ಬೆಂಗಳೂರು : ಬೆಂಗಳೂರು ದಕ್ಷಿಣ ಕಂದಾಯ ಇಲಾಖೆಯಲ್ಲಿ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಂದಾಯ ಇಲಾಖೆ ದ್ವಿತೀಯ ದರ್ಜೆ ಸಹಾಯಕ ಬಾಲಕೃಷ್ಣ ಮತ್ತು ಕಂಪ್ಯೂಟರ್ ಆಪರೇಟರ್ ಸೋಮಶೇಖರ್ ಬಂಧಿತ ಆರೋಪಿಗಳಾಗಿದ್ದಾರೆ.
ಬ್ಯಾಟರಾಜು ಎಂಬುವವರ ಖಾತಾ ಬದಲಾವಣೆ ಮಾಡಲು ಬಾಲಕೃಷ್ಣ ಮತ್ತು ಸೋಮಶೇಖರ್ 1.20 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಮೊದಲು 80 ಸಾವಿರ ರೂಪಾಯಿ ನೀಡುವಂತೆ ಸೂಚನೆ ನೀಡಿದ್ದರು. ಬ್ಯಾಟರಾಜುರಿಂದ 80 ಸಾವಿರ ಹಣ ಪಡೆಯುವ ವೇಳೆ ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಬ್ಯಾಟರಾಜು ತನ್ನ ತಾಯಿ ಮೋಹನ್ ಕುಮಾರಿ ಹೆಸರಿನ ಖಾತೆಯನ್ನ ತಮ್ಮ ಮಗಳು ನಿಸರ್ಗ ಹೆಸರಿಗೆ ಬದಲಾವಣೆ ಮಾಡಲು ಬೆಂಗಳೂರು ದಕ್ಷಿಣ ತಾಲ್ಲೂಕು ಉಪ ವಿಭಾಗಾಧಿಕಾರಿ ಕಚೇರಿಗೆ ಬಂದಿದ್ದರು. ಈ ವೇಳೆ ಕೆಲಸ ಮಾಡಿಕೊಡಲು ದ್ವಿತೀಯ ದರ್ಜೆ ಸಹಾಯಕ ಬಾಲಕೃಷ್ಣ, ಕಂಪ್ಯೂಟರ್ ಆಪರೇಟರ್ ಸೋಮಶೇಖರ್ 1.20 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಸಂಬಂಧ ಲೋಕಾಯುಕ್ತ ಇಲಾಖೆಗೆ ದೂರು ನೀಡಿದ್ದರು. ಅಧಿಕಾರಿಗಳು ಇಬ್ಬರು ಲಂಚ ಪಡೆಯುತ್ತಿದ್ದಾಗಲೇ ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇಬ್ಬರನ್ನ ಬಂಧಿಸಿ ತನಿಖೆ ಮಂದುವರೆಸಿದ್ದಾರೆ.
ಇದನ್ನೂ ಓದಿ : ಮಾರ್ಟಿನ್ ಸಿನಿಮಾದ ಆಡಿಯೋ ರೈಟ್ಸ್ 10 ಕೋಟಿಗೆ ಸೇಲ್..