ಬೆಂಗಳೂರು : ತಾಯಿಯೇ ಹೆತ್ತ ಮಗಳನ್ನು ಕಿಡ್ನಾಪ್ ಮಾಡಿಸಿದ್ಳಾ..? ವಾಸಿಂ ಎಂಬ ವ್ಯಕ್ತಿ ಮೂಲಕ ಕಿಡ್ನಾಪ್ ಮಾಡಿಸಿರುವ ಆರೋಪ ಕೇಳಿಬಂದಿದೆ.
ವಾಸಿಂ ಸೋಫಾ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದನು.1 ಲಕ್ಷ ಹಣ ನೀಡಿ ಡಿಸೆಂಬರ್ 18ರಂದು ಕಿಡ್ನಾಪ್ ಮಾಡಿಸಿದ್ದಾರೆಂದು ಆರೋಪಿಸಿದ್ದಾರೆ.
ಬೆಂಗಳೂರಿನ ಬನಶಂಕರಿ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಗಳು ನಾಪತ್ತೆಯಾದ ನಂತರ ತಂದೆ ಕಂಗಾಲಾಗಿದ್ದರು. ಮಹಿಳೆ ಪತಿ ಬಳಿ ಮಗಳನ್ನು ಬಿಟ್ಟು ಬೇರೆಯವನ ಮದ್ವೆಯಾಗಿದ್ದಳು.
ವಾಸಿಂ ಚಾಕೊಲೇಟ್ ಕೊಡಿಸೋದಾಗಿ ಮಗುವನ್ನು ಕರೆದೊಯ್ದಿದ್ದನು. ಮಗಳನ್ನು ಹುಡುಕಿಕೊಡಿ ಎಂದು ಬನಶಂಕರಿ ಪೊಲೀಸರಿಗೆ ತಂದೆ ದೂರು ನೀಡಿದ್ದಾರೆ.
ಕೊನೆಗೆ ತಾಯಿಯ ಬಳಿ ಮಗು ಇದೆ ಎಂದು ಪೊಲೀಸರ ಮಾಹಿತಿ ನೀಡಿದ್ಧಾರೆ. ತಾಯಿ ಬಳಿ ಮಗು ಇರೋದಕ್ಕೆ ತಂದೆ ಷಫೀವುಲ್ಲಾ ವಿರೋಧ ವ್ಯಕ್ತಪಡಿಸಿದ್ದಾರೆ. ಮಾಜಿ ಪತ್ನಿ ವಿರುದ್ಧ ಪತಿ ಷಫೀವುಲ್ಲಾ ಹೋರಾಟಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ : ತಿರುಪತಿ ತಿಮ್ಮಪ್ಪನ ಸಂಪತ್ತು ಎಷ್ಟು ಗೊತ್ತಾ..?
Author: Btv Kannada1
Post Views: 47