ಬೆಂಗಳೂರು : ಕರಸೇವಕ ಶ್ರೀಕಾಂತ್ ಪೂಜಾರಿಗೆ ಜಾಮೀನು ಮಂಜೂರಾಗಿದೆ. ಹುಬ್ಬಳಿಯ 1ನೇ ಹೆಚ್ಚುವರಿ ಕೋರ್ಟ್ ಶ್ರೀಕಾಂತ್ ಪೂಜಾರಿಗೆ ಜಾಮೀನು ನೀಡಿದೆ. 1992ರ ಗಲಭೆ ಕೇಸ್ನಲ್ಲಿ ಅರೆಸ್ಟ್ ಆಗಿದ್ದ ಶ್ರೀಕಾಂತ್ಗೆ ಕೋರ್ಟ್ ಇದೀಗ ಷರತ್ತು ಬದ್ಧ ಜಾಮೀನು ನೀಡಿದೆ.
ರಾಮಜನ್ಮಭೂಮಿ ಹೋರಾಟ ಕೇಸ್ನಲ್ಲಿ ಶ್ರೀಕಾಂತ್ ಪೂಜಾರಿಯನ್ನುಅರೆಸ್ಟ್ ಮಾಡಲಾಗಿತ್ತು. ಇಂದು ಹುಬ್ಬಳ್ಳಿ ಕೋರ್ಟ್ನಲ್ಲಿ ಅರ್ಜಿ ವಿಚಾರಣೆ ನಡೆದಿದೆ.
ಹುಬ್ಬಳ್ಳಿಯ 1ನೇ ಹೆಚ್ಚುವರಿ ಜಿಲ್ಲಾ ಕೋರ್ಟ್ ಇದೀಗ ಬೇಲ್ ಅರ್ಜಿ ಸಂಬಂಧ ಆದೇಶ ನೀಡಿದೆ. ಈ ಪ್ರಕರಣ ಬಗ್ಗೆ ಕೋರ್ಟ್ ನಿನ್ನೆ ವಾದ-ಪ್ರತಿವಾದ ಆಲಿಸಿತ್ತು.
ತುರ್ತು ಪ್ರಕರಣ ಎಂದು ಪರಿಗಣಿಸಿ ನಿನ್ನೆ ವಿಚಾರಣೆ ನಡೆದಿತ್ತು. ವಕೀಲ ಸಂಜೀವ್ ಬಡಸ್ಕರ್ ಶ್ರೀಕಾಂತ್ ಪರ ವಾದ ಮಂಡಿಸಿದ್ದರು. ಪೊಲೀಸರು ಜಾಮೀನು ನೀಡದಂತೆ ಆಕ್ಷೇಪಣೆ ಸಲ್ಲಿಕೆ ಮಾಡಿದ್ದರು. ಆದರೆ ಇದೀಗ ಕರಸೇವಕ ಶ್ರೀಕಾಂತ್ ಪೂಜಾರಿಗೆ ಜಾಮೀನು ಮಂಜೂರಾಗಿದೆ.
ಇದನ್ನೂ ಓದಿ : ಊಟದಲ್ಲಿ ಜಿರಳೆ ಸಿಕ್ಕ ಪ್ರಕರಣ : ಕ್ಯಾಪಿಟಲ್ ಹೋಟೆಲ್ ಸಿಬ್ಬಂದಿ ವಿರುದ್ಧ FIR..!