ಉಡುಪಿ : ಶ್ರೀ ಗಣೇಶ್ ಪ್ರಸಾದ್ ಶೆಟ್ಟಿ ಉಡುಪಿ ಇವರು ನಿರಂತರ 27 ವರ್ಷದಿಂದ ಸಮಾಜದ ಸರ್ವತೋಮುಖ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಲುವಾಗಿ ಇವರಿಗೆ ಅಧ್ಯಾತ್ಮ ರಹಸ್ಯ ಮಾಸಪತ್ರಿಕೆ ಕೋಟೇಶ್ವರ ನೀಡುವ ವರ್ಷಂಪ್ರತಿಯಂತೆ ಈಶ್ವರೀಯ ಸಂದೇಶ-2024 ರ ಪ್ರಯುಕ್ತ ದಾದಾ ಲೇಖಕ್ ರಾಜ್ ಪ್ರಶಸ್ತಿ-2024 ನೀಡಿ ಗೌರವಿಸಲಿದೆ.
ಈಗಾಗಲೇ ರಾಜ್ಯ ಮೋದಿ ಬ್ರಿಗೇಡ್ ರಾಜ್ಯ ಅಧ್ಯಕ್ಷರಾಗಿ ಶ್ರೀ ಗಣೇಶ್ ಪ್ರಸಾದ್ ಶೆಟ್ಟಿ ಸೇವೆ ಸಲ್ಲಿಸುತ್ತಿದ್ದು, ಸುಮಾರು ಹತ್ತು ವರ್ಷದಿಂದ ಮೋದಿ ಬ್ರಿಗೇಡ್ ಜೊತೆ ಸಮಾಜದ ಸರ್ವರ ಒಳಿತಿಗಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ರಾಜ್ಯದ ಉದ್ದಗಲಕ್ಕೂ ಮೋದಿ ಯೋಜನೆಗಳು ಜಾರಿಯಾಗಬೇಕು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕು ಎಂಬುವುದರ ಜೊತೆಯಲ್ಲಿ ಧಾರ್ಮಿಕ ಸೇವೆಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ಒತ್ತು ನೀಡಿರುತ್ತಾರೆ.
ಅಧ್ಯಾತ್ಮದ ಬಗ್ಗೆ ಅತ್ಯಂತ ದೊಡ್ಡದಾದ ಒಲವು ತುಂಬಿದ ಶ್ರೀಯುತರು ಆಧ್ಯಾತ್ಮಿಕ ನಡೆ ಸಮಾಜದ ಸರ್ವತೋಮುಖ ಬೆಳವಣಿಗೆಗೆ ನೆರವಾಗುತ್ತದೆ ಎಂದು ಸದಾ ಸಂದೇಶ ನೀಡುತ್ತಿರುವುದು ವಿಶೇಷ.
ಇವರು ನೀಡುವ ಸಾಮಾಜಿಕ ಚಿಂತನೆಯಿಂದ ಅದೆಷ್ಟೋ ಯುವ ಜನತೆ ಸಾಮಾಜಿಕ ಪರವಾದ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತಾರೆ. ಮಕ್ಕಳಿಗಾಗಲಿ ಸಮಾಜದ ದೀನ ದಲಿತರಿಗೆ ಆಗಲಿ ತನ್ನಿಂದ ಆದ ಸಹಾಯ ಮಾಡುವುದು ಇವರ ಜೀವನದಲ್ಲಿ ಸಾಧಿಸಿದ ದೊಡ್ಡ ಕಾಯಕ.
ಕಳೆದ 21 ವರುಷಗಳಿಂದ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸಿ ಪ್ರಶಸ್ತಿ ಪ್ರದಾನ ಮಾಡುತ್ತಿರುವ ಎಸ್ ಸತೀಶ್ ಕುಮಾರ್ ಕೋಟೇಶ್ವರ ವಿವಿಧ ಕ್ಷೇತ್ರಗಳಲ್ಲಿ ವಿವಿಧ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸಿ ಸನ್ಮಾನಿಸುತ್ತಿರುವುದು ವಿಶೇಷ.
ಪ್ರತಿ ವರ್ಷವೂ ಈಶ್ವರೀಯ ಸಂದೇಶ -2024 ರ ಪ್ರಯುಕ್ತ ಈಶ್ವರನ ಕೃಪೆ ಗೆ ಪಾತ್ರರಾಗಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಚಿಂತಿಸುವವರಿಗೆ ದಾದಾ ಲೇಖಕ್ ರಾಜ್ ಪ್ರಶಸ್ತಿ -2024 ನೀಡಿ ಅಧ್ಯಾತ್ಮ ರಹಸ್ಯ ಮಾಸಪತ್ರಿಕೆ ಕೋಟೇಶ್ವರ ಗೌರವಿಸಲಿದೆ.
ಈ ವರುಷ ಶ್ರೀ ಗೋಪಾಡಿ ಚಿಕ್ಕು ಅಮ್ಮನವರ ದೇವಸ್ಥಾನ ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಇದರ ಗೆಂಡೋತ್ಸವ -2024 ರ ಪ್ರಯುಕ್ತ ದೇವಸ್ಥಾನದ ಮುಂಭಾಗದಲ್ಲಿ ಹಾಕುವ ವಿಶೇಷ ಸಾಂಸ್ಕೃತಿಕ ವೇದಿಕೆಯ ಕಾರ್ಯಕ್ರಮ ದಲ್ಲಿ ಶ್ರೀ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದಂಗಳವರು ಶಿರೂರು ಮಠ ಉಡುಪಿ ಇವರ ಉಪಸ್ಥಿತಿಯಲ್ಲಿ ಶ್ರೀ ಯುತರಿಗೆ ಹೃದಯ ತುಂಬಿ ಗೌರವಿಸಲಿದೆ.
ಇದನ್ನೂ ಓದಿ : ಕರಸೇವಕ ಶ್ರೀಕಾಂತ್ ಪೂಜಾರಿಗೆ ಜಾಮೀನು ಮಂಜೂರು..!