ಬೆಂಗಳೂರು: ಮೆಟ್ರೋ ರೈಲಿನ ಮುಂದೆ ಜಿಗಿದು ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಹಸಿರು ಮಾರ್ಗದ ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಘಟನೆ ನಡೆದಿದೆ. ಮೆಟ್ರೋ ಸಿಬ್ಬಂದಿಯು ತಕ್ಷಣವೇ ನೆರವಿಗೆ ಧಾವಿಸಿ ಬಂದಿದ್ದಾರೆ. ಹಾರಿದ ರಭಸಕ್ಕೆ ಯುವಕನಿಗೆ ಸಣ್ಣ-ಪುಟ್ಟ ಗಾಯಗೊಂಡಿದ್ದಾರೆ.
ನಿಲ್ದಾಣದ ಪ್ಲಾಟ್ ಫಾರ್ಮ್ ನ ಕೊನೆಯಲ್ಲಿ ನಿಂತಿದ್ದ 22 ವರ್ಷದ ಯುವಕ ಬರುತ್ತಿದ್ದ ರೈಲಿನ ಮುಂದೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಎಚ್ಚೆತ್ತುಕೊಂಡ ಬಿಎಂಆರ್ ಸಿಎಲ್ ಸಿಬ್ಬಂದಿ ಆತನ್ನು ರಕ್ಷಿಸಿ, ಸಮೀಪದ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ರೈಲು ಸಂಚಾರ ರಾತ್ರಿ 8ಗಂಟೆ ನಂತರ ಯಥಾ ಸ್ಥಿತಿಗೆ ಮರಳಿದೆ. BMRCL ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾಹಿತಿ ನೀಡಿದ್ದಾರೆ. ಕಳೆದ ವಾರವೂ ಮಹಿಳೆ ಹಳಿ ಮೇಲೆ ಹಾರಿದ್ದಳು.
ಇದನ್ನೂ ಓದಿ : ಉಡುಪಿಯ ಗಣೇಶ್ ಪ್ರಸಾದ್ ಶೆಟ್ಟಿಗೆ ದಾದಾ ಲೇಖಕ್ ರಾಜ್ ಪ್ರಶಸ್ತಿ..!
Author: Btv Kannada1
Post Views: 1,480