ಬಿಜಾಪುರ : ಗೋಳ ಗುಮ್ಮಟಕ್ಕೆ ಕಿಡಿಗೇಡಿಗಳು ಬಾಂಬ್ ಬೆದರಿಕೆ ಹಾಕಿದ್ದು, ಇ-ಮೇಲ್ ಮೂಲಕ ಬಂದಿದ್ದ ಬಾಂಬ್ ಬೆದರಿಕೆ ಹಾಕಲಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ ಮ್ಯೂಜಿಯಂಗೂ ಮೇಲ್ ಕಳುಹಿಸಿದ್ಧಾರೆ.
ವಿಜಯಪುರದ ಗೋಳಗುಮ್ಮಟ ಕಚೇರಿಗೆ ಹುಸಿ ಬಾಂಬ್ ಕರೆ ಹಾಕಲಾಗಿದೆ. ಇ-ಮೇಲ್ ಮೂಲಕ ಕಿಡಿಗೇಡಿಗಳು ಸಂದೇಶದ ರವಾನಿಸಿದ್ಧಾರೆ.ಮ್ಯೂಜಿಯಂನಲ್ಲಿ ಬಾಂಬ್ ಇಟ್ಟಿರೋದಾಗಿ ಬೆದರಿಕೆ ಹಾಕಿದ್ದಾರೆ.
ಮ್ಯೂಜಿಯಂನ ಹಲವು ಜಾಗದಲ್ಲಿ ಬಾಂಬ್ ಇಟ್ಟಿರೋ ಬೆದರಿಕೆ ಹಾಕಿದ್ದು, ಟೆರ ರೈಸರ್ಸ್ ಗ್ರೂಪ್ ಹೆಸರಿನಲ್ಲಿ ಮೇಲ್ ಬಂದಿದೆ. ಸಿಬ್ಬಂದಿ ನಿನ್ನೆ ಸಂಜೆ ಇ-ಮೇಲ್ ಸಂದೇಶ ನೋಡಿದ್ಧಾರೆ.
ತಡರಾತ್ರಿಯೇ ಬಾಂಬ್ ನಿಷ್ಕ್ರಿಯ ದಳ ಭೇಟಿ, ಪರಿಶೀಲನೆ ನಡೆಸಿದ್ದು, ಪರಿಶೀಲನೆ ನಂತರ ಯಾವುದೇ ಬಾಂಬ್ ಪತ್ತೆ ಆಗಿರಲಿಲ್ಲ, ಇದೊಂದು ಹುಸಿ ಬಾಂಬ್ ಕರೆ ಅನ್ನೋದು ಖಚಿತವಾಗಿದೆ. ಟೆರ ರೈಸರ್ ಗ್ರೂಪ್ ಬಗ್ಗೆ ಪೊಲೀಸ ರು ಮಾಹಿತಿ ಸಂಗ್ರಹಿಸುತ್ತಿದ್ಧಾರೆ.
ಬೆಂಗಳೂರಿ ನ ವಿಶ್ವೇಶ್ವರಯ್ಯ ಮ್ಯೂಸಿಯಂ ಗೂ ಬಾಂಬ್ ಬೆದರಿಕೆ ಬಂದಿದ್ದು, ನಿನ್ನೆ ಬೆಳಗ್ಗೆ ಇ-ಮೇಲ್ ಮೂಲಕ ಬೆದರಿಕೆ ಬಂದಿದೆ.
ಉಗ್ರ ಸಂಘಟನೆಯ ಉಲ್ಲೇಖಿಸಿ ಬಂದಿದ್ದ ಇ-ಮೇಲ್ ಸಂದೇಶ ರವಾನಿಸಿದ್ಧಾರೆ. ಪೊಲೀಸರು ಪರಿಶೀಲನೆ ಬಳಿಕ ಕಿಡಿಗೇಡಿಗಳ ವಿರುದ್ಧ ಕಬ್ಬನ್ಪಾರ್ಕ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಹಲವು ಸ್ಪೋಟಕಗಳನ್ನು ಬಚ್ಚಿಡಲಾಗಿದೆ ಎಂದು ಮೇಲ್ ಬಂದಿದ್ದು, ಎಲ್ಲವೂ ಸಹ ಇಂದು ಸ್ಪೋಟಗೊಳ್ಳಲಿದೆ. ಮೇಲ್ ನೋಡಿದ ಬಳಿಕ ಕಬ್ಬನ್ ಪಾರ್ಕ್ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಪರಿಶೀಲನೆ ವೇಳೆ ಹುಸಿ ಬಾಂಬ್ ಬೆದರಿಕೆ ಎಂಬುದು ಪತ್ತೆಯಾಗಿದೆ.
ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಕಚೇರಿ ಗೂ ಹುಸಿ ಬಾಂಬ್ ಬೆದರಿಕೆ ಹಾಕಿದ್ದು, ಕನ್ನಿಂಗ್ ಹ್ಯಾಂ ರಸ್ತೆ ಯ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಕಚೇರಿಗೆ ಮುಂಬೈನ NSE ಕಚೇರಿಯಿಂದ ವಿಧಾನಸೌಧ ಠಾಣೆಗೆ ಮಾಹಿತಿ ನೀಡಿದೆ. ಮಧ್ಯರಾತ್ರಿ ಒಂದು ಗಂಟೆಗೆ ಪೊಲೀಸರು ಮಾಹಿತಿ ಪಡೆದಿದ್ದಾರೆ.
ಕೂಡಲೇ ಬಾಂಬ್ ನಿಷ್ಕ್ರಿಯ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೇಶದ 20ಕ್ಕೂ ಹೆಚ್ಚು ಮ್ಯೂಸಿಯಂಗಳಿಗೆ ಬೆದರಿಕೆ ಮೆಸೇಜ್ ಕಳುಹಿಸಿದ್ಧಾರೆ. ಬೆಂಗಳೂರಿನ ನೆಹರೂ ತಾರಾಲಯ ಕ್ಕೂ ಬೆದರಿಕೆ ಮೆಸೇಜ್ ಕಳುಹಿಸಲಾಗಿದೆ.
ಇದನ್ನೂ ಓದಿ : ಧಾರವಾಡದಲ್ಲಿ ಭೀಕರ ಅಪಘಾತಕ್ಕೆ 4 ಬಲಿ..