Download Our App

Follow us

Home » ರಾಜಕೀಯ » ಇಂದು ಮಾಜಿ ಪ್ರಧಾನಿ ದೇವೇಗೌಡರ ಸುದ್ದಿಗೋಷ್ಠಿ..

ಇಂದು ಮಾಜಿ ಪ್ರಧಾನಿ ದೇವೇಗೌಡರ ಸುದ್ದಿಗೋಷ್ಠಿ..

ಬೆಂಗಳೂರು :  ಮಾಜಿ ಪ್ರಧಾನಿ ದೇವೇಗೌಡರು  ಇಂದು ಸುದ್ದಿಗೋಷ್ಠಿ ನಡೆಸಲಿದ್ದಾರೆ. ದೇವೇಗೌಡರು BJP-JDS ಮೈತ್ರಿ ಸೀಟು ಹಂಚಿಕೆ ಬಗ್ಗೆ ಮಾತ್ನಾಡ್ತಾರಾ, ಇಲ್ಲ ಪ್ರಧಾನಿ ಮೋದಿ ಜತೆಗಿನ ಮಾತುಕತೆ ಬಗ್ಗೆ ಹೇಳ್ತಾರಾ  ಎಂಬುದನ್ನು ಕಾದು ನೋಡಬೇಕಾಗಿದೆ.

ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ಬಗ್ಗೆ ಮಾಹಿತಿ ನೀಡಿದ ಅಳಿಯ ಡಾ ಸಿ ಎನ್ ಮಂಜುನಾಥ್- Kannada Prabha

ಮಾಜಿ ಪ್ರಧಾನಿ ದೇವೇಗೌಡರು ಮಧ್ಯಾಹ್ನ 12ಕ್ಕೆ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ಸುದ್ದಿಗೋಷ್ಠಿಯುಭಾರೀ ಕುತೂಹಲ ಕೆರಳಿಸಿದೆ. ಇತ್ತೀಚೆಗೆ HDD ಫ್ಯಾಮಿಲಿ ದೆಹಲಿಯಲ್ಲಿ ಪ್ರಧಾನಿ ಭೇಟಿಯಾಗಿದ್ದರು. ಇತ್ತಿಚೀನ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾತ್ನಾಡೋ ಸಾಧ್ಯತೆಗಳಿವೆ. ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಸೇರಿ ಹಲವರು ಸಾಥ್​​​ ನೀಡಲಿದ್ದಾರೆ.

ಸಂಕ್ರಾಂತಿ ಒಳಗೆ ಮೈತ್ರಿ ಸೀಟ್ ಹಂಚಿಕೆ ಫೈನಲ್ ಮಾಡುವ ಸಾಧ್ಯತೆಗಳಿದ್ದು, ಮುಂದಿನ ವಾರ ಮೈತ್ರಿ ಸೀಟ್ ಹಂಚಿಕೆ ವಿಚಾರವಾಗಿ ಚರ್ಚೆ ಸಾಧ್ಯತೆಗಳಿವೆ. ಬಿಜೆಪಿ ವರಿಷ್ಠರ ಜತೆ ಸೀಟ್ ಹಂಚಿಕೆ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆ ನಡೆಸಲಿದ್ದಾರೆ. ಹೆಚ್‌ಡಿ ಕುಮಾರಸ್ವಾಮಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಭೇಟಿಗೆ ಸಮಯ ಕೇಳಿದ್ದಾರೆ. ಕಳೆದ ಬಾರಿ ಪ್ರಧಾನಿ ಮೋದಿ ಜತೆ ಒಂದು ಸುತ್ತಿನ ಚರ್ಚೆ ಆಗಿತ್ತು, ಹಾಗೂ ಮೈತ್ರಿ ಸೀಟು ಹಂಚಿಕೆ ವಿಚಾರ ಅಂತಿಮಗೊಳಿಸುವ ಸಾಧ್ಯತೆಗಳಿವೆ.

ಹೆಚ್​ಡಿಕೆ ಸಂಕ್ರಾಂತಿಗೆ ಗುಡ್ ನ್ಯೂಸ್ ನೀಡುತ್ತೇನೆ ಎಂದಿದ್ದಾರೆ. ಲೋಕಸಭೆಗೆ ಹೆಚ್​ಡಿಕೆ ಸ್ಪರ್ಧೆ ಮಾಡೋದು ಬಹುತೇಕ ಪಕ್ಕಾ ಆಗಿದೆ. ಹೆಚ್​ಡಿಕೆ ಈಗಾಗಲೇ 3 ಕ್ಷೇತ್ರಗಳಲ್ಲಿ ಆಂತರಿಕ ಸಮೀಕ್ಷೆ ಮಾಡಿಸಿದ್ದಾರೆ. ದೆಹಲಿ ಭೇಟಿ ವೇಳೆ ತಮ್ಮ ಕ್ಷೇತ್ರದ ಬಗ್ಗೆಯೂ ಕ್ಲಾರಿಟಿ ಕೊಡುವ ಸಾಧ್ಯತೆಗಳಿದೆ. 6 ಕ್ಷೇತ್ರಕ್ಕೆ ಬೇಡಿಕೆ ಇಟ್ಟಿರುವ ಜೆಡಿಎಸ್​, 4 ಕ್ಷೇತ್ರ ಕೊಡ್ತೇವೆ ಎಂದು ಬಿಜೆಪಿ ತಿಳಿಸಿದೆ.

ಇದನ್ನೂ ಓದಿ : ರಾಜ್ಯದಲ್ಲಿ 298 ಕೊರೋನಾ ಕೇಸ್​ಗಳು ಪತ್ತೆ..

Btv Kannada1
Author: Btv Kannada1

Leave a Comment

RELATED LATEST NEWS