ಬೆಂಗಳೂರು : ಟಾಪ್ ಮೋಸ್ಟ್ ಮಹಿಳಾ ಕಾಲೇಜಿನಿಂದ ಶಾಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ. ಇದು ಶಾಕಿಂಗ್ ಅಷ್ಟೇ ಅಲ್ಲ, ಸರ್ಪ್ರೈಸ್ ಕೊಡೋ ನ್ಯೂಸ್ ಆಗಿದೆ. ವುಮೆನ್ಸ್ ಕಾಲೇಜಿನಲ್ಲಿ ಇನ್ಮುಂದೆ ಹುಡುಗರಿಗೂ ಅಡ್ಮಿಷನ್ಗೆ ಅವಕಾಶ ಕಲ್ಪಿಸಲಾಗಿದ್ದು, ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಹುಡುಗರಿಗೂ ಅಡ್ಮಿಷನ್ ಓಪನ್ ಆಗಿವೆ. ಎಂಸಿಸಿ ಕಾಲೇಜಿನಲ್ಲಿ ಹುಡುಗರಿಗೂ ಅವಕಾಶ ನೀಡಲಾಗಿದೆ.
ರಾಣಿಯರ ಕಾಲೇಜಿನಲ್ಲಿ ಈಗ ರಾಜರ ಎಂಟ್ರಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಎಂಸಿಸಿ ಡೈಮೆಂಡ್ ಜುಬ್ಲಿ ಪ್ರಯುಕ್ತ ಹುಡುಗರಿಗೂ ಅಡ್ಮಿಷನ್ ಗೆ ಅವಕಾಶ ನೀಡಿಲಾಗಿದೆ. ಹುಡುಗರಿಗೆ ಎಂಸಿಸಿ ಕಾಲೇಜ್ ಸರ್ಪ್ರೈಸ್ ಕೊಟ್ಟಿದೆ. 2024-2025ರ ಅಕಾಡೆಮಿಕ್ ಇಯರ್ ಪ್ರವೇಶಕ್ಕೆ ಅವಕಾಶ ನೀಡಿದೆ.
ಈ ವರ್ಷ ತನ್ನ ವಜ್ರ ಮಹೋತ್ಸವ ಆಚರಣೆಗಳನ್ನು ಗುರುತಿಸಲು ಬೆಂಗಳೂರಿನ ಐಕಾನಿಕ್ ಮಹಿಳಾ ಕಾಲೇಜುಗಳಲ್ಲಿ ಒಂದಾಗಿರುವ ಮೌಂಟ್ ಕಾರ್ಮೆಲ್ ಕಾಲೇಜು 2024-25ರ ಶೈಕ್ಷಣಿಕ ವರ್ಷಕ್ಕೆ ಪುರುಷರಿಗೆ ಪ್ರವೇಶ ಕಲ್ಪಿಸಿದೆ. ಸ್ವಾಯತ್ತ ಸಂಸ್ಥೆಯಾಗಿರುವ ಮೌಂಟ್ ಕಾರ್ಮೆಲ್ ಕಾಲೇಜು ಮುಂಬರುವ ಶೈಕ್ಷಣಿಕ ವರ್ಷಕ್ಕೆ ಪದವಿ ಪೂರ್ವ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಿಗೆ ಎಲ್ಲಾ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಮೌಂಟ್ ಕಾರ್ಮೆಲ್ ಕಾಲೇಜು ಬೆಂಗಳೂರಿನಲ್ಲಿ 1948 ರಲ್ಲಿ ಸ್ಥಾಪನೆಯಾದ ಮೊದಲ ಮಹಿಳಾ ಕಾಲೇಜುಗಳಲ್ಲಿ ಒಂದಾಗಿದೆ. ಇದು ಮಹಿಳೆಯರಿಗಾಗಿ ಇರುವ ಭಾರತದ ಉನ್ನತ ಕಾಲೇಜುಗಳಲ್ಲಿ ಒಂದಾಗಿದೆ. ಮೌಂಟ್ ಕಾರ್ಮೆಲ್ ಕಾಲೇಜು ಶಿಕ್ಷಣ ಕ್ಷೇತ್ರದಲ್ಲಿ ಪ್ಲಾಟಿನಂ ಜುಬಿಲಿಯನ್ನು ಕಳೆದ ವರ್ಷ ಪೂರ್ಣಗೊಳಿಸಿದೆ. ಆರು ಸ್ಟ್ರೀಮ್‌ಗಳು ಮತ್ತು 84 ಕೋರ್ಸ್ ಗಳೊಂದಿಗೆ ಕಾಲೇಜು ವಿಶಿಷ್ಟವಾದ ಹಳೆಯ ವಿದ್ಯಾರ್ಥಿಗಳ ಗುಂಪನ್ನು ಹೊಂದಿದೆ.
ಇದನ್ನೂ ಓದಿ : ವಿಜಯಪುರದ ಗೋಳಗುಮ್ಮಟಕ್ಕೆ ಹುಸಿ ಬಾಂಬ್ ಕರೆ..!