ಕೊಡಗು : ಕೊಡಗು ಜಿಲ್ಲೆ ಮಳೆಗಾಲದಂತಹ ಜಿಟಿ ಜಿಟಿ ಮಳೆಗೆ ಹೈರಾಣಾಗಿದೆ. ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಮಳೆಯಿಂದ ಕಾರು ಸ್ಕಿಡ್ ಆದ ಘಟನೆಯೊಂದು ನಡೆದಿದೆ.
ಶುಂಟಿಕೊಪ್ಪದಿಂದ ಮಡಿಕೇರಿ ಕಡೆಗೆ ಸಾಗುತ್ತಿದ್ದ ಮಾರುತಿ ಕಾರು, ರಾ. ಹೆ. 275ರ ಕೆದಕಲ್ ದೇವಾಲಯದ ಬಳಿ ಸ್ಕಿಡ್ ಆಗಿದೆ. ಮಳೆಯಿಂದ ಸ್ಕಿಡ್ ಆಗಿ ಎದುರಿಂದ ಬಂದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ.
ಕಾರು ಚಾಲಕ ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕಾರು ಸ್ಕಿಡ್ ಆಗಿ ಅಪಘಾತಕ್ಕೀಡಾದ ದೃಷ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.
ಇದನ್ನೂ ಓದಿ : ಆತ್ಮಹ*ತ್ಯೆಗೆ ಯತ್ನಿಸಿದ್ರಾ ಡ್ರೋನ್ ಪ್ರತಾಪ್?
Author: Btv Kannada1
Post Views: 60