Download Our App

Follow us

Home » ಅಪರಾಧ » ಊಟದಲ್ಲಿ ಜಿರಳೆ ಸಿಕ್ಕ ಪ್ರಕರಣ : ಕ್ಯಾಪಿಟಲ್​ ಹೋಟೆಲ್ ಸಿಬ್ಬಂದಿ​​ ವಿರುದ್ಧ FIR..!

ಊಟದಲ್ಲಿ ಜಿರಳೆ ಸಿಕ್ಕ ಪ್ರಕರಣ : ಕ್ಯಾಪಿಟಲ್​ ಹೋಟೆಲ್ ಸಿಬ್ಬಂದಿ​​ ವಿರುದ್ಧ FIR..!

ಬೆಂಗಳೂರು : ಕ್ಯಾಪಿಟಲ್​​​​ ಹೋಟೆಲ್​ನ ಊಟದಲ್ಲಿ ಜಿರಳೆ ಪತ್ತೆಯಾಗಿತ್ತು. ಈ ಪ್ರಕರಣ ಸಂಬಂಧ ಕ್ಯಾಪಿಟಲ್​ ಹೋಟೆಲ್ ಸಿಬ್ಬಂದಿ​​ ವಿರುದ್ಧ FIR ದಾಖಲಾಗಿದೆ. ಈ ಬಗ್ಗೆ ವಕೀಲೆ ವಿದಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಹಾಗಾಗಿ IPC ಸೆಕ್ಷನ್ 506, 341, 34, 504, 352 ಅಡಿ ಪ್ರಕರಣ ದಾಖಲಾಗಿದೆ. ಈ ವೇಳೆ ಹೋಟೆಲ್​ನ​​​ ವಿಡಿಯೋ ಮಾಡುವಾಗ ನಿಂದಿಸಿದ ಆರೋಪ ಕೂಡ ವ್ಯಕ್ತವಾಗಿದೆ. ಹೋಟೆಲ್​ನ ಮೂವರು ಸಿಬ್ಬಂದಿ ಅವಾಚ್ಯ ಪದ ಬಳಸಿದ್ದಾರೆ ಎಂದು ದೂರು ದಾಖಲಾಗಿದೆ.

ಪ್ರಾಣ ಬೆದರಿಕೆ ಹಾಕಿದ್ದಾರೆಂದು ವಕೀಲೆ ಶೀಲಾ ಅವರು ದೂರು ನೀಡಿದ್ದಾರೆ. ಪೊಲೀಸರು ಕೇಸ್​ ದಾಖಲಿಸಿ ಸ್ಥಳ ಮಹಜರು ಮಾಡಿದ್ದು, ಇದು ರಾಜಕಾರಣಿಗಳು, ಜಡ್ಜ್​​ಗಳು, ವಕೀಲರು ಊಟ ಮಾಡೋ ಹೋಟೆಲ್​​ ಆಗಿದೆ.

ಸಿರಿವಂತರು ಪ್ರತಿದಿನ ಲಂಚ್​, ಡಿನ್ನರ್​ ಮಾಡೋ ಪ್ರತಿಷ್ಠಿತ ಹೋಟೆಲ್​​​​ ಇದ್ದಾಗಿದ್ದು, ಕ್ಯಾಪಿಟಲ್​ ಹೋಟೆಲ್​ನ ಪನ್ನೀರ್​​ ಬಟರ್​ ಮಸಾಲದಲ್ಲಿ ಜಿರಳೆ ಸಿಕ್ಕಿತ್ತು. ಶೀಲಾ ದೀಪಕ್ ಅವರು​​ ನಿನ್ನೆ ಹೋಟೆಲ್​​ಗೆ ಊಟಕ್ಕಾಗಿ ಹೋಗಿದ್ದರು.

ಇದನ್ನೂ ಓದಿ : ಮದುವೆ ಮಂಟಪಕ್ಕೆ ನುಗ್ಗಿ ಹಳೆ ಪ್ರೇಯಸಿ ಗಲಾಟೆ..

Btv Kannada1
Author: Btv Kannada1

Leave a Comment

RELATED LATEST NEWS