Download Our App

Follow us

Home » ಅಪರಾಧ » ಪಾರ್ಟಿ ಹಾಲ್ ನಿರ್ಮಿಸಿದ ಮಾಲ್ ಆಫ್ ಏಷ್ಯಾ..!

ಪಾರ್ಟಿ ಹಾಲ್ ನಿರ್ಮಿಸಿದ ಮಾಲ್ ಆಫ್ ಏಷ್ಯಾ..!

ಬೆಂಗಳೂರು : ಪಾರ್ಕಿಂಗ್ ವಿಚಾರವಾಗಿ ಮತ್ತು ಬೆಂಗಳೂರು ನಗರ ಪೊಲೀಸರ ನಡುವೆ ಜಗಳ ನಡೆಯುತ್ತಿದೆ. ಈ ಬೆನ್ನಲೇ ಕನ್ನಡ ದ್ರೋಹಿ ಮಾಲ್ ಆಫ್ ಏಷ್ಯಾದಿಂದ ಮಹಾಮೋಸವಾಗಿದೆ.

ಪಾರ್ಕಿಂಗ್​ಗೆ ಅನುಮತಿ ಪಡೆದು ಪಾರ್ಟಿ ಹಾಲ್ ನಿರ್ಮಾಣ ಮಾಡಿದ್ದು, BBMP ನಿಯಮಗಳನ್ನು ಮಾಲ್ ಆಫ್ ಏಷ್ಯಾ ಗಾಳಿಗೆ ತೂರಿದೆ. ಮಾಲ್ ಅನಧಿಕೃತವಾಗಿ ಪಾರ್ಟಿ ಹಾಲ್ ನಿರ್ಮಿಸಿದ್ದು, ಯಾವುದೇ ಕ್ಷಣದಲ್ಲಿ ಮಾಲ್ ಆಫ್ ಏಷ್ಯಾ ಡೆಮಾಲಿಷನ್ ಆಗಲಿದೆ.

ಪಾರ್ಕಿಂಗ್ ವಿಚಾರವಾಗಿ ಪೊಲೀಸರು 114 ಸೆಕ್ಷನ್ ಜಾರಿ ಮಾಡಿದ್ದಾರೆ. ಈ ನಡುವೆ ಮಾಲ್​ನಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸ್ಥಳೀಯರು ಹೇಳಿಕೊಂಡಿದ್ದಾರೆ. ಮಾಲ್​ಗೆ OC ಕೊಟ್ಟಿರೋ ಅಧಿಕಾರಿಗಳು ಕೂಡಾ ಜೈಲು ಸೇರಲಿದ್ದಾರೆ.

ಕಟ್ಟಡ ಪೂರ್ಣಗೊಳ್ಳದೇ ನಕ್ಷೆ ಉಲ್ಲಂಘಿಸಿದ್ರೂ ಅಧಿಕಾರಿಗಳು OC ನೀಡಿದ್ದಾರೆ. ಈ ಬಗ್ಗೆ ಖುದ್ದು ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ಸುಳಿವು ಸಿಕ್ಕಿದೆ.

ನಕ್ಷೆ ನಿಯಮ ಉಲ್ಲಂಘಿಸಿದ ಮಾಲ್​ಗೆ BBMP ನೋಟಿಸ್ ಜಾರಿಯಾಗಿದೆ. OC ನೀಡಿದ್ದ ಅಧಿಕಾರಿಗಳ ವಿರುದ್ಧವೂ ತನಿಖೆಗೆ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯೂ ನೋಟಿಸ್ ನೀಡಿತ್ತು. ಶಬ್ಧ ಮಾಲಿನ್ಯ ಹಿನ್ನೆಲೆಯಲ್ಲಿ PCB ನೋಟಿಸ್ ನೀಡಿದ್ದು, ಮಾಲ್ ಪಕ್ಕದ L&T ರೈನ್ ಟ್ರೀ ಬುಲೇವಾರ್ಡ್ ಅಪಾರ್ಟ್ಮೆಂಟ್ ನಿವಾಸಿಗಳ ದೂರು ನೀಡಿದ್ದರು.

ದೂರು ನಂತರ ಪರಿಶೀಲಿಸಿದಾಗ ಶಬ್ಧಮಾಲಿನ್ಯ ದೃಢಪಟ್ಟಿತ್ತು. ಇದೀಗ ಮಾಲ್ ಆಫ್ ಏಷ್ಯಾವನ್ನು ಒಡೆದು ಉರುಳಿಸೋದು ಫಿಕ್ಸ್ ಆಗಿದೆ.

ಇದನ್ನೂ ಓದಿ : ಮೈಸೂರಲ್ಲಿ ಪೈಲೆಟ್‌ ಕಣ್ಣಿಗೆ ಲೇಸರ್ ಲೈಟ್..

Btv Kannada1
Author: Btv Kannada1

Leave a Comment

RELATED LATEST NEWS