ಚಿಕ್ಕಮಗಳೂರು : ದತ್ತಪೀಠ ವಿವಾದ ಮತ್ತೆ ಭುಗಿಲೆದ್ದಿದೆ.ದತ್ತಪೀಠ ಹೋರಾಟಗಾರರ ಮೇಲಿನ ಕೇಸ್ ರೀ-ಓಪನ್ ಮಾಡಲಾಗಿದೆ.
ಹುಬ್ಬಳ್ಳಿ ಕರಸೇವಕರ ಕೇಸ್ ರೀಓಪನ್ ಬೆನ್ನಲ್ಲೇ ದತ್ತಪೀಠ ವಿವಾದ ಕೇಸ್ ರೀ-ಓಪನ್ ಮಾಡಿದ್ದು, ರಾಜ್ಯ ಸರ್ಕಾರದ ನಿರ್ಧಾರಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
2017ರಲ್ಲಿ ದತ್ತಪೀಠದಲ್ಲಿ ಗೋರಿ ಒಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ 14 ಜನರ ಮೇಲಿನ ಕೇಸ್ ರೀ ಓಪನ್ ಮಾಡಲಾಗಿದೆ.
7 ವರ್ಷದ ಬಳಿಕ ಸರ್ಕಾರ ಮತ್ತೆ ಕೇಸ್ ರೀ ಓಪನ್ ಮಾಡಿದೆ. ಬಿಜೆಪಿ ಸರ್ಕಾರದಲ್ಲಿ ಗೋರಿ ಕೇಸ್ ಕ್ಲೋಸ್ ಆಗಿತ್ತು.
ತುಡುಕೂರು ಮಂಜು, ಶಿವರಾಜ್, ಸಂದೇಶ್, ಸುಮಂತ್, ನಾಗೇಂದ್ರ ಪೂಜಾರಿ, ಮೋಹನ್, ಅಶೋಕ್, ತೇಜು, ಶ್ರೀನಾಥ್,
ಲೋಕೇಶ್, ಮಹೇಂದ್ರ, ಸಂದೀಪ್ ರಾಮು ಮೇಲಿನ ಕೇಸ್ ರೀ ಓಪನ್ ಮಾಡಲಾಗಿದೆ.
8ನೇ ತಾರೀಖು ಕೋರ್ಟ್ಗೆ ಹಾಜರಾಗುವಂತೆ ಸೂಚನೆ ನೀಡಿದೆ.
ಇದನ್ನೂ ಓದಿ : ಗುಂಡು ಹಾರಿಸಿಕೊಂಡು ವಿದ್ಯಾರ್ಥಿ ಆತ್ಮ*ಹತ್ಯೆ..!
Author: Btv Kannada1
Post Views: 52