Download Our App

Follow us

Home » Uncategorized » Bengaluru: ಹೊಸ ವರ್ಷಾಚರಣೆಗೆ ಪ್ಲಾನ್ ಮಾಡಿಕೊಂಡಿರೋ ಬೆಂಗಳೂರಿಗರೇ ಈ ವಿಷಯಗಳು ನಿಮಗೆ ಗೊತ್ತಿರಲಿ

Bengaluru: ಹೊಸ ವರ್ಷಾಚರಣೆಗೆ ಪ್ಲಾನ್ ಮಾಡಿಕೊಂಡಿರೋ ಬೆಂಗಳೂರಿಗರೇ ಈ ವಿಷಯಗಳು ನಿಮಗೆ ಗೊತ್ತಿರಲಿ

ಬೆಂಗಳೂರು: 2024ರ ವರ್ಷದ ಸಂಭ್ರಮದ ಸ್ವಾಗತಕ್ಕೆ ಬೆಂಗಳೂರು (Bengaluru) ಸಜ್ಜಾಗಿದೆ. ನಗರಾದ್ಯಂತ ಭರದ ಸಿದ್ಧತೆಗಳು ನಡೆದಿವೆ. ಪಂಚತಾರಾ ಹೋಟೆಲ್‌ಗಳು, ಕ್ಲಬ್‌ಗಳು, ಪಬ್‌ಗಳು, ರೆಸ್ಟೋರೆಂಟ್‌ಗಳು ಪಾರ್ಟಿಗೆ ತಯಾರಾಗಿದೆ. ಮಾಲ್‌ಗಳು, ರೆಸ್ಟೋರೆಂಟ್ಸ್‌, ಪಬ್‌ಗಳು ಗ್ರಾಹಕರನ್ನು ಸೆಳೆಯಲು ತರೇಹವಾರಿ ರೀತಿಯಲ್ಲಿ ಸಿಂಗಾರಗೊಂಡು ಝಗಮಗಿಸುತ್ತಿವೆ. ಪಾರ್ಟಿಗಳಿಗೆ ಕಪಲ್ಸ್‌ ಎಂಟ್ರಿ, ಫ್ಯಾಮಿಲಿ ಪ್ಯಾಕೇಜ್‌ಗಳೂ ಘೋಷಣೆಯಾಗಿವೆ. ಹಲವು ಪಬ್‌, ಕ್ಲಬ್‌ಗಳಲ್ಲಿ ಖ್ಯಾತ ಗಾಯಕರ, ಡಿಜೆಗಳ ಸಂಗೀತ ರಸಸಂಜೆ ಆಯೋಜನೆಗೊಂಡಿವೆ. ಇನ್ನೂ ಹಲವೆಡೆ ವೆಸ್ಟರ್ನ್, ದೇಸಿ, ಬಾಲಿವುಡ್‌, ಱಪರ್ ಗೀತೆಗಳ ಕಾರ್ಯಕ್ರಮಗಳು ನಿಗದಿಯಾಗಿದ್ದು ವರ್ಷದ ಕೊನೆಯ ರಾತ್ರಿ ರಂಗೇರಲಿದೆ.

ಜಾಹೀರಾತು

ಮೆಟ್ರೋ ಸೇವೆ ವಿಸ್ತರಣೆ

ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ನಮ್ಮ ಮೆಟ್ರೊ ಸೇವೆಯನ್ನು ಇಂದು ಮಧ್ಯರಾತ್ರಿ 2.15ರವರೆಗೆ ವಿಸ್ತರಿಸಲಾಗಿದೆ. ಹಾಗೆಯೇ, ಬಿಎಂಟಿಸಿಯಿಂದ ಎಂ.ಜಿ ರಸ್ತೆ, ಬ್ರಿಗೇಡ್‌ ರಸ್ತೆಯಿಂದ ನಗರದ ನಾನಾ ಭಾಗಗಳಿಗೆ ಬಸ್‌ ಸೇವೆ ಕಲ್ಪಿಸಲಾಗಿದೆ.

