ಬೆಂಗಳೂರು : ಹೊಸ ವರ್ಷದ ಪಾರ್ಟಿ ಟಿಕೆಟ್ ಹೆಸರಲ್ಲಿ ವಂಚನೆ ಮಾಡಿದೆ. ಪ್ರತಿಷ್ಠಿತ ಸ್ಟಾರ್ ಹೋಟೆಲ್ JW ಮ್ಯಾರಿಯೇಟ್ ಹೆಸರಲ್ಲಿ ಕಿಡಿಗೇಡಿಗಳು ಮಹಿಳೆಗೆ ವಂಚಿಸಿದ್ದಾರೆ.
ಹೊಸ ವರ್ಷಕ್ಕೆ ಫುಲ್ ಪಾರ್ಟಿ ಮಾಡೋಣ ಎಂದು ಹೇಮ ಮಾಲಿನಿ ಎಂಬ ಮಹಿಳೆ ಪಾರ್ಟಿ ಟಿಕೆಟ್ಗಾಗಿ ಹೋಟೆಲನ್ನು ಸಂಪರ್ಕ ಮಾಡಿದ್ದರು. ಈ ವೇಳೆ ಸುರೇಂದರ್ ಕುಮಾರ್ ಎಂಬಾತ ಸಂಪರ್ಕಮಾಡಲಾಗಿದೆ. ಟಿಕೆಟ್ ನೀಡುವುದಾಗಿ ಹೇಳಿ ಒಂದು ಟಿಕೆಟ್ ಗೆ ಬರೋಬ್ಬರಿ 19500 ಹಣ ಪಡೆದು ವಂಚನೆ ಮಾಡಿದ್ದಾನೆ.
ಈಗಲೇ ಪೇ ಮಾಡಿ ಎಂದಿದ್ದ. ಇದನ್ನು ಒಪ್ಪಿದ ಹೇಮ ಹಣವನ್ನು ಗೂಗಲ್ ಪೇ ಮಾಡಿದ್ದರು. ನಂತರ ಮ್ಯಾನೇಜರ್ ಹೆಸರು ಹೇಳಿ ಟಿಕೆಟ್ ಪಡೆಯಲು ಸೂಚಿಸಿದ್ದ.
ಸರಿ ಎಂದು ಹೇಮ ಅವರು ಹೋಟೆಲ್ ಬಳಿ ಹೋಗಿ ಮ್ಯಾನೇಜರ್ ಹೆಸರು ಹೇಳಿದಾಗ ಆ ಹೆಸರಿನ ಸಿಬ್ಬಂದಿಯೇ ಇಲ್ಲ ಎನ್ನುವುದು ಪತ್ತೆಯಾಗಿದೆ.
ನಂತ್ರ ಅಂಬಿಕ ಅನ್ನೋ ಮ್ಯಾನೇಜರ್ ಹೆಸರು ಹೇಳಿ ಟಿಕೆಟ್ ಪಡೆಯಲು ಸೂಚನೆ ನೀಡಿದ್ದಾನೆ. ಹೋಟೆಲ್ ಬಳಿ ಹೋದಾಗ ಅಂಬಿಕಾ ಎಂಬ ಸಿಬ್ಬಂದಿ ಇಲ್ಲಾ ಎನ್ನುವುದು ಪತ್ತೆಯಾಗಿದೆ. ನಂತ್ರ ಮಹಿಳೆ ವಂಚನೆಗೆ ಒಳಗಾಗಿರುವುದು ಪತ್ತೆಯಾಗಿದೆ.
ಈ ಘಟನೆ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.