೂರ್ಣ ನಿಯಂತ್ರಣ ಕೈತಪ್ಪಿದೆಯಾ..? ಮುಖ್ಯಮಂತ್ರಿಗಳೇ ಕಾಣದ ಕೈಗಳು ತಮ್ಮನ್ನು ದಿಕ್ಕು ತಪ್ಪಿಸುತ್ತಿವೆ.
ಹಿಂದೂ ಕಾರ್ಯಕರ್ತರ ಕೆಣಕುವ ಉದ್ದೇಶ ನಿಮಗಿದೆಯಾ..? ಸಿದ್ದರಾಮಯ್ಯನವರೇ ಯಾವುದು ಸತ್ಯ..? ತಪ್ಪಾಗಿದ್ರೆ ಒಪ್ಪಿಕೊಳ್ಳಿ. ರಾಜ್ಯದ ಜನರಲ್ಲಿ ಕ್ಷಮಾಪಣೆ ಕೋರಿ ರಾಜೀನಾಮೆ ನೀಡಿ. ಒಬ್ಬ ಸಮರ್ಥ ಮುಖ್ಯಮಂತ್ರಿಗೆ ದಾರಿ ಮಾಡಿಕೊಡಿ ಎಂದು ಟ್ವೀಟ್ನಲ್ಲಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಮಲ್ಲೇಶ್ವರಂ ಠಾಣೆ ಎದುರು ಸುರೇಶ್ಕುಮಾರ್ ಧರಣಿ..