ಐಟಿ-ಬಿಟಿ ಸಿಟಿಯಲ್ಲಿ ನವ ವರ್ಷ ಸೆಲಬ್ರೇಟ್‌ ಮಾಡಲು ವಿದೇಶಗಳು, ಅನ್ಯ ರಾಜ್ಯಗಳು, ಜಿಲ್ಲೆಗಳಿಂದ ಜನರ ದಂಡೇ ಹರಿದು ಬಂದಿದೆ. ಪರಿಣಾಮ ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ.

Bangaloreans who have planned for the New Year celebration you should know these things
ಹೊಸ ವರ್ಷಾಚರಣೆಗೆ ಬೆಂಗಳೂರು ಸಿದ್ಧತೆ

ಮನರಂಜನಾ ಕಾರ್ಯಕ್ರಮಗಳು

ಡಿ. 31ರ ರಾತ್ರಿ ಆಯೋಜನೆಗೊಂಡಿರುವ ಪಾರ್ಟಿ, ಔತಣಕೂಟ, ಸಂಗೀತ ಸಂಜೆ, ಡಿ.ಜೆ ಸೇರಿದಂತೆ ಮನರಂಜನಾ ಕಾರ್ಯಕ್ರಮಗಳ ಟಿಕೆಟ್‌ಗಳು ಭರ್ಜರಿಯಾಗಿ ಮಾರಾಟವಾಗಿವೆ. ಟಿಕೆಟ್‌ ದರ ಒಂದು ಸಾವಿರದಿಂದ ಆರಂಭಗೊಂಡು ಗರಿಷ್ಠ 50 ಸಾವಿರ ರೂ.ವರೆಗೂ ತಲುಪಿದೆ ಎನ್ನಲಾಗುತ್ತಿದೆ.

ಭದ್ರತೆಗೆ 5 ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ

ಕಳೆದ ವರ್ಷಕ್ಕಿಂತ ಈ ಬಾರಿ ನಗರದಲ್ಲಿ ಹೊಸ ವರ್ಷದ ಸಂಭ್ರಮ ಸ್ವಾಗತಕ್ಕೆ ಭರ್ಜರಿ ತಯಾರಿ ನಡೆದಿರುವ ಮಾಹಿತಿ ಅರಿತಿರುವ ಪೊಲೀಸ್‌ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಕೈಗೊಂಡಿದೆ. ಸುಮಾರು ಐದು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಿದೆ.

Bangaloreans who have planned for the New Year celebration you should know these things
ಹೊಸ ವರ್ಷಾಚರಣೆಗೆ ಬೆಂಗಳೂರು ಸಿದ್ಧತೆ

ಹೋಟೆಲ್, ಪಬ್ ಮಾಲೀಕರಿಗೆ ಸೂಚನೆ

ಹೊಸ ವರ್ಷದ ಸಂಭ್ರಮಾಚರಣೆಗೆ ಲಕ್ಷಾಂತರ ಜನ ಸೇರುವ ಬ್ರಿಗೇಡ್‌ ರಸ್ತೆ, ಎಂಜಿ ರಸ್ತೆ ಹಾಗೂ ಇಂದಿರಾನಗರ, ಕೋರಮಂಗಲ ಸುತ್ತಮುತ್ತಲು ಖಾಕಿ ಕಣ್ಗಾವಲು ಹೆಚ್ಚಿಸಲಾಗಿದೆ. ಹೋಟೆಲ್‌, ಪಬ್‌, ರೆಸ್ಟೋರೆಂಟ್‌ಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಂಡು, ಇಡೀ ರಾತ್ರಿಯ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಬೇಕು. ಜತೆಗೆ, ಗ್ರಾಹಕರ ವಿವರವನ್ನೂ ಪಡೆದಿರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಜಾಹೀರಾತು
Bangaloreans who have planned for the New Year celebration you should know these things
ಹೊಸ ವರ್ಷಾಚರಣೆಗೆ ಬೆಂಗಳೂರು ಸಿದ್ಧತೆ

