ಬೆಂಗಳೂರು : ಇಂದು ಸತೀಶ್ ಜಾರಕಿಹೊಳಿ ಮನೆಯಲ್ಲಿ ಸಚಿವರು ಡಿನ್ನರ್ ಮಾಡಿದ್ದು, ಡಿನ್ನರ್ ಮೀಟಿಂಗ್ ಭಾರೀ ಕುತೂಹಲ ಕೆರಳಿಸಿದೆ.
ಸಚಿವರಾದ ಡಾ.ಜಿ. ಪರಮೇಶ್ವರ್, ಕೆ.ಹೆಚ್. ಮುನಿಯಪ್ಪ, ಹೆಚ್.ಸಿ.ಮಹಾದೇವಪ್ಪ, ದಿನೇಶ್ ಗುಂಡೂರಾವ್ ಅವರು ಸತೀಶ್ ಜಾರಕಿಹೊಳಿ ಜತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಲೀಡರ್ಸ್ ಗಳು ಸುಮಾರು ಒಂದೂವರೆ ಗಂಟೆಗಳ ಕಾಲ ಚರ್ಚಿಸಿದ್ದಾರೆ.
ಸಿಎಂ, ಡಿಸಿಎಂ ದೆಹಲಿ ಭೇಟಿ ಹೊತ್ತಲ್ಲೇ ಡಿನ್ನರ್ ಮೀಟಿಂಗ್ ನಡೆಸಿದ್ದು, ಡಿನ್ನರ್ ನಲ್ಲಿ ಸತೀಶ್ ಜಾರಕಿಹೊಳಿ ಮನವೊಲಿಸುವ ಪ್ರಯತ್ನ ನಡೀತಾ..? ಎಂಬ ಪ್ರಶ್ನೆ ಮೂಡಿದೆ.
ಸತೀಶ್ ಜಾರಕಿಹೊಳಿ ಇತ್ತೀಚೆಗಷ್ಟೇ ದೆಹಲಿಗೂ ಹೋಗಿ ಬಂದಿದ್ದರು. ಜಾರಕಿಹೊಳಿ ಡಿಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರೋ ಸುದ್ದಿ ಹರಡಿತ್ತು. ಹಿರಿಯ ಸಚಿವರ ಡಿನ್ನರ್ ಮೀಟ್ ಈಗ ಭಾರೀ ಕುತೂಹಲ ಕೆರಳಿಸಿದೆ.
ಈ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಅವರು ಮಾತನಾಡಿ, ಒಂದು ಪಕ್ಷದ ಮಂತ್ರಿಗಳು ಊಟಕ್ಕೆ ಸೇರಿದ್ವಿ ಅಷ್ಟೇ, ಅಂತಹ ವಿಶೇಷ ಏನೂ ಇಲ್ಲ. ಊಟಕ್ಕೆ ಸೇರಿದ ಕೆಲವು ವಿಚಾರಗಳು ಚರ್ಚೆ ಮಾಡಿದ್ದೇವೆ ಎಂದಿದ್ದಾರೆ.
ಲೋಕಸಭಾ ಚುನಾವಣೆ, ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡಿದ್ದೇವೆ. ದಲಿತ ಸಿಎಂ ಮತ್ತು ಸಿಎಂ ವಿಚಾರವಾಗಿ ಚರ್ಚೆ ಮಾಡಿಲ್ಲ, ಎಸ್.ಸಿ, ಎಸ್.ಟಿ ಸಮಾವೇಶ ಬಗ್ಗೆ ಚರ್ಚೆ ಮಾಡಿದ್ದೇವೆ.
ರಾಜಣ್ಣ ಮತ್ತೆ 4 ಡಿಸಿಎಂ ಮಾಡಬೇಕು ಎಂದು ಹೇಳಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜಣ್ಣ ಸಾಕಷ್ಟು ಬಾರೀ ಹೇಳಿದ್ದಾರೆ. ನಾವು ಕೂಡ ಹಿಂದೆ ಪದೇ ಪದೆ ಹೇಳಿದ್ದೇವೆ.
ವರಿಷ್ಠರು ತೀರ್ಮಾನ ಮಾಡಬೇಕು ಯಾವಾಗ ಮಾಡ್ತರೋ ನೋಡಬೇಕು. ನಾವು ಏನೂ ದೆಹಲಿಗೆ ಹೋಗಲ್ಲ, ಹೋದ್ರೆ ಹೇಳ್ತಿನಿ. ಬೇರೆಯವರಲ್ಲರೂ ಮಾಡುವುದನ್ನ ನೀವು ತೋರಿಸಲ್ಲ, ನಾವು ಮಾಡಿದ್ದೇನೆ ತೋರಿಸುತ್ತೀರಾ.. ಅದನ್ನ ಹೈಪ್ ಮಾಡ್ತಿರಾ.
ಹೊಟೇಲ್ ಬೇರೆಯವರು ಹೋಗ್ತಾರೆ ಅದನ್ನ ತೋರಿಸಲ್ಲ. ಸಮುದಾಯವಾರು ಡಿಸಿಎಂ ಆಗಬೇಕು ಅಂತ ಇದೆ. ಅದರ ಬಗ್ಗೆ ಹೈಕಮಾಂಡ್ ನಾಯಕರು ತೀರ್ಮಾನ ಮಾಡ್ತಾರೆ.
ಜಾತಿಜನಗಣತಿ ಬಗ್ಗೆ ಚರ್ಚೆ ಮಾಡಿದ್ರಾ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಜಾತಿ ಜನಗಣತಿ ಇನ್ನು ಬಂದೇ ಇಲ್ಲ. ಬರದೆ ಮಾತನಾಡುವುದು ಸರಿಯಲ್ಲ.
ಸಿಎಂ ಸಿದ್ದರಾಮಯ್ಯ ಕೂಡ ಹೈಕಮಾಂಡ್ ಅಂತಿಮ ತೀರ್ಮಾನ ಮಾಡಬೇಕು ಅಂತ ಹೇಳ್ತಾರೆ. ಅವರು ಕೂಡ ಮೊದಲಿಗೆ 4 ಡಿಸಿಎಂ ಮಾಡಬೇಕು ಅಂತ ಹೇಳಿದ್ರಂತೆ.
ಲೋಕಸಭಾ ಚುನಾವಣೆಗೂ ಮುನ್ನವೇ ಸಮಾವೇಶಗಳನ್ನ ಮಾಡುತ್ತೇವೆ. ದಾವಣಗೆರೆಯಲ್ಲಿ ಎಸ್.ಸಿ, ಎಸ್.ಟಿ ಸಮಾವೇಶ ಮಾಡುತ್ತೇವೆ.
ಕರಸೇವಕ ವಿಚಾರವನ್ನು ಬಿಜೆಪಿ ರಾಜಕೀಯಕ್ಕಾಗಿ ಬಳಸುತ್ತಿದ್ದಾರೆ. ನ್ಯಾಯಲಯದಲ್ಲಿ ತೀರ್ಮಾನ ಮಾಡಿಕೊಳ್ಳಬೇಕು. ಪ್ರತಿಭಟನೆ ಮಾಡುವುದರಿಂದ ಏನೂ ಪ್ರಯೋಜನ ಇಲ್ಲ ಎಂದು ಹೇಳಿದ್ಧಾರೆ.
ಇದನ್ನೂ ಓದಿ : ವಿ.ಸೋಮಣ್ಣ ದೆಹಲಿ ಭೇಟಿಗೆ ಡೇಟ್ ಫಿಕ್ಸ್..