ಬೆಂಗಳೂರು : ಲೋಕಾಕದನದ ಚುನಾವಣೆಯಲ್ಲಿ ಕೈ ಕಟ್ಟಿ ಹಾಕಲು ಕಮಲ, ದಳ ಭರ್ಜರಿ ಸಿದ್ಧತೆ ನಡೆಸಿದೆ. ದೆಹಲಿಯಿಂದ ರಾಜ್ಯಕ್ಕೆ ಸದ್ದಿಲ್ಲದೆ ಬಿಜೆಪಿಯಚುನಾವಣಾ ತಂತ್ರಗಾರಿಕೆ ಟೀಂ ಎಂಟ್ರಿ ಕೊಟ್ಟಿದೆ.
ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಚಾಣಕ್ಯ ಸಚಿವ ಅಮಿಶ್ ಶಾ ಟೀಂ ಫುಲ್ ಆಕ್ಟೀವ್ ಆಗಿದ್ದು, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಜೊತೆಗೆ ತಂತ್ರಗಾರಿಕೆ ಟೀಂ ಜೆಡಿಎಸ್ ಮುಖಂಡರೊಬ್ಬರ ಕಚೇರಿಯಲ್ಲಿ ರಹಸ್ಯ ಮೀಟಿಂಗ್ ನಡೆಸಿದ್ದಾರೆ.
ಆ ತಂಡ ಲೋಕಸಭೆ ಗೆಲ್ಲಲು ಚುನಾವಣಾ ತಂತ್ರಗಾರಿಕೆ ನಡೆಸಲಿದ್ದು, ರಾಜ್ಯದಲ್ಲಿ 28ಕ್ಕೆ 28 ಸ್ಥಾನ ಗೆಲ್ಲಲು ತಂತ್ರಗಾರಿಕೆ ನಡೆಸುತ್ತಿದೆ. 28 ಲೋಕಸಭಾ ಕ್ಷೇತ್ರಗಳ ಮೈತ್ರಿ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆ ಬಗ್ಗೆ, ಆ ಅಭ್ಯರ್ಥಿಗಳ ಬಗ್ಗೆ ಕ್ಷೇತ್ರಗಳಲ್ಲಿ ಜನಾಭಿಪ್ರಾಯ ಕುರಿತು ಮಾಹಿತಿ ಸಂಗ್ರಹಿಸುತ್ತಿದೆ.
ಕೇಂದ್ರ ಸರ್ಕಾರ ಬಗೆಹರಿಸುವಂತ ರಾಜ್ಯದ ಸಮಸ್ಯೆಗಳು, ಕಳೆದ ಲೋಕಸಭೆ ಚುನಾವಣೆಯಲ್ಲಿ ಗಳಿಸಿದ ಮತಗಳ ಅಂಕಿ ಅಂಶಗಳು ಮತ್ತು ವಿಧಾನಸಭೆಯಲ್ಲಿ ಬಿಜೆಪಿ ಜೆಡಿಎಸ್ ಪಡೆದಿರುವ ಮತಗಳು, ಗೆಲ್ಲುವ ಅಭ್ಯರ್ಥಿಗಳು ಈ ಕುರಿತು ಸಂಪೂರ್ಣ ಮಾಹಿತಿ ಕಲೆಹಾಕುತ್ತಿದೆ.
ರಾಜ್ಯ ಸರ್ಕಾರದ ವೈಫಲ್ಯಗಳು ಮತ್ತು ಅದರ ಮೇಲಿನ ಆರೋಪಗಳು, ಜೊತೆಗೆ ಸರ್ಕಾರದ ಗ್ಯಾರಂಟಿ ಜಾರಿಯಲ್ಲಿ ವೈಫಲ್ಯಗಳು ಸೇರಿದಂತೆ ಹಲವು ಮಹತ್ವದ ವಿಚಾರಗಳನ್ನು ಸಂಗ್ರಹಿಸುತ್ತಿದೆ. ಹೆಚ್‌ಡಿಕೆ ಜೊತೆ ಚರ್ಚೆ ನಡೆಸಿ ಅಮಿತ್ ಶಾ ತಂಡ ತಂತ್ರಗಾರಿಕೆಯನ್ನು ಸಿದ್ದಪಡಿಸಿ ವರದಿಯನ್ನು ಹೈಕಮಾಂಡ್ ಗೆ ಸಲ್ಲಿಕೆ ಮಾಡಲಿದೆ.
ಇದನ್ನೂ ಓದಿ : ಮೆಟ್ರೋ ಹಳಿಗೆ ಹಾರಿ ಯುವಕ ಆ*ತ್ಮಹತ್ಯೆಗೆ ಯತ್ನ..