Download Our App

Follow us

Home » ರಾಜಕೀಯ » ರಾಜ್ಯದಲ್ಲಿ ಮತ್ತೆ ಭುಗಿಲೆದ್ದ ದತ್ತಪೀಠ ವಿವಾದ..

ರಾಜ್ಯದಲ್ಲಿ ಮತ್ತೆ ಭುಗಿಲೆದ್ದ ದತ್ತಪೀಠ ವಿವಾದ..

ಬೆಂಗಳೂರು :  ರಾಜ್ಯದಲ್ಲಿ ಮತ್ತೆ  ದತ್ತಪೀಠ ವಿವಾದ ಭುಗಿಲೆದ್ದಿದೆ. ದತ್ತಪೀಠ ಕೇಸ್​ ಓಪನ್​​ ಆಗಿದೆ ಎಂದು ಬಿಜೆಪಿ ನಾಯಕರು ಆಕ್ರೋಶ ಹೊರಹಾಕುತ್ತಿದ್ದಾರೆ.

 


7 ವರ್ಷದ ಬಳಿಕ ದತ್ತಪೀಠ ಕೇಸ್​ಗೆ ಮರುಜೀವ ಬಂದಿದೆ. ಬಿಜೆಪಿ ನಾಯಕರು ಮತ್ತೊಂದು ಸಮರಕ್ಕೆ ಸಜ್ಜಾಗಿದ್ದಾರೆ.  2017ರಲ್ಲಿ ಚಿಕ್ಕಮಗಳೂರಿನ ದತ್ತಪೀಠದಲ್ಲಿ ಗೋರಿ ಒಡೆದಿದ್ದ ಪ್ರಕರಣದಲ್ಲಿ 14 ಜನರ ಮೇಲಿನ ಕೇಸ್ ರೀ ಓಪನ್ ಮಾಡಲಾಗಿದೆ ಎಂದು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.  

ಡಡಡ (11)

ತುಡುಕೂರು ಮಂಜು, ಶಿವರಾಜ್, ಸಂದೇಶ್, ಸುಮಂತ್, ನಾಗೇಂದ್ರ ಪೂಜಾರಿ, ಮೋಹನ್, ಹಾಗೂ ಅಶೋಕ್, ತೇಜು, ಶ್ರೀನಾಥ್ ಮತ್ತು ಲೋಕೇಶ್, ಮಹೇಂದ್ರ, ಸಂದೀಪ್ ರಾಮುಗೆ ಜನವರಿ 8ರಂದು ಕೋರ್ಟ್​ಗೆ ಹಾಜರಾಗುವಂತೆ ನೋಟಿಸ್​ ನೀಡಿದ್ದಾರೆ.

ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ನಾಯಕರು ಕೆಂಡಾಮಂಡಲರಾಗಿದ್ದಾರೆ. ದತ್ತಾತ್ರೇಯನ ಭಕ್ತರ ವಿರುದ್ಧ ಕಾಂಗ್ರೆಸ್​​ ಷಡ್ಯಂತ್ರ ಮಾಡ್ತಿದೆ. ಹಾಗೂ ಮೊನ್ನೆ ಕರಸೇವಕರು, ಇಂದು ದತ್ತ ಪೀಠದ ಹೋರಾಟಗಾರರು, ನೀವೆಷ್ಟೇ ಭಯ ಹುಟ್ಟಿಸಿದರೂ ರಾಮನ ಭಕ್ತರು ಹೆದರಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಿಡಿಕಾರಿದ್ದಾರೆ.

ಏನಿದು ದತ್ತಪೀಠ ಕೇಸ್..?

7 ವರ್ಷದ ಕೇಸ್​​​​​ ರೀ ಓಪನ್​​​​​​.
ದತ್ತಪೀಠ ಜಯಂತಿ ವೇಳೆ ಗೋರಿ ಒಡೆಸಿದ್ದ ಕೇಸ್​.
ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಕೇಸ್​.
ಚಿಕ್ಕಮಗಳೂರಿನಲ್ಲಿ ದತ್ತ ಜಯಂತಿ ವೇಳೆ ಗೋರಿ ಧ್ವಂಸ.
ಇನಾಂ ದತ್ತಾತ್ರೇಯ ಬಾಬ ಬುಡನ್​ ದರ್ಗಾದಲ್ಲಿದ್ದ ಗೋರಿಗಳು ಧ್ವಂಸ.
201ರ ಡಿಸೆಂಬರ್​ 3ರಂದು ನಡೆದಿದ್ದ ಘಟನೆ.
14 ಬಜರಂಗದಳ ಕಾರ್ಯಕರ್ತರ ವಿರುದ್ಧ ಕೇಸ್​​​ ದಾಖಲಾಗಿತ್ತು.
IPC ಸೆಕ್ಷನ್​​ 143, 447, 427, 298, 504, 506, 114, 353.

ಇದನ್ನೂ ಓದಿ : ಬಾಬಾಬುಡನ್​ಗಿರಿ ಕೇಸ್ ರೀ ಓಪನ್ ಮಾಹಿತಿ ಸುಳ್ಳು : ಸಿದ್ದರಾಮಯ್ಯ..!

Btv Kannada1
Author: Btv Kannada1

Leave a Comment

RELATED LATEST NEWS