ಮಂಗಳೂರು : ಕಾಂತಾರ ಪ್ರೀಕ್ವೆಲ್ಗಾಗಿ ದೈವದ ಅಭಯ ಕೇಳಿದ್ದ ನಟ ರಿಷಬ್ ಶೆಟ್ಟಿಗೆ ನಾನಿದ್ದೇನೆ, ಎದೆಗುಂದಬೇಡ ಎಂದು ಮೈಸಂದಾಯ ದೈವ ಅಭಯ ನೀಡಿದೆ.
ರಿಷಬ್ ಶೆಟ್ಟಿ ಗುರುಪುರ ವಜ್ರದೇಹಿ ಮಠಕ್ಕೆ ಭೇಟಿ ನೀಡಿ, ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹಾಗೂ ಕೇಮಾರು ಈಶ ವಿಠಲದಾಸ ಸ್ವಾಮೀಜಿ ಆಶೀರ್ವಾದ ಪಡೆದಿದ್ದಾರೆ. ವಜ್ರದೇಹಿ ಜಾತ್ರೆಯ ಕೋಲದಲ್ಲಿ ಭಾಗಿಯಾಗಿದ್ದರು.
ರಿಷಬ್ ದೈವ ಸಾನಿಧ್ಯ ದಲ್ಲಿ ಪುಳಕಿತಗೊಂಡರು. ದೈವ ರಿಷಬ್ ಶೆಟ್ಟಿ ತಲೆ ಸವರಿ ಯಾವುದಕ್ಕೂ ಭಯ ಪಡಬೇಡ, ಮುನ್ನುಗ್ಗು ಎಂದು ಆಶೀರ್ವದಿಸಿದೆ. ರಿಷಬ್ ಶೆಟ್ಟಿ ಮಗ್ನವಾಗಿ ದೈವ ಸೇವೆ ಕಣ್ತುಂಬಿಕೊಂಡಿದ್ದಾರೆ. ಇದಕ್ಕೂ ಮುನ್ನ ಪಂಜುರ್ಲಿಯ ಆಶೀರ್ವಾದ ಪಡೆದಿದ್ದರು.
ಇದನ್ನೂ ಓದಿ : ಇಂದು ಕಕ್ಷೆಗೆ ಸೇರಲಿದೆ ಆದಿತ್ಯ-L-1.
Author: Btv Kannada1
Post Views: 748