Download Our App

Follow us

Home » ಅಪರಾಧ » ಮದುವೆ ಮಂಟಪಕ್ಕೆ ನುಗ್ಗಿ ಹಳೆ ಪ್ರೇಯಸಿ ಗಲಾಟೆ..

ಮದುವೆ ಮಂಟಪಕ್ಕೆ ನುಗ್ಗಿ ಹಳೆ ಪ್ರೇಯಸಿ ಗಲಾಟೆ..

ಮಂಗಳೂರು : ಮದುವೆ ನಡೆಯುವಾಗಲೇ ಕಲ್ಯಾಣ ಮಂಟಪಕ್ಕೆ ಬಂದು ಹಳೆ ಪ್ರೇಯಸಿ ಗಲಾಟೆ ಮಾಡಿದ್ದಾಳೆ. ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ತಾಲೂಕಿನ ಬೀರಿ ಬಳಿ ನಡೆದಿದೆ. 

ಮಂಗಳೂರು: ಬೇರೊಬ್ಬಳಿಗೆ ತಾಳಿ ಕಟ್ಟುವಾಗ ಮಾಜಿ ಪ್ರೇಯಸಿ ಎಂಟ್ರಿ; ಮುಂದೆ ಕಲ್ಯಾಣ ಮಂಟಪದಲ್ಲಿ ಆಗಿದ್ದೇನು?

ಕೇರಳ ಮೂಲದ ಅಕ್ಷಯ್ ಎಂಬಾತನ ಮದುವೆ ಮಂಗಳೂರು ಮೂಲದ ಯುವತಿ ಜೊತೆ ನಡೆಯುತ್ತಿದ್ದಾಗ ಮೈಸೂರು ಮೂಲದ ಮಾಜಿ ಪ್ರೇಯಸಿ ಕಲ್ಯಾಣ ಮಂಟಪಕ್ಕೆ ಉಳ್ಳಾಲ ಪೊಲೀಸರ ಜತೆಯೇ ಎಂಟ್ರಿಕೊಟ್ಟು ಗಲಾಟೆ ಮಾಡಿದ್ದಾಳೆ.

ಅಕ್ಷಯ್​​​ ಒಂದೂವರೆ ವರ್ಷದ ಹಿಂದೆ ಮೈಸೂರು ಯುವತಿಗೆ ಶಾದಿ ಡಾಟ್ ಕಾಮ್ ಮೂಲಕ ಪರಿಚಯವಾಗಿದ್ದ. ಮದ್ವೆ ಆಗ್ತೀನಿ ಅಂತಾ ಆಕೆ ಜತೆ ದೈಹಿಕ ಸಂಪರ್ಕ ಬೆಳೆಸಿದ್ದ ಆರೋಪ ಮಾಡಲಾಗಿತ್ತು. ಯುವತಿ ಈ ಬಗ್ಗೆ ಕೇರಳ ಠಾಣೆಯಲ್ಲಿ ಡಿಸೆಂಬರ್​​​ 26ರಂದು ರೇಪ್​​​​​ ದೂರು ದಾಖಲು ಮಾಡಿದ್ದಾಳೆ. ಆರೋಪಿ ಅಕ್ಷಯ್​ಗೆ ​ನಿರೀಕ್ಷಣಾ ಬೇಲ್​​​​ ವಜಾ ಆಗಿತ್ತು.

ಈ ಮಧ್ಯೆ ಅಕ್ಷಯ್​ ಮಂಗಳೂರು ಯುವತಿ ಜತೆ ಮದುವೆ ಆಗುತ್ತಿದ್ದ, ವಿಷಯ ತಿಳಿದ ಮೈಸೂರು ಯುವತಿ ಕಲ್ಯಾಣ ಮಂಟಪಕ್ಕೆ ನುಗ್ಗಿ ಗಲಾಟೆ ಮಾಡಿದ್ದಾಳೆ.

 

ಇದನ್ನೂ ಓದಿ : ಮಲ್ಲೇಶ್ವರಂ ಠಾಣೆ ಎದುರು ಸುರೇಶ್​ಕುಮಾರ್ ಧರಣಿ..

Btv Kannada1
Author: Btv Kannada1

Leave a Comment

RELATED LATEST NEWS