ತಿರುಪತಿ : ತಿರುಪತಿ ತಿಮ್ಮಪ್ಪ ದೇಶದ ಕೋಟ್ಯಾಧಿಪತಿಗಳನ್ನೆಲ್ಲಾ ಮೀರಿಸಿದ್ದು, ಸಚಿನ್, ವಿರಾಟ್ ಆದಾಯವನ್ನೇ ತಿಮ್ಮಪ್ಪನ ಹುಂಡಿ ಕಲೆಕ್ಷನ್ ಮೀರಿದೆ. ತಿಮ್ಮಪ್ಪನ ಸಂಪತ್ತಿನ ವೈಟ್ ಪೇಪರ್ ಭಾರೀ ವೈರಲ್ ಆಗುತ್ತಿದೆ.
ತಿಮ್ಮಪ್ಪನ ಸಂಪತ್ತು ಟಾಟಾ, ನೆಸ್ಲೆ, ಬಜಾಜ್ ಕಂಪನಿಗಳನ್ನೇ ಮೀರಿಸಿದ್ದು, ಈ ಕಂಪನಿಗಳ ಒಟ್ಟಾರೆ ಸಂಪತ್ತು ಸೇರಿದ್ರೂ 2.6 ಲಕ್ಷ ಕೋಟಿಯಾಗಿದೆ.
ಆದ್ರೆ ತಿಮ್ಮಪ್ಪನ ಸಂಪತ್ತು ಗಳಿಕೆಯಲ್ಲಿ ಹೊಸ ದಾಖಲೆ ಬರೆದಿದ್ದು, 2022ರಲ್ಲೇ 3 ಲಕ್ಷ ಕೋಟಿ ಹತ್ತಿರಕ್ಕೆ ಬಂದಿದೆ.
ತಿಮ್ಮಪ್ಪನ ವರ್ಷದ ಹುಂಡಿ ಕಲೆಕ್ಷನ್ ಸಚಿನ್ ಮತ್ತು ಕೊಹ್ಲಿ ಆದಾಯಕ್ಕೂ ಹೆಚ್ಚಿದೆ. ತೆಂಡೂಲ್ಕರ್ ವಾರ್ಷಿಕ ಆದಾಯ 1300 ಕೋಟಿ ಹಾಗೂ ವಿರಾಟ್ ಕೊಹ್ಲಿ ವಾರ್ಷಿಕ ಆದಾಯ 1000 ಕೋಟಿಯಿದೆ.
ಆದ್ರೆ ತಿಮ್ಮಪ್ಪನ ಹುಂಡಿಯಲ್ಲಿ ವರ್ಷಕ್ಕೆ 1400 ಕೋಟಿ ಸಂಗ್ರಹವಾಗುತ್ತಿದೆ. ಜೊತೆಗೆ ಕಾಣಿಕೆ, ದೇಣಿಗೆ, ಮುಡಿ, ಫಿಕ್ಸಡ್ ಡೆಪಾಸಿಟ್ ಸೇರಿ ವಿವಿಧ ಆದಾಯ ಹೆಚ್ಚಳವಾಗಿದೆ.
ಬಾಲಾಜಿ ಹೆಸರಿನಲ್ಲಿ ಬರೋಬ್ಬರಿ 11,225 ಕೆ.ಜಿ.ಚಿನ್ನ, 10,000 ಕೆಜಿ ಬೆಳ್ಳಿ, ಮತ್ತು 6000 ಎಕರೆ ಅರಣ್ಯ ಸೇರಿ 75 ಸ್ಥಳಗಳಲ್ಲಿ 7636 ಎಕರೆ ಭೂಮಿ ಟಿಟಿಡಿ ಹೆಸರಲ್ಲಿದೆ. ಟಿಟಿಡಿ ಹೆಸರಿನಲ್ಲಿ ದೇಶಾದ್ಯಂತ 71 ದೇಗುಲಗಳನ್ನು ನಡೆಸಲಾಗುತ್ತಿದೆ. ವಾಣಿಜ್ಯ ಕಟ್ಟಡ, ಸಮುದಾಯ ಭವನಗಳ ಲೀಸ್ನಿಂದ ಕೋಟಿ-ಕೋಟಿ ಆದಾಯ ಬರುತ್ತಿದೆ.
ಇದನ್ನೂ ಓದಿ : ಜ.13ಕ್ಕೆ KSET ಪರೀಕ್ಷೆ: ವಸ್ತ್ರ ಸಂಹಿತೆ ಕಡ್ಡಾಯ..