ಬಂದೋಬಸ್ತ್ ಬಗ್ಗೆ ಎಲ್ಲಾ ಡಿಸಿಪಿಗಳ ಜೊತೆ ಕಮೀಷನರ್ ಸಭೆ ನಡೆಸಿದ್ದಾರೆ. ಸಭೆ ಬಳಿಕ ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಕೋರಮಂಗಲ ಹಾಗೂ ಇಂದಿರಾನಗರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಿಸಿ ಕ್ಯಾಮೆರಾ, ಬ್ಯಾರಿಗೇಡ್​​​, ವಾಚ್ ಟವರ್, ಮಹಿಳೆಯರ ಸುರಕ್ಷಿತೆಗೆ ಏನೆಲ್ಲ ವ್ಯವಸ್ಥೆ ಮಾಡಲಾಗಿದೆ ಅಂತ ಪರಿಶೀಲನೆ ನಡೆಸಿದರು.

ಬ್ಲ್ಯಾಕ್ ಸೀರೆಯಲ್ಲಿ ಸಾರಾ ತೆಂಡೂಲ್ಕರ್!


ಬ್ಲ್ಯಾಕ್ ಸೀರೆಯಲ್ಲಿ ಸಾರಾ ತೆಂಡೂಲ್ಕರ್!

ಹಲವೆಡೆ ಸಂಚಾರ ಬದಲಾವಣೆ

ಇನ್ನು ಇಂದು ರಾತ್ರಿ ಬೆಂಗಳೂರಿನ ಹಲವೆಡೆ ಸಂಚಾರ ಬದಲಾವಣೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಸವಾರರು ಮತ್ತು ಪಾದಚಾರಿಗಳು ಸೇರುವ ರಸ್ತೆಗಳ ಮಾರ್ಗಗಳಲ್ಲಿ ಮಾರ್ಪಾಡು ಮಾಡಲಾಗಿದೆ. ಎಂ.ಜಿ.ರಸ್ತೆ, ಬ್ರಿಗೇಡ್‌ರಸ್ತೆ, ರೆಸಿಡೆನ್ಸಿ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಚರ್ಚ್ ಸ್ಟ್ರೀಟ್‌ ನಲ್ಲಿ ವಾಹ ಸಂಚಾರ ನಿರ್ಬಂಧಿಸಲಾಗಿದೆ. ಇಂದು ರಾತ್ರಿ 8-00 ಗಂಟೆ ಬಳಿಕ ಸಂಚಾರ ವ್ಯವಸ್ಥೆ ಮಾರ್ಪಾಡು ಮಾಡಲಾಗಿದೆ.

ಜಾಹೀರಾತು

ಇದನ್ನೂ ಓದಿ:
Bengaluru: ಹೊಸ ವರ್ಷದ ಸಂಭ್ರಮಾಚರಣೆಗೆ ಕ್ಷಣಗಣನೆ; ಈ ಮಾರ್ಗದಲ್ಲಿ ಸಂಚಾರ ನಿಷೇಧ

60 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

ಹೊಸ ವರ್ಷಾಚರಣೆ ಹಿನ್ನೆಲೆ ಡ್ರಗ್ಸ್‌ ಪೂರೈಕೆದಾರರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಹೊರ ರಾಜ್ಯಗಳಿಂದ ಬೆಂಗಳೂರಿಗೆ ಡ್ರಗ್ಸ್‌ ಸಾಗಿಸುತ್ತಿದ್ದ ಏಳು ಜನರನ್ನ ರೈಲ್ವೆ ಪೊಲೀಸರು ಬಂಧಿಸಿದ್ದು, 60 ಲಕ್ಷ ಬೆಲೆಯ ಗಾಂಜಾ ಸೀಜ್‌‌ ಮಾಡಿದ್ದಾರೆ.

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

Source link

BTV Kannada
Author: BTV Kannada

Leave a Comment

RELATED LATEST NEWS