ಮಂಗಳೂರು : ಮದುವೆ ನಡೆಯುವಾಗಲೇ ಕಲ್ಯಾಣ ಮಂಟಪಕ್ಕೆ ಬಂದು ಹಳೆ ಪ್ರೇಯಸಿ ಗಲಾಟೆ ಮಾಡಿದ್ದಾಳೆ. ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ತಾಲೂಕಿನ ಬೀರಿ ಬಳಿ ನಡೆದಿದೆ.
ಕೇರಳ ಮೂಲದ ಅಕ್ಷಯ್ ಎಂಬಾತನ ಮದುವೆ ಮಂಗಳೂರು ಮೂಲದ ಯುವತಿ ಜೊತೆ ನಡೆಯುತ್ತಿದ್ದಾಗ ಮೈಸೂರು ಮೂಲದ ಮಾಜಿ ಪ್ರೇಯಸಿ ಕಲ್ಯಾಣ ಮಂಟಪಕ್ಕೆ ಉಳ್ಳಾಲ ಪೊಲೀಸರ ಜತೆಯೇ ಎಂಟ್ರಿಕೊಟ್ಟು ಗಲಾಟೆ ಮಾಡಿದ್ದಾಳೆ.
ಅಕ್ಷಯ್ ಒಂದೂವರೆ ವರ್ಷದ ಹಿಂದೆ ಮೈಸೂರು ಯುವತಿಗೆ ಶಾದಿ ಡಾಟ್ ಕಾಮ್ ಮೂಲಕ ಪರಿಚಯವಾಗಿದ್ದ. ಮದ್ವೆ ಆಗ್ತೀನಿ ಅಂತಾ ಆಕೆ ಜತೆ ದೈಹಿಕ ಸಂಪರ್ಕ ಬೆಳೆಸಿದ್ದ ಆರೋಪ ಮಾಡಲಾಗಿತ್ತು. ಯುವತಿ ಈ ಬಗ್ಗೆ ಕೇರಳ ಠಾಣೆಯಲ್ಲಿ ಡಿಸೆಂಬರ್ 26ರಂದು ರೇಪ್ ದೂರು ದಾಖಲು ಮಾಡಿದ್ದಾಳೆ. ಆರೋಪಿ ಅಕ್ಷಯ್ಗೆ ನಿರೀಕ್ಷಣಾ ಬೇಲ್ ವಜಾ ಆಗಿತ್ತು.
ಈ ಮಧ್ಯೆ ಅಕ್ಷಯ್ ಮಂಗಳೂರು ಯುವತಿ ಜತೆ ಮದುವೆ ಆಗುತ್ತಿದ್ದ, ವಿಷಯ ತಿಳಿದ ಮೈಸೂರು ಯುವತಿ ಕಲ್ಯಾಣ ಮಂಟಪಕ್ಕೆ ನುಗ್ಗಿ ಗಲಾಟೆ ಮಾಡಿದ್ದಾಳೆ.
ಇದನ್ನೂ ಓದಿ : ಮಲ್ಲೇಶ್ವರಂ ಠಾಣೆ ಎದುರು ಸುರೇಶ್ಕುಮಾರ್ ಧರಣಿ..
Author: Btv Kannada1
Post Views: 6,014