ಬೆಂಗಳೂರು : ಶ್ರೀಕಾಂತ್ ಪೂಜಾರಿ ಬಂಧನ ವಿರೋಧಿಸಿ ರಾಜ್ಯದೆಲ್ಲೆಡೆ ಬಿಜೆಪಿ ವಿನೂತನ ಪ್ರತಿಭಟನೆ ಮುಂದುವರೆದಿದೆ. ಇಂದು ಕೂಡ ರಾಜಾಜಿನಗರ ಶಾಸಕ, ಮಾಜಿ ಸಚಿವ ಸುರೇಶ್ಕುಮಾರ್ ಅವರು ಏಕಾಂಗಿಯಾಗಿ ಮಲ್ಲೇಶ್ವರಂ ಠಾಣೆ ಎದುರು ಧರಣಿ ನಡೆಸಿದರು.
ಈ ವೇಳೆ ಸುರೇಶ್ ಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಿಂದುಗಳನ್ನು ಬಂಧಿಸುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಇದನ್ನು ನಾವು ಸಹಿಸುವುದಿಲ್ಲ. ನಾವೂ ಹಿಂದುಗಳೇ ನಮ್ಮನ್ನೂ ಬಂಧಿಸಿ’ ಎಂದು ಘೋಷಣೆ ಕೂಗುವ ಮೂಲಕ ಸುರೇಶ್ ಕುಮಾರ್ ಪ್ರತಿಭಟನೆಗೆ ಮುಂದಾದರು. ‘ನಾನು ಕ್ರಿ.ಶ1992 ಡಿಸೆಂಬರ್ 6ರ ಅಯೋಧ್ಯೆ ಶ್ರೀರಾಮ ಮಂದಿರದ ಕರಸೇವಕ ನನ್ನನ್ನೂ ಬಂಧಿಸಿ’ ಎಂಬ ಫಲಕವನ್ನು ಹಿಡಿದು ಏಕಾಂಗಿಯಾಗಿ ಧರಣಿ ಕುಳಿತರು. ಈ ವೇಳೆ ಸುರೇಶ್ಕುಮಾರ್ಗೆ ಹಿರಿಯ ನಾಯಕ ರಾಮಚಂದ್ರಗೌಡ ಸಾಥ್ ನೀಡಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಸುರೇಶ್ಕುಮಾರ್, ರಾಮಚಂದ್ರಗೌಡ ಗುಡುಗಿದ್ದಾರೆ. ರಾಜ್ಯದಲ್ಲಿ ಹಿಂದೂ ವಿರೋಧಿ, ಭ್ರಷ್ಟ ಸರ್ಕಾರ ಇದೆ, ಕೇಂದ್ರ ಸರ್ಕಾರ ಕೂಡಲೇ ರಾಜ್ಯ ಸರ್ಕಾರವನ್ನು ವಜಾ ಮಾಡ್ಬೇಕು. ಬಿಜೆಪಿ ಹಿರಿಯ ನಾಯಕ ರಾಮಚಂದ್ರಗೌಡ ಆಗ್ರಹಿಸಿದ್ದಾರೆ. ಗೋಧ್ರಾ ಹೇಳಿಕೆ ಕೊಟ್ಟ ಹರಿಪ್ರಸಾದ್ ವಿರುದ್ಧ ಕ್ರಿಮಿನಲ್ ಕೇಸ್ ಹಾಕ್ಬೇಕು ಎಂದು ಸರ್ಕಾರದ ವಿರುದ್ಧ ಸುರೇಶ್ ಕುಮಾರ್ ಕೂಡಾ ಆಕ್ರೋಶ ಹೊರಹಾಕಿದ್ದಾರೆ.
ಇಂದು ಶ್ರೀಕಾಂತ್ ಪೂಜಾರಿ ಬೇಲ್ ಭವಿಷ್ಯ: ರಾಮಜನ್ಮಭೂಮಿ ಹೋರಾಟ ಕೇಸ್ನಲ್ಲಿ ಶ್ರೀಕಾಂತ್ ಪೂಜಾರಿಯನ್ನುಅರೆಸ್ಟ್ ಮಾಡಲಾಗಿದೆ. ಇಂದು ಹುಬ್ಬಳ್ಳಿ ಕೋರ್ಟ್ನಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ಹುಬ್ಬಳ್ಳಿಯ 1ನೇ ಹೆಚ್ಚುವರಿ ಜಿಲ್ಲಾ ಕೋರ್ಟ್ ಇಂದು ಬೇಲ್ ಅರ್ಜಿ ಸಂಬಂಧ ಆದೇಶ ನೀಡಲಿದೆ. ಕೋರ್ಟ್ ನಿನ್ನೆ ವಾದ-ಪ್ರತಿವಾದ ಆಲಿಸಿದ್ದರು. ಇಂದು ಕೋರ್ಟ್ ಬೇಲ್ ಅರ್ಜಿ ಆದೇಶ ಕಾಯ್ದಿರಿಸಿದೆ.
ತುರ್ತು ಪ್ರಕರಣ ಎಂದು ಪರಿಗಣಿಸಿ ನಿನ್ನೆ ವಿಚಾರಣೆ ನಡೆದಿತ್ತು. ವಕೀಲ ಸಂಜೀವ್ ಬಡಸ್ಕರ್ ಶ್ರೀಕಾಂತ್ ಪರ ವಾದ ಮಂಡಿಸಿದ್ದರು. ಪೊಲೀಸರು ಜಾಮೀನು ನೀಡದಂತೆ ಆಕ್ಷೇಪಣೆ ಸಲ್ಲಿಕೆ ಮಾಡಿದ್ದರು.
ಇದನ್ನೂ ಓದಿ : ವಿ.ಸೋಮಣ್ಣ ದೆಹಲಿ ಭೇಟಿಗೆ ಡೇಟ್ ಫಿಕ್ಸ್..