ಬೆಂಗಳೂರು: ಗಾರ್ಡನ್ ಟರ್ಮಿನಲ್ (Garden Terminal) ಅಂತಲೇ ಹೆಸರು ಪಡೆದಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (Kempegowda International Airport) ಟರ್ಮಿನಲ್ 2 ಗೆ ಇದೀಗ ಮತ್ತೊಂದು ಸೇರ್ಪಡೆಯಾಗಿದೆ. ಇಷ್ಟು ದಿನ ಟರ್ಮಿನಲ್ 1 ರಿಂದಲೇ ಪ್ರಯಾಣಿಕರು ಬಿಎಂಟಿಸಿ (BMTC) ವಾಯುವಜ್ರ ಬಸ್ಗಳನ್ನು(Vayu Vajra Bus) ಹಿಡಿದು ಬೆಂಗಳೂರು (Bengaluru) ಕಡೆ ಸಾಗಬೇಕಿತ್ತು. ಆದರೆ ಇದೀಗ ಟರ್ಮಿನಲ್ 2 ರಲ್ಲೆ (Airport Terminal 2) ಹೈಟೆಕ್ ಬಸ್ ನಿಲ್ದಾಣ ನಿರ್ಮಾಣವಾಗಿದ್ದು ಇಂದು ಉದ್ಘಾಟನೆಯಾಗಿದೆ.
ಟರ್ಮಿನ್ಲ್ 2 ರಲ್ಲಿ ನಿರ್ಮಿಸಿದಂತೆ ಬಿದರಿನಿಂದ ವಿನ್ಯಾಸವಾಗಿರೋ ಒಳಾಂಗಣ ನೋಟ. ಅತ್ಯಾಧುನಿಕ ಹೈಟೆಕ್ ಸ್ಪರ್ಶ ಒಳಗೊಂಡಿರುವ ಪ್ರಯಾಣಿಕರ ಲಾಂಜ್. ನಗರದ ವಿವಿಧ ಭಾಗಗಳಿಗೆ ತೆರಳುವ ಪ್ರಯಾಣಿಕರಿಗೆ ಸಹಯವಾಣಿ ಕೇಂದ್ರ ಹೌದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ಇಂದಿನಿಂದ ಹೈಟೆಕ್ ಬಸ್ ನಿಲ್ದಾಣ ಪ್ರಯಾಣಿಕರಿಗೆ ಲಭ್ಯವಾಗಿದೆ.
ಇದನ್ನೂ ಓದಿ:
Chikkaballapura: ವಿದ್ಯಾರ್ಥಿಯೊಂದಿಗೆ ಟೀಚರ್ ರೊಮ್ಯಾಟಿಂಕ್ ಫೋಟೋಶೂಟ್, ಕಿಸ್ ಆಂಡ್ ಹಗ್ ಫೋಟೋಸ್ ವೈರಲ್
ಝರಿ ಸೀರೆಯಲ್ಲಿ ರಶ್ಮಿಕಾ ಹೇಗೆ ಕಾಣ್ತಾರೆ ನೋಡಿ!
ಇಂದಿನಿಂದ ಪ್ರಯಾಣಿಕರು ಬಳಕೆ
ಅಂದಹಾಗೆ ಕೊಟ್ಯಾಂತರ ರೂಪಾಯಿ ವ್ಯಯಿಸಿ ನಿರ್ಮಿಸಲಾಗಿರುವ ಟರ್ಮಿನಲ್ 2ರ ಬಿಎಂಟಿಸಿ ಬಸ್ ನಿಲ್ದಾಣವನ್ನ ಇಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಹಾಗೂ ಸಚಿವ ಕೆಹೆಚ್ ಮುನಿಯಪ್ಪ ಉದ್ಘಾಟಿಸಿದರು. ಅಂದಹಾಗೆ ವಿಮಾನ ನಿಲ್ದಾಣದ ಬೆಸ್ಮೆಂಟ್ 1 ರಲ್ಲಿ ಈ ಹೈಟೆಕ್ ಬಸ್ ನಿಲ್ದಾಣ ತಲೆ ಎತ್ತಿದ್ದು ಅತ್ಯಾಧುನಿಕ ಸ್ಪರ್ಶದಿಂದ ಎಲ್ಲರ ಗಮನ ಸೆಳೆದಿದೆ. ಮೂಲಭೂತ ಸೌಲಭ್ಯ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಪ್ರಯಾಣಿಕರ ವೈಟಿಂಗ್ ಲಾಂಜ್ ಸೇರಿದಂತೆ ಲಿಪ್ಟ್ ವ್ಯವಸ್ಥೆಯನ್ನ ಮಾಡಲಾಗಿದ್ದು, ಇಂದಿನಿಂದ ಪ್ರಯಾಣಿಕರು ಬಳಸಬಹುದಾಗಿದೆ.
