ಬಳ್ಳಾರಿ : ಇದು ಸಿನಿಮಾ ಅಲ್ಲಾ ರೀ.. ರಿಯಲ್ ಸ್ಟೋರಿಯಾಗಿದ್ದು, ಥೇಟ್ ಸಿನಿಮಾ ಸೀನ್ ರಿಪೀಟ್ ಆಗಿದೆ. ಬಳ್ಳಾರಿಯಲ್ಲಿ ಕಿರಾತಕ ಫಿಲ್ಮಿ ಸ್ಟೈಲ್ನಲ್ಲಿ ಮ್ಯಾರೇಜ್ ನಡೆದಿದ್ದು, ಕಾರಿನಲ್ಲೇ ಹಾರ ಬದಲಿಸಿ ಪ್ರೇಮಿಗಳು ಮದುವೆಯಾಗಿದ್ದಾರೆ.
ಪೋಷಕರ ವಿರೋಧದ ನಡುವೆಯೂ ಬಳ್ಳಾರಿ ತೆಕ್ಕಲಕೋಟೆ ಯುವಕ, ಕೊಪ್ಪಳದ ಯುವತಿ ಮದುವೆಯಾಗಿದ್ದಾರೆ. ಶಿವಪ್ರಸಾದ್ ಎಂಬಾತ ಕಾರ್ನಲ್ಲೇ ಮ್ಯಾರೇಜ್ ಆದ ಪ್ರಿಯಕರ. ಯುವತಿ ಪೋಷಕರ ವಿರೋಧ ಹಿನ್ನೆಲೆ ಶಾಂತಿಧಾಮಕ್ಕೆ ಶಿಫ್ಟ್ ಆಗಿದ್ದಳು, ಯುವತಿ ಒಮ್ಮೆ ಪ್ರೇಮಿ, ಮತ್ತೊಮ್ಮೆ ಪೋಷಕರು ಬೇಕು ಎನ್ನುತ್ತಿದ್ದಳು. ಎರಡೂ ಕಡೆ ಪೋಷಕರಿಂದ ಶಾಂತಿಧಾಮದ ಮುಂದೆಯೇ ವಾಗ್ವಾದ ನಡೆದಿದೆ. ಗಂಡ ಬೇಕು ಎಂದವಳ ಬಲವಂತವಾಗಿ ಎಳೆದೊಯ್ಯಲು ಪೋಷಕರು ಯತ್ನಿಸಿದ್ದಾರೆ. ಪೊಲೀಸರ ಮುಂದೆಯೇ ಹೈಡ್ರಾಮಾ ನಡೆದಿದೆ. ಯುವಕ ಹೆಂಡ್ತಿ ಬೇಕು, ರಕ್ಷಣೆ ಬೇಕು ಎಂದು ಶಾಂತಿಧಾಮದ ಮುಂದೆ ಕುಳಿತಿದ್ದನು. ಹೀಗಾಗಿ ಪೋಷಕರು ಸಾಂತ್ವನ ಕೇಂದ್ರದಲ್ಲೇ ಯುವತಿಯನ್ನು ಬಿಟ್ಟು ಹೋಗಿದ್ದಾರೆ.
Author: Btv Kannada1
Post Views: 41