ಸಹಾಯವಾಣಿ ಕೇಂದ್ರ ಸೇರಿದಂತೆ ಅತ್ಯಾಧುನಿಕ ಸೌಲಭ್ಯ
ಇನ್ನೂ ಹೈಟೆಕ್ ಬಸ್ ನಿಲ್ದಾಣ ಉದ್ಘಾಟಿಸಿದ ರಾಮಲಿಂಗರೆಡ್ಡಿ 14 ಸಾವಿರ ಪ್ರಯಾಣಿಕರು ದಿನನಿತ್ಯ ಬಸ್ ಸೇವೆಯನ್ನ ಬಳಸಿಕೊಳ್ಳಬಹುದು ಎಂದಿದ್ದಾರೆ. ಜೊತೆಗೆ ಇಂದಿರಾ ಕ್ಯಾಂಟಿನ್ಗೂ ಕೂಡ ನಾವು ಏರ್ಪೋಟ್ನಲ್ಲಿ ಜಾಗ ಗುರುತಿಸಿದ್ದೇವೆ ಅಂತಾ ಸಚಿವರು ತಿಳಿಸಿದ್ದಾರೆ. ಅಂದಹಾಗೆ ಬಿಎಂಟಿಸಿ ವಾಯುವಜ್ರ ಹಾಗೂ ಕೆಎಸ್ಆರ್ಟಿಸಿಯ ಪ್ಲೈ ಬಸ್ ನಿಲ್ದಾಣ ಇದಾಗಿದ್ದು ಸಹಾಯವಾಣಿ ಕೇಂದ್ರ ಸೇರಿದಂತೆ ಅತ್ಯಾಧುನಿಕ ಸೌಲಭ್ಯ ಈ ಬಸ್ ನಿಲ್ದಾಣ ಹೊಂದಿದೆ.
ಮೈಸೂರು, ಮಡಿಕೇರಿ ಹಾಗೂ ಕುಂದಾಪುರಕ್ಕೆ ಬಸ್
ಪ್ರತಿನಿತ್ಯ ಬೆಂಗಳೂರಿನ ವಿವಿದೆಡೆಗೆ ಬಿಎಂಟಿಸಿ ವಾಯು ವಜ್ರ ಬಸ್ಗಳು ಇದೇ ನಿಲ್ದಾಣದಿಂದ ಆಪರೇಟ್ ಹಾಗುತ್ತೆ. ಅದರಲ್ಲೂ ಒಂದು ದಿನಕ್ಕೆ 137 ಷೆಡ್ಯುಲ್ಗಳಿದ್ದು ವಿಮಾನ ನಿಲ್ದಾಣಕ್ಕೆ ಬರುವ ಮತ್ತು ಹೋಗುವ ಬಿಎಂಟಿಸಿ ಬಸ್ ಗಳಿಗೆ 940 ಟ್ರಿಪ್ಗಳು ಓಡುತ್ತೆ. ಜೊತೆಗೆ ಪ್ಲೈ ಬಸ್ಗಳು ಕೂಡ ಹೈಟೆಕ್ ಬಸ್ ನಿಲ್ದಾಣದಲ್ಲಿ ಲಭ್ಯವಿದ್ದು, ಮೈಸೂರಿಗೆ 20 ಟ್ರಿಪ್ , ಮಡಿಕೇರಿಗೆ ಎರಡು ಟ್ರಿಪ್ ಹಾಗೂ ಮಂಗಳೂರು ಕುಂದಾಪುರಕ್ಕೆ ಎರಡು ಟ್ರಿಪ್ಗಳು ಪ್ರತಿದಿನ ಆಪರೇಟ್ ಆಗಲಿದೆ.
ಹೈಟೆಕ್ ಸ್ಪರ್ಶದ ಬಸ್ ನಿಲ್ದಾಣ ಸೌಲಭ್ಯ
ಸುಮಾರು 18 ಪ್ಲಾಟ್ಪಾರಂಗಳಿದ್ದು 40 ಸಿಬ್ಬಂದಿಗಳು ಪ್ರಯಾಣಿಕರಿಗೆ ಸಹಕಾರಿಯಾಗಲು ನಿಯೋಜಿಸಲಾಗಿದೆ. ಇನ್ನೂ ನಿತ್ಯ ಸಾವಿರಾರು ಜನ ಪ್ರಯಾಣಿಕರಿಗೆ ಈ ಬಸ್ ನಿಲ್ದಾಣ ಅನುಕೂಲವಾಗಲಿದ್ದು ಗಾರ್ಡನ್ ಟರ್ಮಿನಲ್ ನಂತೆ ವಿಶೇಷತೆಯುಳ್ಳ ನಿಲ್ದಾಣ ಪ್ರಯಾಣಿಕರಿಗೆ ಮುದ ನೀಡಲಿದೆ. ಒಟ್ಟಾರೇ ಟರ್ಮಿನಲ್ 2 ರಲ್ಲಿ ಇಷ್ಟು ದಿನ ಪ್ರಯಾಣಿಕರು ಬಸ್ಗಳನ್ನ ಹಿಡಿಯಬೇಕೆಂದ್ರೆ ಷೆಟಲ್ ಬಸ್ಗಳು ಹತ್ತಿ ಟರ್ಮಿನಲ್ 1 ಕ್ಕೆ ಸಾಗಬೇಕಿತ್ತು. ಆದರೆ ಇದೀಗ ಟರ್ಮಿನಲ್ 2 ರ ಬೆಸ್ಮೆಂಟ್ 1 ರಲ್ಲಿ ಇದೀಗ ಹೈಟೆಕ್ ಬಿಎಂಟಿಸಿ ಬಸ್ ನಿರ್ಮಾಣವಾಗಿ ಪ್ರಯಾಣಿಕರಿಗೆ ಲಭ್ಯವಾಗಿದ್ದು, ಗಾರ್ಡನ್ ಟರ್ಮಿನಲ್ 2 ಕ್ಕೆ ಮತ್ತೊಂದು ಹೈಟೆಕ್ ಸ್ಪರ್ಶದ ಬಸ್ ನಿಲ್ದಾಣವೂ ಸಿಕ್ಕಂತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